ಸಕಲೇಶಪುರ :- ರೈಲ್ವೆ ನೌಕರರಿಂದ ಸಕಲೇಶಪುರದಲ್ಲಿ ಉಪವಾಸ ಸತ್ಯಾಗ್ರಹ ಸೋಮವಾರ ದಿಂದ ಆರಂಭಿಸಿದ್ದು ನೂತನ ಪಿಂಚಣಿ ಬೇಡ ನೂತನ ಪಿಂಚಣಿ ಯೋಜನೆ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರದಿಂದ ಸತತ 4 ದಿನ ಗಳಿಂದ SOUTH WESTREN MAZDOOR UNION ಸಂಘದ ವತಿಯಿಂದ ನಗರದ ರೈಲ್ವೆ ನಿಲ್ಯಾಣ ಮುಂಭಾಗ ಉಪವಾಸ ಸತ್ಯಾಗ್ರಹವನ್ನು ಆರಂಬಿಸಿದ್ದೆವೆ ಎಂದು ಸಂಘದ ಕಾರ್ಯದರ್ಶಿ ಪಿ ಬಾಬು ಹೇಳಿದರು

ನಂತರ ಮಾಧ್ಯಮ ರವರೊಂದಿಗೆ ಮಾತನಾಡಿದ ಇವರುಕೇಂದ್ರ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು, ರೈಲ್ವೆ ಇಲಾಖೆಯನ್ನು ಖಾಸಗಿಕರಣ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು.

ಈಗಾಗಲೇ ದೇಶದ ಅನೇಕ ರೈಲ್ವೆ ನಿಲ್ದಾಣವು ಖಾಸಗಿ ಸುಪರ್ದಿಗೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲಾ ವಿಭಾಗಗಳಲ್ಲಿಬಂಡವಾಳಶಾಹಿಗಳು ಕಾಲಿಡುತ್ತಿದ್ದಾರೆ ಇದರಿಂದ ನೌಕರರಿಗೆ ಅನ್ಯಾಯವಾಗುತ್ತಿದೆ.

ಹಳೆಯ ಪಿಂಚಣಿ ಯೋಜನೆಯಿಂದ ಮಾತ್ರ ನೌಕರರು ನೆಮ್ಮದಿ ಬದುಕಬಹುದು, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವುದೆಂದರೆ ಸುದೈವ ಭಾವನೆಯಿದೆ ಆದರೆ ಈಗಿನ ಸರ್ಕಾರ ಜಾರಿಗೆ ತರುತ್ತಿರುವ ಕಾನೂನುಗಳು ಪೀಳಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ

01/01/2004 ರಿಂದ ಸೇವೆಗೆ NPS ಸೇರಿಸಲಾಗಿದೆ ಇದು ಸರ್ಕಾರದ ಅವೈಜ್ಞಾನಿಕ ಕ್ರಮವಾಗಿದೆ ನೌಕರರ ಕೊರತೆಯಿಂದ ಕೆಲಸದ ಒತ್ತಡವು ಹೆಚ್ಚುತ್ತಿದ್ದು, ಯಾರು ಕೂಡ ಇವುಗಳನ್ನು ಪರಿಗಣಿಸುತ್ತಿಲ್ಲ.

ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಲು ಗುರುವಾರದವರಗೆ ಗಡುವು ನೀಡಿದ್ದೇವೆ ಬೇಡಿಕೆ ಈಡೆರದೆ ಇದ್ದರೆ ಪ್ರತಿಭಟನೆಯನ್ನು ಮುಂದುವರೆಸುತ್ತೆವೆ ಎಂದರು.

ಈ ಪ್ರತಿಭಟನೆಯಲ್ಲಿ ಸಹ ಕಾರ್ಯದರ್ಶಿ ಅಮಿತ್ ಕುಮಾರ್, ಯೋಗೇಶ್, ಗೋವಿಂದ ರಾಜು, ಮೋಹನ್ ಕುಮಾರ್, ಚಂದ್ರು, ಕಾರ್ತಿಕ್, G U ಸತೀಶ್ ಕುಮಾರ್, ಲಕ್ಮಣ, ಬಸವರಾಜ್ C N ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *