ಆಲೂರು : ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಕ್ಕಳ ಪೋಷಕ ಮಲ್ಲಿಕಾರ್ಜುನ್ ತಾಲೂಕಿನ ಮರಸು ಹೊಸಳ್ಳಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಣ್ ಬಿ ಎಂಬ ಶಿಕ್ಷಕನು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪಾಠ ಮಾಡದೆ ವಿದ್ಯಾರ್ಥಿನಿಯರೊಂದಿಗೆ ಪಾಠ ಮಾಡುವ ಸಂದರ್ಭದಲ್ಲಿ ಮೊಬೈಲ್ ಹಿಡಿದುಕೊಂಡು ಅನುಚಿತವಾಗಿ ವರ್ತಿಸುವುದು.

ಕೆಟ್ಟ ಕೆಟ್ಟದಾಗಿ ಮಾತನಾಡುವುದು,ಅಸಭ್ಯವಾಗಿ ವರ್ತಿಸುವುದು, ಇದರಿಂದಾಗಿ ಮಕ್ಕಳು ಮನನೊಂದು ಈ ರೀತಿಯ ವರ್ತನೆಯಿಂದ ಹೆಣ್ಣು ಮಕ್ಕಳು ಮುರಾರ್ಜಿ ವಸತಿ ಶಾಲೆಯಲ್ಲಿ ಸರಿಯಾದ ವಿದ್ಯಾಭ್ಯಾಸ ಮಾಡಲಾಗದೆ ಮನೆಗೆ ಬಂದು ಸಮಾಜ ವಿಜ್ಞಾನ ಪಾಠ ಮಾಡುವ ಶಿಕ್ಷಕ ಲಕ್ಷ್ಮಣ ಬಿ ಈತನು ಕೆಟ್ಟ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದಾನೆ ಎಂದು ತಿಳಿಸಿದರು

ನಂತರ ಪೋಷಕರು ಪ್ರಾಂಶುಪಾಲರಿಗೆ ದೂರು ಹೇಳಿ ಪ್ರಾಂಶುಪಾಲರು ಮೇಲಧಿಕಾರಿಗಳ ಗಮನಕ್ಕೆ ತಂದು ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಿಕ್ಷಕ ಲಕ್ಷ್ಮಣನು ಪಾಠ ಮಾಡುವ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಖಾಸಗಿ ವಿಷಯಗಳ ಬಗ್ಗೆ, ಶೌಚ ಕಾರ್ಯದ ಬಗ್ಗೆ, ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಚ್ಛತೆಯ ಬಗ್ಗೆ, ಹೆಣ್ಣು ಮಕ್ಕಳ ಖಾಸಗಿ ವಿಚಾರಗಳ ಬಗ್ಗೆ, ಅನುಚಿತವಾಗಿ ವರ್ತಿಸುತ್ತಿರುವುದು ಕಂಡು ಬಂದಿರುವುದರಿಂದ ಇವನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ನಂತರ ಪೋಷಕರು ಶಿಲ್ಪ ಎಂಬುವರು ಆಲೂರು ಪೊಲೀಸ್ ಠಾಣೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಲಕ್ಷ್ಮಣ ಬಿ ಎಂಬುವನ ಮೇಲೆ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿ ಜೈಲಿಗೆ ಕಳಿಸಿದ್ದಾರೆ.

ಇಂತಹ ಕೆಟ್ಟ ಶಿಕ್ಷಕನಿಗೆ ಯಾವ ರಾಜಕಾರಣಿಗಳು ಬೆಂಬಲ ಕೊಡಬಾರದು, ಕಾನೂನಿನ ರೀತಿಯಲ್ಲಿ ಉಗ್ರವಾದ ಶಿಕ್ಷೆ ಆಗಬೇಕು, ಸರ್ಕಾರ ಇಂತಹ ಕೆಟ್ಟ ಶಿಕ್ಷಕನಿಗೆ ಶಿಕ್ಷಕ ವೃತ್ತಿಯಿಂದಲೇ ಸಂಪೂರ್ಣವಾಗಿ ವಜಗೊಳಿಸಬೇಕೆಂದು ಮಲ್ಲಿಕಾರ್ಜುನ್ ತಿಳಿಸಿದರು .

ಶಿಲ್ಪ ಮಾತನಾಡಿ ಶಿಕ್ಷಕ ಲಕ್ಷ್ಮಣ್ ಎಂಬ ವ್ಯಕ್ತಿಯು ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ಮಾತನಾಡುವುದಲ್ಲದೆ ಹೆಣ್ಣು ಮಕ್ಕಳು ಖಾಸಗಿ ವಿಚಾರಗಳನ್ನು ತರಗತಿಯಲ್ಲಿಹೆಚ್ಚು ಹೆಚ್ಚು ಕೇಳುವುದು, ಅಲ್ಲದೆ ರಾತ್ರಿ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕೊಠಡಿಗಳಿಗೆ ಹೋಗಿ ಬಾಗಿಲು ಬಡಿಯುವುದು, ವಿಡಿಯೋ ಮಾಡುವುದು ಮಾಡುತ್ತಿದ್ದು ಮಕ್ಕಳು ಇದರಿಂದ ಭಯಭೀತರಾಗಿ ಸರಿಯಾಗಿ ಶಿಕ್ಷಣ ಪಡೆಯಲಿಕ್ಕೆ ಸಾಧ್ಯವಾಗದೆ ಪೋಷಕರಾದ ನಮಗೆ ತಿಳಿಸಿದ್ದರಿಂದ ಇಂಥ ಶಿಕ್ಷಕನ ಮೇಲೆ ದೂರು ದಾಖಲಿಸಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ್, ಶಿಲ್ಪ, ಸವಿತಾ, ಸಂಘರ್ಷ, ಹರ್ಷಿತ್, ವೀಣಾ, ಸುಮಾ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *