ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಅರಣ್ಯಕೃಷಿಯ ಮಹತ್ವ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಅರಣ್ಯಕೃಷಿಯ ಮಹತ್ವ ಹಾಗೂ ಲಾಭಗಳ ಬಗ್ಗೆ ವಿದ್ಯಾರ್ಥಿನಿಯಾದ ಆಶ್ವಿಜ ರವರು ತಿಳಿಸಿದರು. ಅರಣ್ಯ ಕೃಷಿ ಪದ್ಧತಿಯಲ್ಲಿ ಬೆಳೆಸಬಹುದಾದ ಮರಗಳು ಹಾಗೂ ಅವುಗಳ ವಿಶೇಷತೆಯ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಅರಣ್ಯ ಕೃಷಿ ಪದ್ಧತಿ ಒಂದು ಪರಿಸರ ಸ್ನೇಹಿ ಹಾಗೂ ಆದಾಯಾತ್ಮಕ ಕೃಷಿ ಚಟುವಟಿಕೆಯಾಗಿದೆ ಎಂದು ತಿಳಿಸಿದರು.

ಭೂಮಿಯ ಸಂರಕ್ಷಣೆಯಲ್ಲಿ ಹಾಗೂ ಬೆಳೆಗಳಿಗೆ ಸೂಕ್ತ ವಾತಾವರಣ ಒದಗಿಸುವಲ್ಲಿ ಅರಣ್ಯಕೃಷಿ ಒಂದು ಪ್ರಮುಖ ಪಾತ್ರ ವಹಿಸುತ್ತದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *