
ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ತಂಗಿರುವ ಅಂತಿಮ ವರ್ಷದ ಕೃಷಿ ಹಾಗೂ ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳು ಅರಣಕೃಷಿ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದ ಗ್ರಾಮದ ರೈತರಿಗೆ ರಾಜ್ಯದ ಅರಣ್ಯ ವಿಸ್ತೀರ್ಣ,ಅರಣ್ಯ ಮರಗಳ ಮಹತ್ವ ಹಾಗೂ ಅವುಗಳ ಉಪಯೋಗ ಬಗ್ಗೆ ಜಾಗೃತಿ ಮೂಡಿಸಿದ್ದರು ವಿವಿಧ ಅರಣ್ಯ ಮರಗಳಾದ ತೇಗ, ರಕ್ತ ಚಂದನ,ಹೆಬ್ಬೆವು, ಬಲಾಂಜಿ ಇತ್ಯಾದಿ ಮರಗಳ ವಿಶಿಷ್ಟ ಗುಣಗಳು,ಅವುಗಳನ್ನು ನೆಡುವ ಅಂತರ ಹಾಗೂ ಬೆಳೆಯುವ ಕ್ರಮದ ಬಗ್ಗೆ ತಿಳಿಸಿದರು.
ಇದಲ್ಲದೆ ಈ ಅರಣ್ಯ ಮರದ ಸಸಿಗಳನ್ನು ಕೊಂಡುಕೊಳ್ಳಲು ಕರ್ನಾಟಕ ಸರ್ಕಾರದ ವೆಬ್ಸೈಟ್(website) ಇ-ಸಸ್ಯ ಕ್ಷೇತ್ರ ಎಂಬಲ್ಲಿ ನಮ್ಮ ಜಿಲ್ಲೆಯ ಹೆಸರು ಹಾಗೂ ಬೇಕಾದ ಮರದ ಹೆಸರನ್ನು ತುಂಬಿಸಿ ಹುಡುಕಿ ಎಂಬ ಬಟನ್ ಒತ್ತಿದರೆ, ಹತ್ತಿರದ ನರ್ಸರಿಯ ವಿವರ ತೋರಿಸುತ್ತದೆ. ಎಂದು ವಿವರ ನೀಡಿದರು.
ಹಾಗೂ ಮಾರಾಟದ ಸಂಕ್ಷಿಪ್ತ ಇವರ ವನ್ನು ರೈತರಿಗೆ ಮನದಟ್ಟುವಂತೆ ತಿಳಿಸಿಕೊಟ್ಟರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ.ರಾಘವೇಂದ್ರ ಅರಣ್ಯ ಹಾಗೂ ಪರಿಸರ ವಿಜ್ಞಾನ ವಿಭಾಗ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ,ಇವರು ಆಗಮಿಸಿದ್ದರು.
ಈ ಕಾರ್ಯಕ್ರಮಕ್ಕೆ ಸುಮಾರು 40 ಜನ ರೈತರು ಭಾಗವಹಿಸಿದ್ದರು.
