
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ರೈತರ ತೋಟಗಳಿಗೆ ‘ಕ್ಷೇತ್ರ ಭೇಟಿ’ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕೀಟಶಾಸ್ತ್ರತಜ್ಞರಾದ ಡಾ. ಸುನಿತಾ ಟಿ.ಆರ್ ಹಾಗೂ ಬೇಸಾಯ ಶಾಸ್ತ್ರ ತಜ್ಞರಾದ ಡಾ. ಪ್ರಮೋದ್ .ಜಿ ರವರು ಆಗಮಿಸಿದ್ದರು. ಗ್ರಾಮದ ರೈತರಾದ ವಸಂತ್ ರವರ ತೋಟಕ್ಕೆ ಭೇಟಿ ನೀಡಲಾಯಿತು.
ಅವರು ತೆಂಗು, ಬಾಳೆ, ಅಡಿಕೆ ಹಾಗೂ ಮುಂತಾದ ಹಣ್ಣಿನ ಬೆಳೆಗಳನ್ನು ಬೆಳೆದಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸುನಿತಾ. ಟಿ.ಆರ್ ರವರು ಮಸಿರೋಗದ ನಿರ್ವಹಣೆಗೆ ಬೇವಿನ ಎಣ್ಣೆ ಸಿಂಪಡಿಸಬೇಕೆಂದು ಶಿಫಾರಸ್ಸು ಮಾಡಿದರು ಹಾಗೂ ಸಿಂಪಡಣೆ ಮಾಡುವಾಗ ದ್ರಾವಣಕ್ಕೆ ಮೈದಾಹಿಟ್ಟನ್ನು ಬೆರೆಸುವುದು ಉತ್ತಮ ಎಂದು ತಿಳಿಸಿದರು.
ಕೆರೆ ಗೋಡನ್ನು ಅಧಿಕವಾಗಿ ತೆಂಗಿನ ತೋಟದಲ್ಲಿ ಹಾಕುವುದು ಸೂಕ್ತವಲ್ಲ, ಇದರಿಂದ ಬೇರುಗಳ ಉಸಿರಾಟಕ್ಕೆ ತೊಂದರೆಯಾಗುತ್ತದೆಂದು ತಿಳಿಸಿದರು.
ಸೇಬಿನ ಮರವು ಎತ್ತರಕ್ಕೆ ಬೆಳೆಯುವುದನ್ನು ತಡೆಯಲು ಮರದ ತುದಿಗೆ ಕಲ್ಲನ್ನು ಕಟ್ಟಬೇಕೆಂದು ಸಂಪನ್ಮೂಲ ವ್ಯಕ್ತಿಗಳಾದ ಡಾ. ಪ್ರಮೋದ್ . ಜಿ ರವರು ತಿಳಿಸಿದರು.
ಈ ಕ್ಷೇತ್ರ ಭೇಟಿ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಹಾಗು ರೈತರು ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.



