ಕೆಟ್ಟ ಮನಸ್ಥಿತಿ ಬದಲಾದರೇ ಭ್ರಷ್ಠಾಚಾರ ನಿರ್ಮೂಲನೆ ಸಾಧ್ಯಕಾನೂನಿನಡಿ ಕೆಲಸ ಮಾಡಲು ಅಧಿಕಾರಿಗಳಿಗೆ ನ್ಯಾ. ಟಿ.ಎನ್. ಇನವಳ್ಳಿ ಕರೆ

ಹಾಸನ: ಸರಕಾರಿ ಅಧಿಕಾರಿಗಳಾಗಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಸಿಕ್ಕಿರುವುದೇ ಪುಣ್ಯ. ಇದರಲ್ಲಿ ತಮ್ಮ ತಮ್ಮ ಕೆಟ್ಟ ಆಲೋಚನೆಯ ಮನಸ್ಥಿತಿ ಬದಲಾದರೇ ಮಾತ್ರ ಭ್ರಷ್ಠಾಚಾರ ನಿರ್ಮೂಲನೆ ಸಾಧ್ಯವಾಗುತ್ತದೆ. ಇನ್ನು ಕಾನೂನಿನಡಿ ಕೆಲಸ ಮಾಡುವ ಮೂಲಕ ಅಧಿಕಾರಿಗಳು ಉತ್ತಮ ಸೇವೆ ನೀಡುವಂತೆ ಜಿಲ್ಲಾ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಕರೆ ನೀಡಿದರು.
ನಗರದ ನಗರಸಭೆ ಕುವೆಂಪು ಸಭಾಂಗಣದಲ್ಲಿ ಲೋಕಾಯುಕ್ತ ಹಾಸನ ವಿಭಾಗ, ಕಾನೂನು ಸೇವೆಗಳ ಪ್ರಾಧೀಕಾರ ಇವರ ಸಹಯೋಗದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಸರಿಯಾಗಿದ್ದರೇ ವ್ಯವಸ್ಥೆ ಸರಿಯಾಗಿರುತ್ತದೆ. ಕಾನೂನು ಉಳಿಯಬೇಕಾದರೇ ನಂಬಿಕೆಯಲ್ಲಿ ಕೆಲಸ ಮಾಡಬೇಕು. ಕಾನೂನು ಬದ್ಧವಾಗಿ ಸಾಕ್ಷಿ ಏನೆನು ಇದೆ ಇದರ ಪ್ರಕಾರ ತನಿಖೆ ಮಾಡುವವರಿಗೆ ತಿಳಿದಿರಬೇಕು. ಮತ್ತೊಬ್ಬರ ಸರಿಮಾಡುವ ಮೊದಲು ನಾವು ಸರಿಯಾಗಿರಬೇಕು. ವಿಚಾರಣ ಅಧಿಕರಿಗಳು ಕಾನೂನನ್ನು ಬಿಟ್ಟು ಕೆಲಸ ಮಾಡದೇ ತಿಳಿದುಕೊಂಡು ಕಾನೂನು ಬದ್ಧವಾಗಿ ಏನು ಇದೆ ತಿಳಿದು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಹೊಸ ಹೊಸ ಕಾನೂನು ಬಂದಾಗ ತರಬೇತಿ ಪಡೆಯಬೇಕು.
ಲೋಕಾಯುಕ್ತ ಕೇಸು ಎಂದರೇ ಅದು ವಿಶೇಷ ವಾಗಿರುತ್ತದೆ. ಅಧಿಕಾರಿಗಳಾಗಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಅದೃಷ್ಟ, ಸೇವೆಗೆ ಅವಕಾಶ ಸಿಕ್ಕಿರುವ ಸಮಯದಲ್ಲಿ ಎಲ್ಲಾ ಅಧಿಕಾರಿಗಳು ನಿಸ್ವಾರ್ಥ ಸೇವೆ ಮಾಡಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಬ್ರಷ್ಟಾಚಾರ ದ ನಿಯಂತ್ರಣಕ್ಕೆ ಅನೇಕ ಕಾನೂನುಗಳಿವೆ, ಆದರೆ ಶಿಕ್ಷೆಗೂ ಮಿಗಿಲಾಗಿ ತಮ್ಮ ಮನಸ್ಥಿತಿ ಬದಲಾವಣೆಯಿಂದ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕೊರೋನಾ ಸಮಯದಲ್ಲಿ ಖಾಸಗೀ ಕಂಪನಿಗಳು ಏನೇನು ಆಗಿದೆ ಎಂಬುದು ತಿಳಿದಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ನಾವು ಇರುವುದು ಜನರ ಕಷ್ಟ ಬಂದಾಗ ಸ್ಪಂದಿಸುವುದಕ್ಕೆ. ನಾವು ನಡೆದುಕೊಳ್ಳುವ ಭಾವನೆಯನ್ನು ಮೊದಲು ಬದಲಾಯಿಸಿಕೊಳ್ಳಬೇಕು. ಹೋಗುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ ಎಂಬುದಕ್ಕೆ ಪುನೀತ್ ರಾಜ್ ಕುಮಾರ್ ಎಲ್ಲಾ ರೀತಿಯ ಅಂತಸ್ತು ಹೊಂದಿದ್ದರು. ಅವರ ಅಂತ್ಯ ನೋಡಿದರೆ ಊಹಿಸಲು ಅಸಾಧ್ಯ, ಆದುದರಿಂದ ಅಂತಹ ವ್ಯಕ್ತಿಗಳು ಎಲ್ಲರಿಗೂ ಮಾದರಿ ಆಗಬೇಕು, ಇರುವಷ್ಟು ದಿನ ನೆಮ್ಮದಿಯ ಜೀವನ ಸಾಗಿಸಲು ಆಸೆಗಳಿಗೆ ಮಿತಿ ಇಟ್ಟುಕೊಳ್ಳಬೇಕು ಉದಾಹರಣೆಯಾಗಿ ತಿಳಿಸಿದರು. ಸರಕಾರಿ ಕಛೇರಿಗೆ ತಡವಾಗಿ ಬರುವುದು, ಕಡತಗಳನ್ನು ಪೆಂಡಿಂಗ್ ಇಡುವುದು ಒಂದು ರೀತಿ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೇ ದುಡ್ಡ ತೆಗೆದುಕೊಳ್ಳುವುದು ಒಂದೆಯಲ್ಲ. ಕರ್ತವ್ಯದಲ್ಲಿ ಲೋಪವು ಕೂಡ ಸೇರಿದೆ. ಇವೆಲ್ಲವದಕ್ಕೂ ಮೀರಿ ಉತ್ತಮ ಸೇವೆ ಕೊಡಬೇಕು.
ಅನೇಕ ಬಾರಿ ಕಛೇರಿಯಲ್ಲಿ ಕಡತವೇ ಇರುವುದಿಲ್ಲ ಕಾಣೆಯಾಗಿದೆ ಎಂದು ಹೇಳಲಾಗುತ್ತದೆ. ಹೇಗೆ ಕಳೆದು ಹೋಗುತ್ತದೆ. ಎಂಬುದರ ಬಗ್ಗೆ ನಮ್ಮ ಆತ್ಮಸಾಕ್ಷಿಯನ್ನು ಹೊಡೆದು ಎಬ್ಬಿಸಬೇಕು ಎಂದು ಕಿವಿಮಾತು ಹೇಳಿದರು. ನನ್ನ ಪ್ರಕಾರ ಕೆಟ್ಟದ್ದು ಬೇಗ ಹರಡುತ್ತದೆ. ಜನರು ಕೂಡ ಅದನ್ನೆ ಹೆಚ್ಚು ನೋಡುತ್ತಾರೆ. ಒಳ್ಳೆಯದು ಬೆಳಕಿಗೆ ಬರುವುದಿಲ್ಲ. ನಾನು ಭ್ರಷ್ಟನಲ್ಲ ಎಂಬುವುದು ಅವರ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು.
ಆತ್ಮಸಾಕ್ಷಿಗೆ ವಂಚಿಸದೆ ಸರಿಯಾಗಿ ಕೆಲಸ ಮಾಡದೇ ಇದ್ದರೆ ಅದೆಷ್ಟೇ ಕಾನೂನು ಕಟ್ಟಳೆಗಳನ್ನು ತಂದರೂ ಪ್ರಯೋಜನ ಇಲ್ಲ. ಪ್ರತಿಯೊಬ್ಬರ ಮನಸ್ಥಿತಿ ಬದಲಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿ ನಡೆಯದೇ ಇದ್ದರೆ ಪ್ರಾಣಿಗಳಿಗೂ ಮನುಷ್ಯನಿಗೂ ಯಾವುದೇ ಪ್ರಯೋಜನ ಇರುವುದಿಲ್ಲ. ಈ ನಿಟ್ಟಿನಲ್ಲಿ ತಮಗೆ ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಇನ್ನೊಬ್ಬರ ಮನಸಿಗೆ ನೋವಾಗದಂತೆ ಸಾರ್ವಜನಿಕರ ಸೇವೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು. ಆಸೆಗಳಿಗೆ ಮಿತಿ ಇರಬೇಕು, ತಮಗೆ ಲಭ್ಯ ಇರುವ ಸಂಪತ್ತಿಗೆ ಅನುಗುಣವಾಗಿ ಜೀವನ ಶೈಲಿ ಅಳವಡಿಸಿಕೊಂಡರೆ ಸುಖ ಜೀವನ ಸಾಧ್ಯ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಹಾಸನ ಲೋಕಾಯುಕ್ತ ಪೊಲೀಸ್‌ಅಧೀಕ್ಷಕ ಸಿ. ಮಲ್ಲಿಕ್, ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಕೆ. ಶಿಲ್ಪ, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ರವಿಕಾಂತ್ ಇತರರು ಉಪಸ್ಥಿತರಿದ್ದರು. ಲೋಕಾಯುಕ್ತ ಪ್ರಭಾಕರ್ ಪ್ರಾರ್ಥಿಸಿದರು. ಜೆ.ಜೆ. ತಿರುಮಲ್ಲೇಶ್ ಸ್ವಾಗತಿಸಿದರು.




