
ಸಕಲೇಶಪುರ : ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅವೈಜ್ಞಾನಿಕ ನಿರ್ಮಿಸಿದ ರಸ್ತೆಯ ಉಬ್ಬುನ್ನು ಶಾಸಕ ಸಿಮೆಂಟ್ ಮಂಜು ತೆರವು ಗೊಳಿಸಿದರು.ಮಂಗಳವಾರ ತಾಲೂಕಿನ ಬಾಳ್ಳುಪೇಟೆ ಬೈಪಾಸ್ ರಸ್ತೆಯಲ್ಲಿ ಗುತ್ತಿಗೆದಾರರು ಹೆದ್ದಾರಿಯಲ್ಲಿನ ಗುಂಡಿ ಮುಚ್ಚುವ ವೇಳೆ ಹಪ್ಸ್ ರೀತಿ ನಿರ್ಮಾಣ ಮಾಡಿದ್ದರು.
ಇದರಿಂದ ದಿನನಿತ್ಯ ಸಾವಿರಾರು ವಾಹನ ಸಂಚಾರಿಸುವ ಈ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದನ್ನು ಮನಗಂಡ ಶಾಸಕರು ಹೆದ್ದಾರಿ ಗುತ್ತಿಗೆದಾರರಿಗೆ ಕೂಡಲೇ ಉಬ್ಬು ತೆರವು ಗೊಳಿಸಬೇಕೆಂದು ಸೂಚನೆ ನೀಡಿದ್ದರು.
ನೇರವಾಗಿರುವ ರಸ್ತೆಯಲ್ಲಿ ಏಕಾಏಕಿ ಹಪ್ಸ್ ರೀತಿ ನಿರ್ಮಾಣ ಮಾಡಿದನ್ನು ಇದೀಗ ಶಾಸಕರ ಖಡಕ್ ಸೂಚನೆ ಮೇರೆಗೆ ಸಮತಟ್ಟಾಗಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅವರು ಮಾಡಿ ಕೊಡಲಾಗಿದೆ.
ಕಾಮಗಾರಿ ವೇಳೆ ಶಾಸಕರು ಖುದ್ದು ಸ್ಥಳದಲ್ಲಿದ್ದು ಪರಿಶೀಲನೆ ನೆಡೆಸಿದರು.



