
ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಹಿರಿಸಮುದ್ರ ಗ್ರಾಮದಲ್ಲಿ ; ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-2024 ರ ಅಂಗವಾಗಿ ಅಂತಿಮ ವರ್ಷದ ಆಹಾರ ತಂತ್ರಜ್ಞಾನ ಹಾಗೂ ಕೃಷಿ ವಿದ್ಯಾರ್ಥಿಗಳು *ಆಹಾರ ಕಲಬೆರಕೆ ಮತ್ತು ಆಹಾರ ಸಂರಕ್ಷಣೆ* ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆಹಾರ ಕಲಬೆರಕೆ ಎಂದರೆ ಗುಣಮಟ್ಟ ಅಥವಾ ಕೊಟ್ಟಿರುವ ವಸ್ತುವಿನ ಸ್ವರೂಪವು ವಿದೇಶಿ ವಸ್ತುವಿನ ಸೇರ್ಪಡೆಯ ಮೂಲಕ ಕಡಿಮೆಯಾಗುತ್ತದೆ ಅಥವಾ ಕೆಳಮಟ್ಟದ ವಸ್ತುವನ್ನು ಹಾಕಿ ಪ್ರಮುಖ ಅಂಶವನ್ನು ತೆಗೆದುಹಾಕುವುದು.
ಆಹಾರ ಕಲಬೆರಿಕೆಯು ಹೇಗೆ ಒಂದು ಆಹಾರ ಉತ್ಪನ್ನದ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ ಹಾಗೂ ಹೇಗೆ ಆಹಾರದಲ್ಲಿನ ಪೌಷ್ಟಿಕತೆಯನ್ನು ಕಡಿಮೆಗೊಳಿಸುತ್ತದೆ, ಆಹಾರ ಕಲಬೆರಿಕೆಯನ್ನು ಕಂಡುಹಿಡಿದ ವಿಧಾನ ಅಥವಾ ಪರೀಕ್ಷೆ , ಈ ಎಲ್ಲವನ್ನು ರೈತರ ಅರಿವಿಗೆ ತರಲಾಯಿತು.
ಆಹಾರ ಕಲಬೆರಕೆ ಕಂಡುಹಿಡಿಯುವುದನ್ನು ಪ್ರಾತ್ಯಕ್ಷಿಕೆ ಹಾಗೂ ಚಿತ್ರಗಳ ಮೂಲಕ ತಿಳಿಸಿಕೊಡಲಾಯಿತು.
ಈ ಕಾರ್ಯಕ್ರಮದ ಮೂಲಕ ಈ ವಿವರಗಳ ಜ್ಞಾನವನ್ನು ಹಿರಿಸಮುದ್ರ ಗ್ರಾಮದ ರೈತ ಹಾಗೂ ರೈತ ಮಹಿಳೆಯರಿಗೆ ಸಂಕ್ಷಿಪ್ತವಾಗಿ ಅರಿವು ತುಂಬಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅನಿತಾ.ಎಸ್ , ಸಹಾಯಕ ಪ್ರಾಧ್ಯಾಪಕರು ಬೇಕರಿ ತಂತ್ರಜ್ಞಾನ, ಕೃಷಿ ಮಹಾವಿದ್ಯಾಲಯ ಹಾಸನ, ಆಗಮಿಸಿದ್ದು ಈ ಕಾರ್ಯಕ್ರಮವನ್ನು ಕುರಿತು ರೈತರಿಗೆ ಉಪಯುಕ್ತ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದರು.
