
*ಪೌಷ್ಠಿಕಾಂಶದ ಕೊರತೆಯ ಅಸ್ವಸ್ಥತೆಗಳು*
ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಟೆಕ್ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷದ ಬಿ. ಎಸ್ಸಿ ಕೃಷಿ ವಿಧ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24 ರ ಅಂಗವಾಗಿ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ *ಪೌಷ್ಠಿಕಾಂಶದ ಕೊರತೆಯ ಅಸ್ವಸ್ಥತೆಗಳು* ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪೌಷ್ಠಿಕಾಂಶದ ಕೊರತೆ ಎಂದರೆ ನಮ್ಮ ದೇಹವು ಸಂಕೀರ್ಣವಾದ ವ್ಯವಸ್ಥೆಯಾಗಿದ್ದು ಆತ್ತ್ಯುತ್ತಮ ಕಾರ್ಯನಿರ್ವಹಿಸಲು ವಿವಿಧ ಪೋಷಕಾಂಶಗಳ ಸೂಕ್ಷ್ಮ ಸಮತೋಲನದ ಅಗತ್ಯ ವಿರುತ್ತದೆ ಆ ಸೂಕ್ಷ್ಮ ಸಮತೋಲನದ ಪೂರೈಕೆ ಯಾಗದಿದ್ದರೆ ಅದನ್ನು ಪೌಷ್ಠಿಕಾಂಶದ ಕೊರತೆ ಎಂದು ಕರೆಯುತ್ತಾರೆ.
ಇದನ್ನೂ ತಡೆಗಟ್ಟಲು ಸೇವಿಸಿ ಬೇಕಾದ ಪೋಷಕಾಂಶಗಳು ಕಾರ್ಬೋಹೈಡ್ರೇಟ್‌ಗಳು,ಪ್ರೋಟೀನ್ಗಳು,ಖನಿಜಗಳು,ಜೀವಸತ್ವಗಳು,ಕೊಬ್ಬುಗಳು ಮುಂತಾದವುಗಳು.ನಿರ್ದಿಷ್ಟ ಪೋಷಕಾಂಶದ ಕೊರತೆಗಳು:- ವಿಟಮಿನ್ ಡಿ ಕೊರತೆ, ವಿಟಮಿನ್ ಸಿ ಕೊರತೆ, ವಿಟಮಿನ್ ಬಿ12 ಕೊರತೆ, ಅಯೊಡಿನ್ ಕೊರತೆ, ವಿಟಮಿನ್ ಎ ಕೊರತೆ,ಕ್ಯಾಲ್ಸಿಯಂ ಕೊರತೆ ಮುಂತಾದವು.
ಈ ಕೊರತೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು 1)ಪೌಷ್ಠಿಕ ಆಹಾರ ಸೇವಿಸಬೇಕು 2) ಕಬ್ಬಿಣಾಂಶವಿರುವ ಆಹಾರಗಳಾದ ನುಗ್ಗೇ ಸೋಪ್ಪು, ಪಾಲಕ್ ಸೊಪ್ಪು ಮುಂತಾದವುಗಳನ್ನು ಸೇವಿಸಬೇಕು 3) ಸೂರ್ಯರಶ್ಮಿ ಗೆ ಮೈ ಒಡ್ಡುವುದು ಮತ್ತು ಪೂರಕಗಳಿಂದ ವಿಟಮಿನ್ ಡಿ ಪಡೆದುಕೊಳ್ಳಬೇಕು 4) ಹಾಲು ಅಥವಾ ಹಾಲಿನ ಉತ್ಪನ್ನಗಳ ಸೇವನೆ ಮಾಡಬೇಕು.
ಈ ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ|| ಅನೀತಾ ಎಸ್ ಆಹಾರ ಸಂಸ್ಕರಣ ಮತ್ತು ತಂತ್ರಜ್ಞಾನ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ಇವರು ಕಾರ್ಯಕ್ರಮದ ಕುರಿತು ಮತ್ತಷ್ಟು ಮಾಹಿತಿ ನೀಡಿದರು. ಹಾಗು ಗ್ರಾಮದ ಜನರಾದ ಶಿವೆಗೌಡ, ದೇವರಾಜು ಟಿ , ಚಂದು ಮುಂತಾದವರು ಪಾಲ್ಗೊಂಡಿದ್ದರು.
