ಹಾಸನ ಜಿಲ್ಲೆಯ ರಾಂಪುರದಲ್ಲಿ ತುಂಡು ಬಟ್ಟೆ ಧರಿಸಿದ ಕಾರಣಕ್ಕಾಗಿ ಜೀವನ್ ಎಂಬಾತ ತನ್ನ ಪತ್ನಿ ಜ್ಯೋತಿಯನ್ನೇ ಹತ್ಯೆಗೈದು ಪರಾರಿಯಾಗಿರೋದಾಗಿ ತಿಳಿದು ಬಂದಿದೆ.

ಒಂದು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಜೀವನ್ ಹಾಗೂ ಜ್ಯೋತಿ ವಿವಾಹವಾಗಿದ್ದರು. ಪತ್ನಿ ಮಾಡ್ರೆನ್ ಡ್ರೆಸ್ ಹಾಕೋದು ಇಷ್ಟವಿರಲಿಲ್ಲ. ಅಂತಹ ಉಡುಗೆ ಧರಿಸದಂತೆ ಅನೇಕ ಬಾರಿ ಜೀವನ್ ಪತ್ನಿ ಜ್ಯೋತಿಗೆ ಎಚ್ಚರಿಸಿದ್ದರೂ ಆಕೆ ಬದಲಾಗಿರಲಿಲ್ಲ.

ಇದೇ ಕಾರಣಕ್ಕೆ ಸಿಟ್ಟುಗೊಂಡಂತ ಜೀವನ್, ಪತ್ನಿಯನ್ನು ಹೊರಗಡೆ ಕರೆದುಕೊಂಡು ಹೋಗೋದಾಗಿ ಕರೆದೊಯ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಎಸ್ಕೇಪ್ ಆಗಿರೋದಾಗಿ ತಿಳಿದು ಬಂದಿದೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದಂತ ಅರಸೀಕೆರೆ ಗ್ರಾಮಾಂತರ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರೋ ಜೀವನ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *