
ಆಲೂರು :ಜನಪದ ಕಲಾತಂಡದಿಂದ ಆರೋಗ್ಯ ಅರಿವು ಕಾರ್ಯಕ್ರಮವನ್ನು ಆಲೂರು ಪಟ್ಟಣದಲ್ಲಿ ಇಂದು ಏರ್ಪಡಿಸಲಾಗಿತ್ತು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಜಯಪ್ರಕಾಶ್ ರವರು ಆಸ್ಪತ್ರೆ ಆವರಣದಲ್ಲಿ ಹಸಿರು ಬಾವುಟ ತೋರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಅವುಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು ವಿಶೇಷವಾಗಿ ಇಂದು ರಾಜ್ಯಾದ್ಯಂತ ಸುದ್ದಿಯಲ್ಲಿರುವ ಹೆಣ್ಣುಭೂಣ ಲಿಂಗಪತ್ತೆ ಬಗ್ಗೆ ವಿಶೇಷ ಜಾಗೃತಿ ಮೂಡಿಸುವುದರ ಮೂಲಕ ಲಿಂಗ ಸಮಾನತೆಯನ್ನು ಕಾಪಾಡುವಂತೆ ತಿಳಿಸಿದರು
ಈ ಬೀದಿ ನಾಟಕಗಳ ಮೂಲಕ ಆಯ್ದ ಗ್ರಾಮಕ್ಕೆ ಈ ಕಲಾತಂಡವು ತೆರಳಿ ಉತ್ತಮ ರೀತಿಯಲ್ಲಿ ಪ್ರಚಾರ ಮಾಡುವಂತೆ ತಿಳಿಸಿದರು ಆರೋಗ್ಯವು ಮನುಷ್ಯನಿಗೆ ಎಲ್ಲಾ ಸಂಪತ್ತಿಗಿಂತ ಅತಿ ಮುಖ್ಯವಾಗಿದ್ದು ಇದನ್ನು ಕಾಪಾಡಲು ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಆರೋಗ್ಯ ಇಲಾಖೆಯ ಆರೋಗ್ಯ ಕಾರ್ಯಕ್ರಮಗಳಾದ ತಾಯಿ ಮಕ್ಕಳ ಆರೋಗ್ಯ,ಕುಟುಂಬ ಕಲ್ಯಾಣ ಕಾರ್ಯಕ್ರಮ,ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ನಿಯಂತ್ರಣ ಕಾರ್ಯಕ್ರಮ,ಏಡ್ಸ್ ನಿಯಂತ್ರಣ ಕಾರ್ಯಕ್ರಮ,ಕ್ಷಯರೋಗ ನಿಯಂತ್ರಣ,ಕುಷ್ಠರೋಗ ನಿಯಂತ್ರಣ,ನೀರು ಆಹಾರ ಹಾಗೂ ಗಾಳಿಯಿಂದ ಹರಡುವ ಇತರೆ ಸಾಂಕ್ರಾಮಿಕ ರೋಗಗಳು, ರಕ್ತ ಹೀನತೆ ನಿವಾರಣೆ,ಅದಿ ಹರೆಯದ ಆರೋಗ್ಯ, ದಂತ ಭಾಗ್ಯ ಯೋಜನೆ,ಅಯೋಡಿನ್ ನಿಯಂತ್ರಣ,ಜಂತುಹುಳು ನಿವಾರಣ ಕಾರ್ಯಕ್ರಮ, ಅನಿಮೇಯ ಮುಕ್ತಪೌಷ್ಠಿಕ ಕರ್ನಾಟಕ ಲಸಿಕ ಕಾರ್ಯಕ್ರಮ ಹಾಗೂ ಅಸಂಕ್ರಾಮಿಕ ರೋಗಗಳಾದ ಕ್ಯಾನ್ಸರ್,ಮಧುಮೇಹ,ರಕ್ತದೊತ್ತಡ, ಪಾಶ್ವಾಯು ರೋಗಗಳು ಇನ್ನೂ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಜಾನಪದ ತಂಡಗಳ ಮೂಲಕ ಈ ಮೇಲಿನ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು ಈ ಕಲಾತಂಡವು ತಾಲೂಕಿನ ಆಯ್ದ 15 ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶನ ನೀಡಿ ಆರೋಗ್ಯ ಅರಿವು ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸತೀಶ್ ಜಿ.ಎಸ್,ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮೋಹನ್ ಸಿ.ಆರ್,ರಾಜು ಹಾಗೂ ಕ್ಷಯರೋಗ ಮೇಲ್ವಿಚಾರಕರಾದ ಸತೀಶ್ ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿಗಳಾದ ಭಾಗ್ಯಮ್ಮ ತಿಮ್ಮಮ್ಮ ಹಾಗೂ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು


