*ಉತ್ತಮ ಆಹಾರ ಪದ್ಧತಿ , BMI ಹಾಗೂ ಉತ್ತಮ ಆರೋಗ್ಯ*

ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ಹಾಗೂ ವರ್ಷದ ಬಿ.ಟೆಕ್ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷದ ಬಿ. ಎಸ್ಸಿ ಕೃಷಿ ವಿಧ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಉತ್ತಮ ಆಹಾರ ಪದ್ಧತಿ ,BMI ಮತ್ತು ಉತ್ತಮ ಆರೋಗ್ಯ* ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಭೌತಿಕ ದ್ರವ್ಯರಾಶಿ ಸೂಚಿ (BMI) ಅಂದರೆ ಒಬ್ಬ ವ್ಯಕ್ತಿಯ ತೂಕ ಮತ್ತು ಎತ್ತರವನ್ನು ಹೋಲಿಕೆ ಮಾಡುವ ಒಂದು ಅಳತೆ ಗೋಲು. 18.5 ಕ್ಕಿಂತ ಕಡಿಮೆ ಮಟ್ಟದ BMI ಇರುವವರು ಕಡಿಮೆ ತೂಕ ಹೊಂದಿರುತ್ತಾರೆ. 25 ಕ್ಕಿಂತ ಅಧಿಕ BMI ಯನ್ನು ಹೆಚ್ಚು ತೂಕ ಎಂದು ಮತ್ತು 30ಕ್ಕಿಂತ ಹೆಚ್ಚಿನ BMI ಉಳ್ಳವರು ಬೊಜ್ಜುಮೈ ಎಂದು ಪರಿಗಣಿಸಲಾಗುತ್ತದೆ.

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಮಾನವನಿಗೆ ಆರೋಗ್ಯ ಭಾಗ್ಯಕ್ಕಿಂತ ಬೇರೆ ಭಾಗ್ಯವಿಲ್ಲ . ಆದರೆ ಈ ಉತ್ತಮ ಆರೋಗ್ಯ ಹೊಂದುವ ಗುಟ್ಟು ನಾವು ತೆಗೆದುಕೊಳ್ಳುವ ದೈನಂದಿನ ಆಹಾರ ಪದ್ಧತಿಯಲ್ಲಿ ಅಡಗಿದೆ ಎಂಬುದನ್ನು ಅರಿತುಕೊಳ್ಳುವುದು ಅತ್ಯಂತ ಅವ್ಯಕವಾಗಿದೆ.

ಉತ್ತಮ ಆಹಾರ ಪದ್ಧತಿ ಎಂದರೆ, ನಾವು ತೆಗೆದುಕೊಳ್ಳುವ ಆಹಾರವು ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಅಗತ್ಯ ಪೋಷಾಂಶಗಳನ್ನು ಒದಗಿಸುವ ಮೂಲಕ ಆರೋಗ್ಯಕರ ದೇಹ ಕಾಪಾಡಿಕೊಳ್ಳಲು ಸಹಾಯಕವಾಗಿರಬೇಕು.

ಇದನ್ನು ಸಾಧಿಸಲು ನಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಮುಖ್ಯ ಆಹಾರ ಪದಾರ್ಥಗಳೆಂದರೆ -ಹಸಿ ತರಕಾರಿಗಳು, ಹಣ್ಣುಗಳು, ಡೈರಿ ಉತ್ಪನಗಳು,ದೇಹಕ್ಕೆ ಅವಶ್ಯಕವಾದಷ್ಟು ನೀರು ಇತ್ಯಾದಿ. ಕೊಬ್ಬಿನ ಹಾಗೂ ಸಕ್ಕರೆ ಅಂಶ ಅಧಿಕವಾಗಿ ಹೊಂದಿರುವ ಜಂಕ್ ಫುಡ್ ಸೇವನೆ ಸಾಧ್ಯವಾದಷ್ಟು ಕಡಿಮೆ ಮಾಡುಬೇಕು. ಹೀಗೆ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ಗೋಪಿಕಾ ಸಿ ಮುತ್ತಗಿ ಆಹಾರ ಸಂಸ್ಕರಣಾ ಮತ್ತು ತಂತ್ರಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ಇವರು ಕಾರ್ಯಕ್ರಮದ ಕುರಿತು ಮತ್ತಷ್ಟು ಮಾಹಿತಿ ನೀಡಿದರು. ಹಾಗು ಗ್ರಾಮದ ಜನರಾದ ಗಾಯತ್ರಿ, ಮಂಜಣ್ಣ , ಗಂಗಾಧರ , ಚಂದು ಮುಂತಾದವರು ಪಾಲ್ಗೊಂಡಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *