ಆಲೂರು : ರಾಜ್ಯ ಮಟ್ಟದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಹೆಚ್, ಪಿ ಮೋಹನ್ ರವರಿಗೆ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ವಿವಿಧ ಸಂಘ, ಸಂಸ್ಥೆಗಳಿಂದ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,

ಕಾರ್ಯಕ್ರಮವನ್ನು ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ರೇಣುಕಪ್ರಸಾದ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು

ನಂತರ ಮಾತಾನಾಡಿದವರು ಹೆಮ್ಮಿಗೆ ಗ್ರಾಮದ ಗಡಿನಾಡ ಗಾಂಧಿ ಸಿದ್ದಪ್ಪನವರ ಮೊಮ್ಮಗ ಜಯಮ್ಮ ಪುಟ್ಟಸ್ವಾಮಿಗೌಡರ ಮಗನಾಗಿ 1955 ಮೇ 2 ರಂದು ಜನುಮ ಪಡೆಯುತ್ತಾರೆ ತಂದೆ ಎಂ ಸ್ ಸಿ ಕೃಷಿ ಪದವಿ ಪಡೆದು ತಾಯಿ ಜಯಮ್ಮ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು ಮೋಹನ್ ರವರ ಕೂಡ msc ಕೃಷಿ ಪದವಿದರರಾಗಿದ್ದು ಅವರ ಸೇವೆಯನ್ನು ನೋಡುವುದಾದರೆ ಕಾಫಿ ಮಂಡಳಿ ನಿರ್ದೇಶಕರಾಗಿ,ಮಲೆನಾಡು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರಾಗಿ, ತಾ / ಒಕ್ಕಲಿಗ ಸಂಘದ ಅಧ್ಯಕ್ಷರಾಗಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆಪರಿಸರ ಪ್ರೇಮಿಗಳು ಅಜಾತ ಶತ್ರು, ಪಕ್ಷತೀತಾವಾಗಿ, ಜಾತ್ಯತೀತವಾಗಿ, ಯಾವುದೇ ಆರೋಪಗಳಿಲ್ಲದೇ ರಾಜಕೀಯ ಮತ್ತು ಸಹಕಾರಿಕ್ಷೇತ್ರದಲ್ಲಿ ಗುರುತಿಸಿಕೊಂಡವರು ಹಾಗೂ ರೆಡ್ ಕ್ರಾಸ್ ಮತ್ತು ಲಯನ್ಸ್ ಕ್ಲಬ್, ಹೆಚ್ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರುಹೆಚ್ಚು ಅವಧಿಯ ಸಹಕಾರ ಕ್ಷೇತ್ರದಲ್ಲಿನ ಸೇವೆ ಹಾಗೂ ಸೇವಾ ಸಹಕಾರಿ ಬ್ಯಾಂಕ್‌ನ ಸಮಗ್ರ ಪ್ರಗತಿಯನ್ನು ಪರಿಗಣಿಸಿ ರಾಜ್ಯ ಸರಕಾರ “ಸಹಕಾರ ರತ್ನ’ ಪ್ರಶಸ್ತಿ ನೀಡಿರುವುದು ನಮಗೆ ಹೆಮ್ಮೆಯ ವಿಷಯವೆಂದರು.

ನಂತರ ಸನ್ಮಾನ ಸ್ವೀಕರಿಸಿ ಮಾತಾನಾಡಿದ ಹೆಚ್ ಪಿ ಮೋಹನ್ ರವರು ನನ್ನ ನಿರೀಕ್ಷೆಗೂ ಮೀರಿದ ಕಲ್ಪನೆಗೂ ಮೀರಿದ, ಅರ್ಹತೆ ಮೀರಿದ ಗೌರವಯೆಂದರೆ ಸಾಲದು ನಾನು ಪ್ರೀತಿ ಎಂಬ ಸಾಲವನ್ನು ನಾನು ಮಾಡಿದ್ದು ನನ್ನ ಜೀವ ಇರುವವರೆಗೂ ಈ ಸಾಲವನ್ನು ಮತ್ತು ಸಾಲದ ಬಡ್ಡಿಯನ್ನು ತೀರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ನನ್ನದು ಈ ದಿನದ ಕಾರ್ಯಕ್ರಮವನ್ನು ನೋಡಿದರೆ ನಾನು ಈ ತಾಲ್ಲೂಕಿನಲ್ಲಿ ಹುಟ್ಟಿರುವುದೇ ಪುಣ್ಯ ಎಂದು ಸ್ಮರಿಸದರು ನಮ್ಮ ಸಹಕಾರ ಸಚಿವರು ನಾನು dcc ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಅವರು ಬ್ಯಾಂಕ್ ಅಧ್ಯಕ್ಷರಾಗಿದ್ದರು ಆಗಿನಿಂದ ನನ್ನ ಸಹಕಾರ ಕ್ಷೇತ್ರದ ಸೇವೆಯನ್ನು ಗುರುತಿಸಿ ನನಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದರು,

ಈ ಪ್ರಶಸ್ತಿ ಗೌರವ ಈ ತಾಲ್ಲೂಕಿನ ಮತ್ತು ಜಿಲ್ಲೆಯ ಜನತೆಗೆ ಸಲ್ಲಬೇಕೆಂದು ತಿಳಿಸಿದರು,ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕಣದಹಳ್ಳಿ ಮಂಜೇಗೌಡ ಮಾತಾನಾಡಿ ಸಹಕಾರ ಕ್ಷೇತ್ರದಲ್ಲಿ ಹೆಚ್, ಪಿ ಮೋಹನ್ ರವರ ಸಾಧನೆ ಅವಿಸ್ಮರಣೀಯ ಅವರು ಈ ಕಠಿಣ ಪರಿಶ್ರಮ,ನಿಷ್ಠೆ,ಪ್ರಾಮಾಣಿಕತೆಗೆ ದೊರೆತ ಪ್ರಶಸ್ತಿ ನಮಗೆ ಹಾಗೂ ತಾಲ್ಲೂಕಿನ ಜನತೆಗೆ ಸಂತಸ ತಂದಿದೆ ಎಂದು ಶುಭ ಹಾರೈಸಿದರು,

ಕಾರ್ಯಕ್ರಮದಲ್ಲಿ ಕಬ್ಬಿನಹಳ್ಳಿ ಜಗದೀಶ್, ಕೆ ಎಸ್ ಮಂಜೇಗೌಡ, ಶಾಂತಕೃಷ್ಣ, ಶಿವಮೂರ್ತಿ ಬಿ,ಸಿ ಶಂಕರಾಚಾರ್ಯ, ರೇಣುಕಾ ಪ್ರಸಾದ್, ಜಯಣ್ಣ, ರಂಗನಾಥ್, ಬಿ ಕೆ ಲಿಂಗಾರಾಜು, ಪಿ, ಲ್ ನಿಂಗರಾಜು, ಸಿ,ವಿ ಲಿಂಗಾರಾಜು, ಅಜ್ಜೆಗೌಡ ಹಾಗೂ ವಿವಿಧ ಸಂಘ ಸಂಸ್ಥೆ ಮುಖ್ಯ ಅಧ್ಯಕ್ಷರು ಹಾಗೂ ಮುಖಂಡರುಗಳಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *