ಹಾಸನ : ಕಾರ್ಖಾನೆಯಿಂದ ರಾಸಾಯನಿಕ ಮಿಶ್ರಿತ ನೀರನ್ನು ಹರಿಸಿದ ಪರಿಣಾಮ ಕೆರೆಯಲ್ಲಿದ್ದ ಅನೇಕ ಮೀನುಗಳ ಮಾರಣ ಹೋಮ ನಡೆದ ಘಟನೆ ನಗರದ ಹೊರವಲಯದಲ್ಲಿರುವ ಕೊಕ್ಕನಘಟ್ಟ ಗ್ರಾಮದಲ್ಲಿ ನಡೆದಿದೆ.

ಹನುಮಂತಪುರಕ್ಕೆ ಹೋಗುವ ದಾರಿ ಬಳಿ ಇರುವ ಹಿಮತ್ ಸಿಂಗ್ ಕಾ ಕಾರ್ಖಾನೆಯಿಂದ ರಾಸಾಯನಿಕಗಳನ್ನು ಹೊರ ಬಿಡುವ ಮೂಲಕ ಕೆರೆಗೆ ಸೇರಿದನ, ಕರುಗಳಿಗೂ ನೀರು ಕುಡಿಯಲು ಸಮಸ್ಯೆಯಾಗಿದೆ. ನೀರು ಕುಡಿದು ಪ್ರಾಣಿ ಪಕ್ಷಿಗಳು ಸಾಯುತ್ತಿವೆ.

ಕಳೆದ ೨೦ ವರ್ಷಗಳಿಂದಲೂ ಇಂತಹ ಸಮಸ್ಯೆ ಆಗುತ್ತಲೆ ಇದ್ದು, ಪರಿಸರ ಇಲಾಖೆ ಇತರೆ ಕಡೆ ಈ ಬಗ್ಗೆ ಅರ್ಜಿ ಕೊಟ್ಟರೇ ಕೆರೆ ನೀರು ಚನ್ನಾಗಿಯೇ ಇದೆ ಎಂದು ಕಾರ್ಖಾನೆ ಪರವಾಗಿಯೇ ಉತ್ತರ ಕೊಡುತ್ತಾರೆ. ರೈತರ ಬಗ್ಗೆ ಒಂದು ರಿಪೋರ್ಟ್ ಕೊಟ್ಟಿರುವುದಿಲ್ಲ.

ಇದರಿಂದ ಸುತ್ತ ಮುತ್ತ ಜನರು ಖಾಯಿಲೆಗಳಿಂದ ಬಳಲುತ್ತಿದ್ದು, ಅಧಿಕಾರಿಗಳು ಬಂದು ಪರಿಶೀಲಿಸಬೇಕು. ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಕಾರ್ಖಾನೆಯವರು ದಬ್ಬಾಳಿಕೆಯಿಂದ ಕೆರೆಗೆ ರಾಸಾಯನಿಕ ಬಿಡುತ್ತಿದ್ದಾರೆ ಎಂದು ದೂರಿದರು.

ಸಾವಿರಾರು ಮೀನುಗಳು ಸಾವನ್ನಪ್ಪಿ ಲಕ್ಷಾಂತರ ರೂ ನಷ್ಟವಾಗಿದೆ. ಕೂಡಲೇ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಇದೆ ವೇಳೆ ಆಗ್ರಹಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *