ಹಾಸನ: ನಗರದ ಮಹಾರಾಜ ಉದ್ಯಾನವನದಲ್ಲಿ ಜಿಲ್ಲಾ ಅಮೇಚೂರು ಬಾಡಿ ಬಿಲ್ಡರ್ ಸಂಸ್ಥೆ, ಹೆಲ್ತ್ ಜಿಮ್, ಯೋಗಾ ಕೇಂದ್ರ, ಕರಾಟೆ ತರಬೇತಿ ಸೇರಿದಂತೆ ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಹಕಾರ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಇಬ್ಬರಿಗೆ ಮತ್ತು ಕ್ರೀಡೆಯಲ್ಲಿ ವಿಜೇತರಾದ ಇಬ್ಬರು ಸೇರಿ ಒಟ್ಟು ನಾಲ್ಕು ಜನ ಸಾಧಕರಿಗೆ ಸನ್ಮಾನಿಸಿದರು.

ನಗರಸಭೆ ಮಾಜಿ ಸದಸ್ಯರಾದ ಹೆಚ್.ಎಂ. ಯಶವಂತ್, ಜಿಲ್ಲಾ ರೆಡ್ ಕ್ರಾಸ್ ಛೇರ‍್ಮನ್ ಹೆಮ್ಮಿಗೆ ಮೋಹನ್, ಪವರ್ ಲಿಪ್ಟಿಂಗ್ ಗೇಮ್ ವಿಜೇತರಾದ ಸಂತೋಷ್ ಶೆಟ್ಟಿ ಹಾಗೂ ಸಿಟ್ಟಿಂಗ್ ವಾಲಿಬಾಲ್ ವಿಜೇತರಾದೆ. ಅಂತೋಣಪ್ಪ ಹಾಗೂ ಕರಾಟೆಯಲ್ಲಿ ಸಾಧನೆ ಮಾಡಿದವರನ್ನು ಕೂಡ ಇದೆ ವೇಳೆ ಸನ್ಮಾನಿಸಿ ಅಭಿನಂದಿಸಿದರು.

ನಂತರ ಸನ್ಮಾನಿತರು ಮಾತನಾಡುತ್ತಾ, ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಛೇರ‍್ಮನ್ ಹೆಚ್.ಪಿ. ಮೋಹನ್ ಮಾತನಾಡಿ, ಕ್ರೀಡೆಯ ಸಾಧಕರ ಜೊತೆ ನಮಗೂ ಕೂಡ ಸನ್ಮಾನವನ್ನು ಮಾಡಲಾಗಿರುವುದು ಇದೊಂದು ದೊಡ್ಡ ಕೊಡುಗೆಯಾಗಿದೆ. ಕೈಲಾಸ್ ಮತ್ತು ಸತೀಶ್ ಅವರನ್ನು ಹಿಂದೆ ಹಾಸನದ ಬ್ರಾಂಡ್ ಬಾಡಿ ಬಿಲ್ಡರ‍್ಸ್ ಎಂದು ಕರೆಯುತ್ತಿದ್ದೇವು. ಅವರ ಶೋ ನೋಡುವುದೆಂದರೇ ನಮಗೆ ಸಂತೋಷವಾಗುತಿತ್ತು. ಸಹಕಾರಿ ರಂಗದಲ್ಲಿ ಬಹಳಷ್ಟು ಜನ ಸಾಧಕರು ಇದ್ದಾರೆ ಎಂದರು.

ನಗರಸಭೆ ಮಾಜಿ ಸದಸ್ಯ ಯಶವಂತ್ ಮಾತನಾಡಿ, ಹಾಸನಾ ಜಿಲ್ಲೆಯಿಂದ ನಮಗಿಬ್ಬರಿಗೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ಸಹಕಾರ ಕ್ಷೇತ್ರದ ಪ್ರಯಣದಲ್ಲಿ ಬಹಳಷ್ಟು ಜನ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ್ದು, ಅವರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

ಈ ಪ್ರಶಸ್ತಿ ಸಿಗಬೇಕಾದರೇ ವಯಕ್ತಿಕವಾಗಿ ಒಬ್ಬನೆ ಕಾರಣವಾಗಿರುವುದಿಲ್ಲ. ಸಹಕಾರಿ ಕ್ಷೇತ್ರದ ಅನೇಕ ಬಂದುಗಳು ಸೇರಿ ಪೂರಕವಾದ ವಾತವರಣ ನಿರ್ಮಾಣ ಮಾಡಿ ಈ ಪ್ರಶಸ್ತಿಗೆ ಅರ್ಹರಾಗಿ ಮಾಡಿದ್ದಾರೆ. ಕಳೆದ ೧೬ ವರ್ಷದ ಸೇವೆಗೆ ಸಂತೋಷ ಕೊಟ್ಟಿದೆ ಎಂದರು. ಜೊತೆ ಜೊತೆಗೆ ವಿಜಾಪುರದಲ್ಲಿ ಪ್ರಶಸ್ತಿ ನೀಡಿರುವುದಕ್ಕೆ ಇಲ್ಲಿ ನಮ್ಮನ್ನು ಅಭಿನಂದಿಸುತ್ತಿರುವುದಕ್ಕೆ ಕೃತಜ್ಞರಾಗಿದ್ದೇವೆ ಎಂದು ಹೇಳಿದರು.

ನಗರಸಭೆ ಸದಸ್ಯ ಸಿ. ಪ್ರಸಾದ್ ಕ್ರಾಂತಿ ತ್ಯಾಗಿ ಮಾತನಾಡಿ, ಇಂತಹ ಪ್ರಶಸ್ತಿ ಪಡೆದಿರುವವರಿಗೆ ಇನ್ನಷ್ಟು ಜವಬ್ಧಾರಿ ಹೆಚ್ಚಾಗಿದೆ. ಹೆಚ್.ಪಿ. ಮೋಹನ್ ಅವರು ಪರಿಸರದ ಬಗ್ಗೆ ಹಾಗೂ ಜಿಲ್ಲೆಯ ನೆಲ ಜಲದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹೆಚ್ಚು ಮಾಡಿದ್ದಾರೆ. ಯಶವಂತ್ ಅವರು ಕೂಡ ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ಕ್ರೀಡೆಯಲ್ಲಿ ಅಂತೋಣಿ ಮತ್ತು ಸಂತೋಷ್ ಶೆಟ್ಟಿ ಅವರು ಕ್ರೀಡ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಅವರಿಗೂ ಕೂಡ ಹೆಚ್ಚಿನ ಜವಬ್ಧಾರಿ ಇದ್ದು, ಇನ್ನಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಿದರು.

ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಅನೇಕರು ಸೇವೆ ಮಾಡುತ್ತಿದ್ದು, ಈ ಬಾರಿ ಜಿಲ್ಲೆಯಿಂದ ಇಬ್ಬರನ್ನು ಗುರುತಿಸಿದೆ. ಕ್ರೀಡೆಯಲ್ಲಿಯೂ ಕೂಡ ಪ್ರಶಸ್ತಿ ಪಡೆದಿದ್ದು, ಮುಂದೆ ಇನ್ನಷ್ಟು ಸೇವೆ ಮಾಡುವ ಅವಕಾಶ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿದರು.

ಕ್ರೀಡಾ ಸಾಧಕರಿಗೆ ಏನಾದರೂ ಹಣದ ಅವಶ್ಯಕತೆ ಇದ್ದರೇ ನಗರಸಭೆ ಮತ್ತು ನನ್ನಿಂದ ವಯಕ್ತಿಕ ಸಹಾಯ ಮಾಡಲಾಗುವುದು ಎಂದರು. ಇನ್ನು ಮಹಿಳೆಯರಿಗೆ ಜಿಮ್ ಮಾಡಲು ಈ ಕಟ್ಟಡದ ಮೇಲೆ ಮತೊಂದು ಕಟ್ಟಡದ ಅವಶ್ಯಕತೆ ಇದೆ ಮತ್ತು ಇರುವ ಕ್ರೀಡಾ ಸಾಮಾಗ್ರಿ ಹಳೆಯದಾಗಿದ್ದು, ಹೊಸದಾಗಿ ಕ್ರೀಡಾ ಸಾಮಾಗ್ರಿ ಬೇಕೆಂದು ನಿರಂಜನ್ ಅವರು ಗಮನಸೆಳೆದಿದ್ದು, ಶಾಸಕ ಸ್ವರೂಪ್ ಪ್ರಕಾಶ್ ಬಂದಿದ್ದಾಗ ಇಲ್ಲಿ ಮನವಿ ಮಾಡಲಾಗಿತ್ತು. ಈಗಾಗಲೆ ಸಭೆಯಲ್ಲಿ ಪಾಸಾಗಿ ಅಂದಾಜು ತಯಾರಿಸಲಾಗಿದೆ.

ಈ ಹಿಂದಿನ ಶಾಸಕರು ಪಾಳು ಬಿದ್ದಿರುವ ಅಭಿವೃದ್ಧಿಗೆ ೧೫ ಕೋಟಿ ಖರ್ಚು ಮಾಡುವ ಸಮಯದಲ್ಲಿ ಕಟ್ಟಡ ನಿರ್ಮಿಸಲು ಮುಂದಾದಗ ನಾವೆ ಬೇಡ, ಬರೀ ಕಟ್ಟಡಗಳೆ ಆಗುತ್ತದೆ ಎಂದು ಹೇಳಿದ್ದೆವು. ಇರುವ ಕಟ್ಟಡದ ಮೇಲೆ ನಿರ್ಮಿಸಲು ಈಗ ಸಭೆಯಲ್ಲಿ ಈಗ ಆಗಿದೆ ಎಂದರು. ನಗರಸಭೆಗೆ ಇನ್ನೊಂದು ತಿಂಗಳಲ್ಲಿ ಹೊಸ ಅಧ್ಯಕ್ಷರು ಬರಲಿದ್ದು, ಇಲ್ಲಿನ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.

ಜಿಲ್ಲಾ ಅಮೇಚೂರು ಬಾಡಿ ಬಿಲ್ಡರ್ ಸಂಸ್ಥೆ ಅಧ್ಯಕ್ಷರಾದ ಸತೀಶ್, ಕಾರ್ಯದರ್ಶಿ ಮೋಹನ್, ನಿರಂಜನ್, ಕೈಲಾಸ್ ಶಂಕರ್, ಗಿರೀಗೌಡ, ಯೋಗಾ ಶೀಕ್ಷಕ ಮನೋಹರ್, ಕರಾಟೆ ತರಬೇತುದಾರ ಮಹದೇವ್, ಭಾನುಮತಿ, ಕುಮಾರ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *