ಹಾಸನ : ಪೂಜಿಸುವ ಶ್ರೀರಾಮನ ಕುರಿತು ಕೆಲವರು ಪ್ರಶ್ನೆ ಮಾಡುವವರಿದ್ದಾರೆ. ಇನ್ನು ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು ಎಂದು ಮನೆಗೆ ಶ್ರೀ ರಾಮನ ಭಾವಚಿತ್ರ ಹಾಗೂ ಮಂತ್ರಾಕ್ಷತೆ ನೀಡುವ ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು.

ನಗರದ ಮಹಾರಾಜ ಪಾರ್ಕ್ ಬಳಿ ಇರುವ ಶ್ರಿ ಸೀತಾರಾಮಾಂಜನೇಯ ದೇವಾಲಯದಲ್ಲಿ ಜನವರಿ ೨೨ ರಂದು ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಗೊಳ್ಳುವ ಹಿನ್ನೆಲೆಯಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮನೆ ಮನೆಗೆ ಪ್ರಭು ಶ್ರೀ ರಾಮನ ಭಾವಚಿತ್ರ ಹಾಗೂ ಮಂತ್ರಾಕ್ಷತೆ ನೀಡುವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ನಂತರ ಮುಖ್ಯ ಭಾಷಣದಲ್ಲಿ ಮಾತನಾಡಿದ ಅವರು,

ಶ್ರೀರಾಮನ ಕುರಿತು ಪ್ರಶ್ನೆ ಮಾಡುವರಿದ್ದಾರೆ. ಆಗೆ ಮಾಡುತ್ತಾರೆ. ಶ್ರೀರಾಮ ಅಂದರೆ ಸತ್ಯ ನಾಯ ಧರ್ಮ. ಈ ದೇಶದ ಸತ್ವ ಒಳ್ಳೆಯ ಮಗ. ಪ್ರೀತಿಯ ಮಿತ್ರ, ಶ್ರೇಷ್ಠ ರಾಜ, ಶ್ರೇಷ್ಠ ಶತ್ರು. ಶ್ರೀರಾಮ ಹುಟ್ಟಿದ ದಿನಾಂಕದ ಬಗ್ಗೆ ದಾಕಲೆಗಳಿಲ್ಲ. ೨೦ ಸಾವಿರ ವರ್ಷಗಳ ಹಿಂದೆ ಜನ್ಮ ಪಡೆದಿರಬಹುದು. ಆದರೆ ೧೦ ಸಾವಿರ ವರ್ಷಗಳ ಹಿಂದೆ ಶ್ರೀರಾಮ ಜನಿಸಿದರು. ಇಂದಿಗೂ ಶ್ರೀರಾಮ ನತರಹ ಈರಬೇಕು ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದರು.

ಕೀಳು ಮಟ್ಟದ ಬಾಬರ್ ನಮ್ಮ ದೇಶವನ್ನು ಆಕ್ರಮಣ ಮಾಡಿ, ಸಾವಿರಾರು ಜನರು ಬರುವ ಶ್ರೀರಾಮನ ದೇವಸ್ಥಾನ ನೋಡಿದ್ದ. ಬಾಬರ್ ದೇವಸ್ಥಾನ ತೆರವುಗೊಳಿಸಲು ಸೈನಿಕರಿಗೆ ಸೂಚನೆ ನೀಡಿದ ಪರಿಣಾಮ ಯುದ್ದ ನಡೆದು ೩ ರಿಂದ ೪ ಲಕ್ಷ ಜನ ಹಿಂದೂಗಳು ಸಾವನ್ನಪ್ಪಿದರು. ಹಿಂದೂ ವಿರೋದಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ಸರ್ಧಾರ್ ವಲ್ಲಬಾಯಿ ಪಟೇಲ್ ಮಸೀದಿ ತೆರವುಗೊಳಿಸಿದರು.

ಸೋಮನಾಥ ದೇವಸ್ಥಾನ ನಿರ್ಮಾಣ ಮಾಡಲು ನೆಹರು ಅನುಮತಿ ನೀಡಲಿಲ್ಲ. ಆದರೂ ಪಟೇಲರು ದೇವಾಲಯ ನಿರ್ಮಾಣ ಮಾಡಿದರು. ಮುಸ್ಲಿಂ ಸಮುದಾಯದ ರಾಜರು ಸುಮಾರು ೩೩ ಸಾವಿರ ಹಿಂದೂ ದೇವಾಲಯ ನಾಶ ಮಾಡಿದ್ದಾರೆ. ನಾವು ಹೊಡೆದಿದ್ದು ಕೇವಲ ೩ ಮಸೀದಿ. ರಾಮಮಂದಿರ ನಿರ್ಮಾಣ ಮಾಡಲು ಆ ವೇಳೆ ರಾಜೀವ್ ಗಾಂಧಿ ವಿರೋಧ ಮಾಡಿದರು. ೧೯೮೯ ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದವು. ಎಲ್ಲಿಯೂ ರಾಮ ಭಕ್ತರು ರಾಮಮಂದಿರ ತಲುಪದಂತೆ ಅಂದಿನ ಸರ್ಕಾರಗಳು ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜನೆ ಮಾಡಿದರು ಹಾಗೂ ಮುಲಾಯಂ ಸಿಂಗ್ ಯಾದವ್ ಗುಂಡು ಹಾರಿಸಲು ಸೂಚನೆ ನೀಡಿದರು.

ಆದ ಕಾರಣ ನಾವೆಲ್ಲರೂ ಯಾವುದೇ ಗುಂಪಿನ ಮೂಲಕ ಹಾಗೂ ಭಜನೆ ಮಾಡದಂತೆ ಒಂದೆ ಬೋಗಿಯಲ್ಲಿ ಸಂಚಾರ ಮಾಡದಂತೆ ವಿಶ್ವ ಹಿಂದೂ ಪರಿಷತ್ತು ಹಿರಿಯರು ಸೂಚನೆ ನೀಡಿದರು. ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು. ಅಖಂಡ ಭಾರತ ಶ್ರೇಷ್ಠ ಭಾರತ ಎಂಬ ಕಲ್ಪನೆಯಡಿ ವಿಭಜನೆಯಾಗಿರುವ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೆವೆ ಎಂದು ಹೇಳಿದರು.

ಈ ದೇಶದಲ್ಲಿ ರಾಮಮಂದಿರ ನಿರ್ಮಾಣವಾದರೆ ರಾಮರಾಜ್ಯ ನಿರ್ಮಾಣವಾಗುತ್ತದೆ. ರಾಮರಾಜ್ಯ ನಿರ್ಮಾಣವಾದರೆ ಈ ದೇಶದಲ್ಲಿ ದಿನನಿತ್ಯ ನಡೆಯುವ ಜಗಳ, ಮತಾಂತರ ಭಯೋತ್ಪಾದನೆ ನಿಂತುಹೋಗಲಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಹಿಂದೂಗಳು ಒಂದಾಗಿದ್ದಾರೆ ಎಂಬ ಕಾರಣದಿಂದ ನಮ್ಮ ಪರವಾಗಿ ತೀರ್ಪು ನೀಡುತ್ತಿವೆ. ಹಿಂದೂ ಸಮಾಜ ಷಂಡ, ಹೇಢಿ ಸಮಾಜ ಎನ್ನುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ಹಿಂದೂಗಳೆಲ್ಲ ಒಂದಾಗಿದ್ದೆವೆ ಆ ಕಾರಣಗಳಿಗಾಗಿ ರಾಮಮಂದಿರ ನಿರ್ಮಾಣವಾಯಿತು. ಮತಗಳಿಕೆಗೆ ಕಾರಣ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕೂಡ ನಾನು ಹಿಂದೂ ಅನ್ನುತ್ತಾರೆ ಆದರೆ ನಾವು ಆರ್ ಎಸ್.ಎಸ್. ಹಿಂದೂಗಳಲ್ಲ ಎನ್ನುತ್ತಾರೆ. ನಮ್ಮಲ್ಲಿ ಆರ್.ಎಸ್.ಎಸ್. ಹಿಂದೂ ಬೇರೆ ಹಿಂದೂ ಎಂಬುದಿಲ್ಲ ಟೀಕಗಾರರಿಗೆ ಟಾಂಗ್ ನೀಡಿದರು.

ಮುಸ್ಲಿಂರಿಗೆ ೬೦ ದೇಶ ಕ್ರಿಶ್ಚಿಯನ್ ಗರಿಗೆ ೭೦ ದೇಶಗಳಿವೆ. ಆದರೆ ಹಿಂದೂಗಳಿಗೆ ಇರುವುದು ಒಂದೇ ದೇಶ. ಗಾಜಾ ಪಟ್ಟಿ ವಶಪಡಿಸಿಕೊಳ್ಳಲು ಇಸ್ರೇಲ್-ಪ್ಯಾಲೆಸ್ಟೈನ್ ಯುದ್ದ ನಡೆಯುತ್ತಿದೆ.ಯಹೂದಿಗಳು ಒಂದಾಗಿ ಮುಸ್ಲಿಂ ದೇಶಗಳ ಒಕ್ಕೂಟದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹಿಂದೂ ಅಸ್ತಿತ್ವದ ಪ್ರಶ್ನೆ ಭಾರತ ಎಂದರು. ನಾವು ಶಕ್ತಿ ಶಾಲಿಯಾದರೆ ಹಿಂದೂ ಅನ್ನುತ್ತಾರೆ. ಇಲ್ಲ ಅಂದರೆ ಯಾರು ಹಿಂದೂಗಳಿಗೆ ಯಾರು ಮರ್ಯಾದೆ ಕೊಡಲು ಆಗುವುದಿಲ್ಲ. ಮುಸ್ಲಿಂ ಸಮುದಾಯದ ಸಣ್ಣ ಪೆಟ್ಟಿಗೆ ಅಂಗಡಿ ತೆರೆಯಲು ಸಾಧ್ಯವಾಗುವುದಿಲ್ಲ. ಹಿಂದೂಗಳು ಒಂದಾದ ಕಾರಣ ರಾಮಮಂದಿರ ನಿರ್ಮಾಣ ಮಾಡಿದ್ದು, ಹಿಂದೂ ಧರ್ಮ ಒಗ್ಗಾಡಗಬೇಕು ಎಂದು ಕರೆ ನೀಡಿ ಹಿಂದಿನ ಕೆಲ ಘಟನೆಯನ್ನು ಇದೆ ವೇಳೆ ನೆನಪಿಸಿದರು.

ಕಾರ್ಯಕ್ರಮದ ಉದ್ಘಾಟನೆಗ ಮೊದಲು ಅಂಗವಾಗಿ ಬೈಕ್ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಬೈಕ್ ಯಾತ್ರೆಯು ರೈಲ್ವೆ ನಿಲ್ದಾಣದ ಬಳಿ ಇರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಬಿ.ಎಂ. ರಸ್ತೆ, ಎನ್.ಆರ್ ವೃತ್ತ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಸಹ್ಯಾದ್ರಿ ಚಿತ್ರಮಂದಿರ, ಸಾಯಿಬಾಬಾ ದೇವಸ್ಥಾನ, ಸಾಲಗಾಮೆ ಗೇಟ್ ಸರ್ಕಾರಿ ಕಲಾ ಕಾಲೇಜು ಮಾರ್ಗವಾಗಿ ಎಂ.ಜಿ. ರಸ್ತೆ, ಬಸಟ್ಟಿಕೊಪ್ಪಲು ಮುಖ್ಯ ರಸ್ತೆ, ಸ್ಲೇಟರ್ಸ ಹಾಲ್ ಸರ್ಕಲ್ ಮೂಲಕ ಸೀತಾರಾಮ ಆಂಜನೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿಗೆ ಬೈಕ್ ಯಾತ್ರೆ ಸಂಪೂರ್ಣಗೊಂಡಿತು.

ಇದೆ ವೇಳೆ ಶ್ರೀತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಜಿಲ್ಲಾ ಸಂಯೋಜಕರು ಫಾರಸ್ ಮಲ್, ಸಂಚಾಲಕ ವಿಜಯಕುಮಾರ್ ನಾರ್ವೇ, ಟ್ರಸ್ಟ್ ಬಿಜೆಪಿ ಜಿಲ್ಲಾ ಮಾದ್ಯಮ ಸಂಚಾಲಕ ವಿಜಯ್ ಕುಮಾರ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್. ಶೊಭನ್ ಬಾಬು, ವೇಧವತಿ, ವಿಜಯಲಕ್ಷ್ಮಿ ಅಂಜನಪ್ಪ, ರತ್ನಪ್ರಕಾಶ್, ಪ್ರಣವ್ ಭಾರಧ್ವಜ್, ಮಹಿಪಾಲ್, ನರೇಶ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *