
ಅರಸೀಕೆರೆ : ತಾಲೂಕು ಗಂಡಸಿ ಹೋಬಳಿ ಹಿರಿಸಮುದ್ರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ , ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ ಮತ್ತು ಪಶುಸಂಗೋಪನಾ ಇಲಾಖೆ, ಅರಸೀಕೆರೆ ತಾಲೂಕು, ಹಿರಿಯ ವಿದ್ಯಾರ್ಥಿಗಳ ಸಂಘ, ಯು.ಎ.ಎಸ್., ಬೆಂಗಳೂರು ಹಾಗು ಕೃಷಿ ತಂತ್ರಜ್ಞರ ಸಂಸ್ಥೆ (ರಿ), ಹಾಸನ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ಕೃಷಿ ಹಾಗು ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು.
ಸಾಕುಪ್ರಾಣಿಗಳಾದ ಹಸು, ಕರು, ಎಮ್ಮೆ ಕುರಿ , ಕೋಳಿ , ಹಂದಿ, ನಾಯಿ ಆಡುಗಳಲ್ಲಿ ಮುಖ್ಯವಾಗಿ ಕಂಡುಬರುವ ರೋಗಗಳನ್ನು ಪರಿಶೀಲಿಸಿ ಅದಕ್ಕೆ ಉಚಿತ ಚಿಕಿತ್ಸೆ ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು.
ಗ್ರಾಮಸ್ಥರೆಲ್ಲರೂ ತಮ್ಮ ಸಾಕುಪ್ರಾಣಿಗಳಾದ ಹಸು, ಕರುಗಳನ್ನು ಕರೆತಂದು ಚಿಕಿತ್ಸೆ ಕೊಡಿಸುವುದರ ಮೂಲಕ ಈ ಶಿಬಿರವನ್ನು ಸದುಪಯೋಗಗೊಳಿಸಿಕೊಂಡರು.
ಮುಖ್ಯವಾಗಿ ಹಸುವಿನಲ್ಲಿ ಕಂಡುಬರುವ ಕೆಚ್ಚಲುಬಾವು , ಕಾಲು ಮತ್ತು ಬಾಯಿ ಜ್ವರ, ಚರ್ಮರೋಗ, ಕೆಮ್ಮು ಹಾಗು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಯಿತು.
ಇದರ ಜೊತೆಗೆ ಶಿಬಿರಕ್ಕೆ ಬಂದಿದ್ದ ಎಲ್ಲಾ ಪಶುಗಳಿಗೆ ಜಂತು ಹುಳುವಿನ ಔಷದಿಯನ್ನು ನೀಡಲಾಯಿತು. ಮುಖ್ಯವಾಗಿ ಕೆಚ್ಚಲುಬಾವಿಗೆ ಲಸಿಕೆ ನೀಡಿ ಗರ್ಭನಿಲ್ಲದಿರುವಿಕೆಗೆ ಚಿಕಿತ್ಸೆ ನೀಡಲಾಯಿತು.
ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನದ ವೈದ್ಯರಾದ ಡಾ. ಶಿವಕುಮಾರ್, ಡಾ.ರವಿಕುಮಾರ್ ಹಾಗು ವಿದ್ಯಾರ್ಥಿಗಳು ಪಶುಗಳನ್ನು ಪರಿಶೀಲನೆ ಮಾಡಿ ಚಿಕಿತ್ಸೆ ನೀಡುವುದರ ಮೂಲಕ ತಪಾಸಣಾ ಶಿಬಿರವನ್ನು ಯಶ್ವಸಿಯಾಗಿ ನಡೆಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಎಸ್.ಎನ್ ವಾಸುದೇವನ್ ಡೀನ್ ಕೃಷಿ, ಡಾ.ಶಂಕರ ಎಂ.ಎಚ್ ಸಹಾಯಕ ಪ್ರಾಧ್ಯಾಪಕರು ಕೃಷಿ ವಿಸ್ತರಣೆ, ಡಾ. ಆರವಿಂದ್ ಕುಮಾರ್ ಸಹಾಯಕ ಪ್ರಾಧ್ಯಾಪಕರು ಕೃಷಿ ಅರ್ಥಶಾಸ್ತ್ರ , ಡಾ. ವಾಘಮಾರೆ ವಿಜಯಕುಮಾರ್ ವೀರಪ್ಪ ಸಹಾಯಕ ಪ್ರಾಧ್ಯಾಪಕರು ಕೃಷಿ ಸೂಕ್ಷ್ಮಜೀವಶಾಸ್ತ್ರ, ಡಾ. ಶಿವಬಸಪ್ಪ ಕಂದಕೂರ ಕೃಷಿ ತಂತ್ರಜ್ಞಾನ , ಶ್ರೀ ಸುದೀಪ್ ಕೆ. ಎಲ್ ಪಶು ವೈದ್ಯಕೀಯ ಪರೀಕ್ಷಕರು, ಶ್ರೀ ಚೇತನ್ ಕುಮಾರ್ ವ್ಯಾಪಾರ ಕಾರ್ಯನಿರ್ವಾಹಕರು, ಶ್ರೀಕಾಂತ್ ವೈದ್ಯಕೀಯ ಪ್ರತಿನಿಧಿ ಅಲೆಂಬಕ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ ಇವರು ಆಗಮಿಸಿದ್ದರು.
