
ಸಕಲೇಶಪುರ : ತಾಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆನ್ನಲಿ ಗ್ರಾಮದಲ್ಲಿ ನಿನ್ನೆ ರಾತ್ರಿ 9:30 ರಲ್ಲಿ ಮೂರ್ತಿ ಯವರ ಮನೆಯ ಮುಂಭಾಗದ ಅಂಗಳಕ್ಕೆ ಬಂದು ಅವರು ಸಾಕಿದ ನಾಯಿಯನ್ನು ಚಿರತೆ ಹೊತ್ತುಕೊಂಡು ಹೋಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.
ಇದರಿಂದ ಗ್ರಾಮಸ್ಥರು ಆತಂಕಗೊಂಡು ಭಯಬಿತರಾಗಿ ತಿರುಗಾಡುವ ಪರಿಸ್ಥಿತಿ ಎದುರಾಗಿದೆ, ಈ ಹಿನ್ನೆಲೆ ಅರಣ್ಯ ಇಲಾಖೆಯಿಂದ ಒಂದು ಬೋನನ್ನು ರಸ್ತೆ ಬದಿಯ ತೋಟದ ಬೇಲಿ ಪಕ್ಕ ಇಡಲಾಗಿದೆ.
ಕಳೆದ 15 ದಿನಗಳಿಂದ ಮಸ್ತಾರೆ, ಮಾವಿನಹಳ್ಳಿ, ದಬ್ಬೆ ಗದ್ದೆ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ ಚಿರತೆ ಸಂಚಾರ ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು, ಎರಡು ಮೂರು ಹಸುವನ್ನು ಕೊಂದು ಹಾಕಿದ ಕಿರಾತಕ ಚಿರತೆ ಹೆನ್ನಲಿ ಗ್ರಾಮಕ್ಕೆ ಲಗ್ಗೆ ಇಟ್ಟಿದೆ.
ಚಿರತೆಯನ್ನು ಬಯಲು ಸೀಮೆಪ್ರದೇಶದಿಂದ ಮಲೆನಾಡಿನ ಪ್ರದೇಶಕ್ಕೆ ತಂದು ಬಿಟ್ಟಿರುವ ಅಧಿಕಾರಿಗಳ ವಿರುದ್ಧವಾಗಿ ಹೋರಾಡುವುದಾಗಿ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ ಕರ್ನಾಟಕ ಎಚ್ಚರಿಸಿದೆ.
ಈ ಭಾಗದಲ್ಲಿ ಮರ ಗಿಡ ಗುಡ್ಡ ಪ್ರದೇಶದಿಂದ ಕೂಡಿದ ಪ್ರದೇಶ ವಾಗಿದ್ದು, ಚಿರತೆ ಯಾವ ಕಡೆಯಿಂದ ಬರುತ್ತದೆ ಎಂದು ಜನಸಾಮಾನ್ಯರಿಗೆ ಗೊತ್ತಾಗುವುದಿಲ್ಲ ದಯಮಾಡಿ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿದು ಬೇರೆ ದಟ್ಟ ಅರಣ್ಯ ಪ್ರದೇಶಕೆ ಬಿಡಬೇಕೆಂದು ಗ್ರಾಮಸ್ಥರ ಆಕ್ರೋಶವಾಗಿದೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಕರ್ನಾಟಕ ನಗರ ಸಂಚಾಲಕರಾದ ಉದಯ್ ಕುಮಾರ್, ತಾಲೂಕು ಸಂಚಾಲಕರಾದ ಧರಣಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮಾಡಿಮನೆ ಪ್ರಶಾಂತ್, ಮೂರ್ತಿ, ಮಂಜು ವಲಯರ್, ಇತರ ಗ್ರಾಮಸ್ಥರು ಹಾಜರಿದ್ದರು.



