ಸಕಲೇಶಪುರ : ತಾಲೂಕಿನ ಕುಣಿಗನಹಳ್ಳಿ ಗ್ರಾಮದಲ್ಲಿ ಆರೋಗ್ಯಕ್ಕಾಗಿ ಯೋಗ ಕಾರ್ಯಕ್ರಮದಲ್ಲಿ ಜೀವ ರಕ್ಷ ಬ್ಲಡ್ ಸೆಂಟರ್ ಹಾಸನ, ಯೋಗ ಚೇತನ ಕೇಂದ್ರ ಅಡಗೂರು, ಕುನಿಗನಹಳ್ಳಿ ಮತ್ತು ಹೊಂಕರವಳ್ಳಿ ಗ್ರಾಮಸ್ಥರು ಹಾಗೂ ಯೋಗ ಶಿಬಿರಾರ್ಥಿಗಳ ಸಹಯೋಗದಲ್ಲಿ ಕುನಿಗನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನನ ಸ್ಮರಣಾರ್ಥವಾಗಿ ರಕ್ತದಾನ ಮತ್ತು ನೇತ್ರದಾನ ಶಿಬಿರ:

55 ಯೂನಿಟ್ ರಕ್ತ ಸಂಗ್ರಹ :

ಈ ಕಾರ್ಯಕ್ರಮವನ್ನು ಕಾಫಿ ಬೆಳೆಗಾರರು ಡಾ.ಹೆಚ್ಎಸ್ ಧರ್ಮರಾಜ್ ರವರು ಜ್ಯೋತಿ ಬೆಳಗುವ ಮುಖಾಂತರ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಹಿತಾದೃಷ್ಟಿಯಿಂದ ಕುನಿಗನಹಳ್ಳಿ ಗ್ರಾಮ ಪಂಚಾಯಿತಿ, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ಸುಮಾರು 15 ದಿನಗಳು ಯೋಗ,ಧ್ಯಾನ, ಪ್ರಾಣಾಯಾಮ ನಡೆಸಿ. ಶಿಬಿರಾರ್ಥಿಗಳೆಲ್ಲರೂ ಸೇರಿ ನಮ್ಮ ರಾಜ್ಯ ಮತ್ತು ದೇಶದಲ್ಲಿಯ ಎಲ್ಲಾರ ಜನಮನ ಗೆದ್ದ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಎಂಟು ಬಾರಿ ಅಂಬರಿಯನ್ನು ಹೊತ್ತ ಅರ್ಜುನ ಕಾಡಾನೆಗಳನ್ನು ಹಿಡಿಯುವ ಸಂದರ್ಭದಲ್ಲಿ ನಮ್ಮ ಭಾಗದಲ್ಲಿ ವೀರ ಮರಣವನ್ನು ಹೊಂದಿದೆ ಅದರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ರಕ್ತದಾನ ಮಾಡುವುದು ಒಂದು ಜೀವದಾನ ಮಾಡಿದಂತೆ ಹಾಗಾಗಿ ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಸಿಮೆಂಟ್ ಮಂಜು ಮಾತನಾಡಿ ಕುನಿಗನಹಳ್ಳಿ ವ್ಯಾಪ್ತಿಯ ಎಲ್ಲಾ ಯುವಕರು ಸೇರಿ ವೀರ ಮರಣ ಹೊಂದಿದ ಅರ್ಜುನನ ಸ್ಮರಣಾರ್ಥವಾಗಿ ರಕ್ತದಾನ ಮತ್ತು ನೇತ್ರದಾನ ಮಾಡಿರುವಂತದ್ದು ಈ ರಾಜ್ಯವೇ ಹೆಮ್ಮೆಪಡುವಂತಹ ವಿಚಾರವಾಗಿದೆ.

ನಮ್ಮ ದೇಶದಲ್ಲಿ ಬಾಂಧವ್ಯಕ್ಕೆ ಎಷ್ಟು ಗೌರವ ಕೊಡುತ್ತಾರೆ ಎಂಬುದನ್ನು ಈ ರಕ್ತದಾನ ಶಿಬಿರದ ಮೂಲಕ ತಿಳಿದುಕೊಳ್ಳಬೇಕಾಗುತ್ತದೆ. ಅರ್ಜುನ ಒಂದು ಪ್ರಾಣಿಯಾದರು ಸಹ ಪ್ರತಿಯೊಬ್ಬರೂ ಸಹ ನಮ್ಮ ಕುಟುಂಬದ ಒಬ್ಬ ಸದಸ್ಯನನ್ನ ಕಳೆದುಕೊಂಡಿರುವಂತಹ ನೋವಿದೆ. ಅರ್ಜುನ ಈ ನಾಡಿಗೋಸ್ಕರ ಎಂಟು ಬಾರಿ ಅಂಬಾರಿ ಹೊತ್ತು ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಚಾರ.

ಈ ಭಾಗದ ಜನರ ಜೀವ ತೆಗೆದು ಮತ್ತು ಬೆಳೆಗಳನ್ನು ಹಾಳು ಮಾಡುತ್ತಿದ್ದಂತಹ ಕಾಡಾನೆಗಳನ್ನು ಹಿಡಿದು ನಮ್ಮಗಳಿಗೆ ರಕ್ಷಣೆ ಕೊಡಲು ಬಂದಂತಹ ಅರ್ಜುನ ಕಾಡಾನೆಗಳ ನಡುವಿನ ಕಾಳಗದಲ್ಲಿ ವೀರಣ್ಣ ವೀರ ಮರಣ ಹೊಂದಿರುವುದು ತುಂಬಲಾಗದ ನೋವಾಗಿದೆ ಎಂದರು.

ಯೋಗ ಗುರು ಚೇತನ್ ಗುರೂಜಿ ಮಾತನಾಡಿ ಆರೋಗ್ಯವೇ ಭಾಗ್ಯ ಹಣ ,ಅಂತಸ್ತು, ಆಸ್ತಿಗೂ ಮಿಗಿಲಾದದ್ದು ಆರೋಗ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ,ಧ್ಯಾನ,ಪ್ರಾಣಾಯಾಮ,ಅಗತ್ಯವಾದದ್ದು.

ಈ ಭಾಗದ ಜನರಿಗೆ ಎಂಟು ಬಾರಿ ಅಂಬಾರಿಯನ್ನು ಹೊತ್ತ ಅರ್ಜುನನ ಮೇಲಿರುವ ಪ್ರೀತಿ,ಬಾಂಧವ್ಯ, ಅಪಾರವಾದದ್ದು. ಅದರ ಒಂದು ಸ್ಮರಣಾರ್ಥವಾಗಿ ಇಂದು ರಕ್ತದಾನ ಮತ್ತು ನೇತ್ರದಾನವನ್ನು ಎಲ್ಲರೂ ತಾವಾಗಿಯೇ ಸ್ವಯಿಚ್ಛೆಯಿಂದ ಬಂದು ಮಾಡುತ್ತಿರುವುದು ಹೆಮ್ಮೆಯ ವಿಚಾರ.

ಈದಿನ ಸುಮಾರು 55 ಯೂನಿಟ್ ರಕ್ತದಾನವಾಗಿದೆ. ಎಂದರು.

ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರು ನಂದಿತಾ ಧರ್ಮರಾಜ್, ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಿಲ್ಪ ಜಗದೀಶ್, ಪಿ ಡಿ ಓ ರಘು,ಮಾಜಿ ಅಧ್ಯಕ್ಷರುಗಳಾದ ಪುಟ್ಟರಾಜು ಹೆಗ್ಗೋವೆ, ನಿಂಗರಾಜು, ಸದಸ್ಯರುಗಳಾದ ಇಬ್ರಾಹಿಂ( ಇಬ್ಬ ), ಪ್ರಕಾಶ್, ಕೆ ಹೊಸಕೋಟೆ ಹೋಬಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್, ಲಿಖಿತ ಕಾಫಿ ಟ್ರೇಡರ್ಸ್ ಮಾಲಿಕ ಅಶೋಕ್,ಕಾಫಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ಉಪಸ್ಥಿತರಿದ್ದರು.

ವರದಿ ಮೋಹನ್ ಕಾಡ್ಲೂರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *