ಸಕಲೇಶಪುರ : ತಾಲೂಕಿನ ಆನೆ ಮಹಲ್ ಗ್ರಾಮ ವ್ಯಾಪ್ತಿಯ ಎನ್ ಕೆ ಗಣಪಯ್ಯ ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಅಲುಮಿನಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಇದೇ ಶಾಲೆಯಲ್ಲಿ ಕಲಿತು ಬೆಂಗಳೂರು, ಮೈಸೂರು, ಶಿವಮೊಗ್ಗ, ಇತರೆ ಭಾಗಗಳಲ್ಲಿ ಇದ್ದುಕೊಂಡು ವೃತ್ತಿಪರ ಉದ್ಯೋಗದಲ್ಲಿದ್ದು, ಉತ್ತಮ ಸಂಬಳವನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಮುಂದಿನ ವಿದ್ಯಾರ್ಥಿಗಳಿಗೂ ಮಾದರಿಯಾಗಲಿ ಎಂದು ಇದೇ ಶಾಲೆಯಲ್ಲಿ ಒಂದರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಉದ್ಯೋಗ ಗೆಟ್ಟಿಸಿಕೊಂಡು ತಾವು ಬೆಳೆದ ಶಾಲೆಯನ್ನು ಮರೆಯದೆ ಸುಮಾರು ಏಳು ವರ್ಷಗಳಿಂದ ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ಕೊಡುಗೆ ನೀಡುತ್ತಾ ಬಂದಿರುತ್ತಾರೆ. ಅದೇ ರೀತಿ ಈ ಬಾರಿಯೂ ಸಹ ಎಲ್ಲಾ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳಿಂದ ಕಾಟನ್ ಜರ್ಕಿನ್ ಕೊಡುಗೆಯಾಗಿ ನೀಡುವುದರ ಮೂಲಕ ಮಾನವೀಯತೆ ಮೆರೆದರು.

ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ಕಟ್ಟಿಕೊಳ್ಳುವ ಬಗ್ಗೆ ಉತ್ತಮ ಸಂದೇಶವನ್ನು ನೀಡಿರುತ್ತಾರೆ. ಅದೇ ರೀತಿ ರೋಟರಿ ಆಡಳಿತ ಮಂಡಳಿ ಪ್ರತಿ ವರ್ಷದಂತೆ ಈ ಬಾರಿಯೂ ಸಹಕಾರ ನೀಡಿದ ಬಂದಿರುತ್ತದೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಲೋಕೇಶ್ ಮಾತನಾಡಿ ಒಂದರಿಂದ ಹತ್ತನೇ ತರಗತಿಯಾವವರೆಗೂ ಈ ಶಾಲೆಯಲ್ಲಿ ನಾವು ಕಲಿಸುತ್ತೇವೆ ಆದರೆ ಮುಂದಿನ ವೃತ್ತಿಪರ ಕೋರ್ಸ್ ಮಾಡಲು ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಕೆಲವೇ ಶ್ರವಣದೋಷವುಳ್ಳ ಮಕ್ಕಳಿಗೆ ವೃತ್ತಿಪರ ಡಿಪ್ಲೋಮೋ ಶಾಲೆಗಳಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ತೆರೆಯುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕರು ಆಡಳಿತ ವರ್ಗದವರು ಒಟ್ಟಿಗೆ ಸೇರಿ ಕಾರ್ಯಕ್ರಮವನ್ನು ನೆರವೇರಿಸಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *