
*ವೈಜ್ಞಾನಿಕ ಕೈ ತೊಳೆಯುವ ವಿಧಾನ*
ಚಗಚಗೆರೆಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಕಾರ್ಯಾನುಭವ ಶಿಬಿರ ಅಂಗವಾಗಿ ಕೃಷಿ ಮಹಾವಿದ್ಯಾನಿಲಯದ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳಿಂದ ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನದ ಬಗ್ಗೆ ಶಾಲೆಯ ಮಕ್ಕಳಿಗೆ ತಿಳಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹಲವಾರು ರೋಗಗಳ ಮೂಲ ಸೇವಿಸುವ ಆಹಾರವಾಗಿದೆ ಎಂಬುದು ಕಂಡುಬರುತ್ತದೆ, ಹೀಗಿರುವಾಗ ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಅರಿವು ಇರಬೇಕಾಗುವುದು ಅನಿವಾರ್ಯ ಮತ್ತು ಅವಶ್ಯಕ, ಈ ಉದ್ದೇಶಕ್ಕಾಗಿಯೇ ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನವನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸಲಾಯಿತು ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ವಿವರಿಸಲಾಯಿತು.
ಆಗಾಗ್ಗೆ ಕೈ ತೊಳೆಯುವುದರಿಂದ ನಮ್ಮನ್ನು ನಾವು ಸೂಕ್ಷ್ಮಾಣು ಜೀವಿಗಳಿಂದ ರಕ್ಷಿಸಿಕೊಳ್ಳಬಹುದು ಎಂಬುದನ್ನು ಮಕ್ಕಳಲ್ಲಿ ಮನದಟ್ಟು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಕಚಗರಿಯ ಶಿಕ್ಷಕ ವೃಂದ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು ಹಾಗೂ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮದ ಕೇಂದ್ರ ಬಿಂದುವಾದಂತಹ ಮಕ್ಕಳು ಭಾಗವಹಿಸಿದ್ದರು.



