
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ನೂತನವಾಗಿ ‘ಕೃಷಿ ಮಾಹಿತಿ ಕೇಂದ್ರ – ಕೃಷಿ ಪ್ರಗ್ಯಾ’ ವನ್ನು ಆರಂಭಿಸಲಾಯಿತು.
ಮಾಹಿತಿ ಕೇಂದ್ರವನ್ನು ಡಾ. ಎಸ್.ಎನ್. ವಾಸುದೇವನ್, ಡೀನ್( ಕೃಷಿ), ಕೃಷಿ ಮಹಾವಿದ್ಯಾಲಯ ಕಾರೇಕೆರೆ ,ಹಾಸನ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಶಂಕರ ಎಮ್. ಹೆಚ್.ರವರು ವಹಿಸಿದ್ದರು.
ಮಾಹಿತಿ ಕೇಂದ್ರದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳನ್ನು ಗ್ರಾಮಸ್ಥರಿಗೆ ವಿವರಿಸಲಾಯಿತು. ಗ್ರಾಮಸ್ತರನ್ನು ಉದ್ದೇಶಿಸಿ ಡೀನ್ ರವರು ವೈಜ್ಞಾನಿಕವಾಗಿ ಕೃಷಿ ಪದ್ಧತಿ ಅನುಸರಿಸುವುದು ಈ ಆಧುನಿಕ ಯುಗದಲ್ಲಿ ಅತಿ ಅಗತ್ಯವೆಂದು ತಿಳಿಸಿದರು ಹಾಗೂ ಇಂತಹ ಮಾಹಿತಿಯನ್ನು ಪಸರಿಸುವಲ್ಲಿ ಕೃಷಿ ಮಾಹಿತಿ ಕೇಂದ್ರವು ಮಹತ್ತರದ ಪಾತ್ರ ವಹಿಸುತ್ತದೆಂದು ತಿಳಿಸಿದರು.
ಜ್ಞಾನದೀಪ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಮಲ್ನಾಡ್ ಜಾಕಿರ್ ರವರು ಮನುಕುಲದ ಅಸ್ತಿತ್ವವಿರುವವರೆಗೂ ರೈತನ ಅವಶ್ಯಕತೆ ಇದ್ದೇ ಇರುತ್ತದೆ ಹಾಗಾಗಿ ರೈತರ ಅಭಿವೃದ್ಧಿ ಅತಿ ಮುಖ್ಯವೆಂದು ತಿಳಿಸಿದರು ಹಾಗೂ ಈ ಕಾರ್ಯದಲ್ಲಿ ಸೂಕ್ತ ಮಾಹಿತಿಯನ್ನು ರೈತರಿಗೆ ಒದಗಿಸುವುದು ಅತ್ಯಗತ್ಯವೆಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಶಶಿಕಿರಣ್.ಎ.ಎಸ್., ಡಾ.ನವೀನ್ ಕುಮಾರ್.ಪಿ, ಡಾ.ಶಿವಬಸಪ್ಪ ಕಂದಕೂರ, ಡಾ .ಸದಾಶಿವನಗೌಡ . ಎಸ್.ಎನ್.ಓ, ಡಾ.ವಾಘಮರೆ ವಿಜಯ್ ಕುಮಾರ್ ವೀರಪ್ಪ , ಗ್ರಾಮದ ಮುಖಂಡರು ಹಾಗೂ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.




