ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ “ಡ್ರೋನ್ ಪದ್ಧತಿ ಪ್ರಾತ್ಯಾಕ್ಷಿಕೆಯನ್ನು ಹಮ್ಮಿಕೊಂಡಿದ್ದರು.

ಕೃಷಿ ಚಟುವಟಿಕಗಳು ಆಧುನಿಕರಣಗೊಳ್ಳುತ್ತಿರುವ . ಈ ಕಾಲದಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡನೆ ರೈತರಿಗೆ ಪರಿಚಯವಾಗಬೇಕಿದೆ . ಹಾಗಾಗಿ ಕೃಷಿ ವಿಜ್ಞಾನ ಕೇಂದ್ರ ಕಂದಲಿ , ಅವರ ನೇತೃತ್ವದಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಿಸುವುದನ್ನು ರೈತರಿಗೆ ಪರಿಚಯಿಸಿದರು.

ಈ ಪ್ರತ್ಯಾಕ್ಷಿ ಕೆಗೆ ಮುಖ್ಯ ಅತಿಥಿಗಳಾಗಿ ಡಾ ಶ್ರೀನಿವಾಸ ದೇಶಪಾಂಡೆ ಕೃಷಿ ವಿಜ್ಞಾನಿ , ಕೃಷಿ ವಿಜ್ಞಾನ ಕೇಂದ್ರ ಇವರು ಆಗಮಿಸಿ , ಮಾಹಿತಿ ನೀಡುವುದರ ಜೊತೆಗೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *