
ಸಕಲೇಶಪುರ : ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಸಹನ ಅವರನ್ನು ಪದಚ್ಯುತಿಗೊಳಿಸಲು ದಿನಾಂಕ 22-11-2023 ರಂದು ಪಂಚಾಯತಿ ಸದಸ್ಯರು ಅವಿಶ್ವಾಸ ಗೊತ್ತುವಳಿ ನಿಯಮ 3(1) ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು,
ಒಟ್ಟು 13 ಜನ ಸದಸ್ಯರ ಬಲದಲ್ಲಿ ದಿನಾಂಕ 19-12-2023 ರಂದು ಅದ್ಯಕ್ಷೆ ಸಹನ ಅವರ ವಿರುದ್ದ 9 ಜನ ಸದಸ್ಯರು ಅವಿಶ್ವಾಸ ನಿರ್ಣಯ ಮಾಡಿದ್ದರಿಂದ ನಿಯಮ 2/3 ಕ್ಕಿಂತ ಹೆಚ್ಚಿನ ಸದಸ್ಯರು ಅವಿಶ್ವಾಸ ಮಂಡಿಸಿದ್ದರಿಂದ ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷೆ ಸಹನ ಅವರು ತಮ್ಮ ಅಧಿಕಾರದಿಂದ ಪದಚ್ಯುತಿಗೊಂಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಡಾ.ಶೃತಿ ಅಧಿಸೂಚನೆ ಹೊರಡಿಸಿದ್ದಾರೆ.

