ಆಲೂರು : ತಾಲೂಕಿನ ಕೆ.ಹೊಸಕೋಟೆ ಮತ್ತು ಕುಂದೂರು ಹೋಬಳಿ ವ್ಯಾಪ್ತಿಯ ಎರಡು ಹೋಬಳಿಗೆ ಅಯ್ಯೋ ದೇಯ ಶ್ರೀರಾಮ ಮಂದಿರದ ಫೋಟೋ ಮತ್ತು ಕರ ಪತ್ರಗಳಿಗೆ ಶ್ರೀ ಕೆಂಚಾಂಬಿಕೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ಕಾಫಿ ಮಂಡಳಿ ಸದಸ್ಯರು ಉದಯಕುಮಾರ್ ಮಾತನಾಡಿ ನಮ್ಮೆಲ್ಲರ ಬಹುದಿನಗಳ ಕನಸು ಶ್ರೀ ರಾಮ ಮಂದಿರ ನಿರ್ಮಾಣ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು ಉದ್ಘಾಟನೆ ಜನವರಿ 22ರಂದು ಆಗಲಿದ್ದು.ನಾವೆಲ್ಲರೂ ಜನವರಿ 22 ಈ ದೇಶದ ಹಿಂದೂಗಳು ಒಗ್ಗೂಡುವ ಶುಭದಿನ ಆ ಶುಭದಿನದಂದು ನಾವೆಲ್ಲರೂ ಸಹ ನಮ್ಮ ನಮ್ಮ ನಮ್ಮೂರಿನಲ್ಲಿ ಇರುವಂತಹ ದೇವಸ್ಥಾನ, ಗುಡಿ, ಗೋಪುರಗಳಲ್ಲಿ,ಪೂಜೆ ಸಲ್ಲಿಸಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಎಲ್ಲಾ ಹಿಂದೂ ಬಾಂಧವರು ತಮ್ಮ ತಮ್ಮ ಮನೆಗಳ ಮುಂದೆ 5 ಕ್ಕಿಂತ ಹೆಚ್ಚು ದೀಪಗಳನ್ನು ಹಚ್ಚಿ ಈ ದೇಶದಲ್ಲಿ ತುಂಬಿರುವ ಜಾತಿ ಕಗ್ಗತ್ತಲನ್ನು ಹೋಗಲಾಡಿಸಿ ನಾವೆಲ್ಲರೂ ಹಿಂದೂ ಒಂದಾಗಬೇಕೆನ್ನುವ ಸಂದೇಶ ಕೊಡಬೇಕು ಎಂದರು.

ಬಿಜೆಪಿ ಯುವ ಮುಖಂಡ ಸಮಾಜ ಸೇವಕ ಕಟ್ಟೆಗದ್ದೆ ನಾಗರಾಜು ಮಾತನಾಡಿ ಈ ಕಾರ್ಯಕ್ರಮದ ಉದ್ದೇಶ ಹಿಂದೂ ಧರ್ಮದ ಜಾಗೃತಿ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ತಹದ್ದು, ಭಾರತ ದೇಶ ಸಾಂಸ್ಕೃತಿಕ, ಸುಸಂಸ್ಕೃತ ಪರಂಪರೆಗಳ ಕೂಡಿದ್ದು,ಒಡೆದು ಆಳಿದ ಅನ್ಯ ಧರ್ಮೀಯರ ಪಾಲಾಗಿದ್ದಂತಹ ಶ್ರೀ ರಾಮ ಮಂದಿರ ಉದಾರಣೆಯಾಗಿದೆ. ಈ ಶ್ರೀರಾಮ ಮಂದಿರ ನೂರಾರು ದಶಕಗಳ ಹೋರಾಟದ ಪ್ರತಿಫಲವಾಗಿ ಭಾರತೀಯರಿಗೆ ನ್ಯಾಯ ದೊರಕಿದೆ. ಹಿಂದೂ ಧರ್ಮದ ಧಾರ್ಮಿಕ ಮನೋಭಾವ ಇರುವಂತಹ ಭಕ್ತರಿಗೆ ಶ್ರೀ ರಾಮ ಮಂದಿರವೆ ಇತಿಹಾಸ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿವ್ಯ ಉದಯಕುಮಾರ್,ಬಿಜೆಪಿ ಉಪಾಧ್ಯಕ್ಷ ಪೂವಯ್ಯ, ಶ್ರೀ ಕೆಂಚಂಬ ದೇವಸ್ಥಾನದ ಅರ್ಚಕರು ರವಿ, ಅಧ್ಯಕ್ಷರು ರಘು, ಹರ್ಷ ಕಡ್ಲೂರು ಕೊಪ್ಪಲ್, ಚಂದನ್ ಹೈದೋರು , ಅಶೋಕ್ ಎಸ್ ವೈ, ವಿನೋದ್ ಕುಮಾರ್, ಮೋಹನ್ ಐದೂರು, ಕುಮಾರ್ ಮಗ್ಗೆ, ಚೇತನ್ ಮೆಡಿಕಲ್ ಸುತ್ತಮುತ್ತಲಿನ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ :ಮೋಹನ್ ಕಾಡ್ಲೂರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *