ಸಕಲೇಶಪುರ : ತಾಲೂಕಿನ ಚಿಕ್ಕಸತ್ತಿಗಾಲ ಗ್ರಾಮದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರನೇ ವರ್ಷದ ಕಾರ್ತಿಕ ಪೂಜಾ ಮಹೋತ್ಸವವೂ ತುಂಬಾ ವಿಜೃಂಭಣೆಯಿಂದ ಜರುಗಿದ್ದು, ಬೆಳಿಗ್ಗೆ 9:00 ಗಂಟೆಯಿಂದ 12 ಗಂಟೆವರೆಗೆ ಕಾರ್ಯ ಕ್ರಮ ನೆರವೇರಿದ್ದು, ದೇವಿಯ ಪೂಜಾ ನಂತರ ಕಳಸ ಮತ್ತು ದೇವಿಯನ್ನು ಹೊತ್ತುಕೊಂಡು ಅರಕೆರೆ ಸೇತುವೆ ಬಳಿಯಿಂದ ಚಿಕ್ಕಸತ್ತಿಗಾಲ ಗ್ರಾಮದವರೆಗೆ ಮೆರವಣಿಗೆ ಮೂಲಕ ಕರತರಲಾಯಿತು,

ಶ್ರೀ ಅಮ್ಮನವರ ಹೋಮ ಯಜ್ಞದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು, ಸನ್ನಿಧಿ ಅರ್ಚಕರಾದ ಮಂಜುನಾಥ್, ಅರ್ಚಕರಾದ ರಾಜಶೇಖರ್ ಜಂಬರಡಿ, ಕುಟುಂಬ ವರ್ಗದವರು, ಮತ್ತುಗ್ರಾಮಸ್ಥರು, ಸುತ್ತಮುತ್ತಲ ಗ್ರಾಮದವರು ಸೇರಿ 500 ಕ್ಕೂ ಹೆಚ್ಚು ಹೆಚ್ಚು ಭಕ್ತಾದಿಗಳು ನೆರೆದಿದ್ದು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *