
ಸಕಲೇಶಪುರ : ಎನ್ ಆರ್ ಎಲ್ ಎಮ್ ಸಂಜೀವಿನಿ ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯತ್ ಹಾಸನ, ತಾಲ್ಲೂಕು ಪಂಚಾಯತ್ ಸಕಲೇಶಪುರ, ಗ್ರಾಮ ಪಂಚಾಯತ್ ಬೆಳಗೊಡು, ಹಾಗೂ ಶುಭೋಧಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಯೋಗದಲ್ಲಿ ದಿನಾಂಕ 11.01.2024 ರಂದು ಮಾಸಿಕ ಸಂತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಉದ್ದೇಶ ಸ್ವ ಸಹಾಯ ಗುಂಪು ಹಾಗೂ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಸದಸ್ಯರುಗಳು ಉತ್ಪದಿಸುವ ಆಹಾರ ಉತ್ಪನ್ನಗಳು, ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮಾಸಿಕ ಸಂತೆಯಲ್ಲಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಧರಣೇಶ್ ರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಆದಿತ್ಯ ರವರು ಸಹಾಯಕ ನಿರ್ದೇಶಕರು, (ಗ್ರಾಮೀಣ ಉದ್ಯೋಗ ) ತಾಲ್ಲೂಕು ಪಂಚಾಯತ್ ಸಕಲೇಶಪುರ, ರವರು ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅದರಲ್ಲಿ ಏನ್ ಆರ್ ಎಲ್ ಎಮ್ ಸಂಜೀವಿನಿ ಯೋಜನೆಯು ಒಂದಾಗಿದ್ದು ಈ ಯೋಜನೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗಳ ಮೂಲಕ ಸ್ವ ಸಹಾಯ ಗುಂಪುಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಕೇವಲ ಶೇ 1% ಬಡ್ಡಿ ದರದಲ್ಲಿ ಸಮುದಾಯ ಬಂಡವಾಳ ನಿಧಿಯನ್ನು ಸಾಲವನ್ನು ನೀಡಲಾಗುತ್ತಿದ್ದು, ಈ ಸಾಲವನ್ನು ಪಡೆದ ಸ್ವ ಸಹಾಯ ಗುಂಪಿನ ಮಹಿಳೆಯರು ವಿವಿಧ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಪ್ರೇಮ ಉಪಾಧ್ಯಕ್ಷರು ಬೆಳಗೋಡು ಗ್ರಾ, ಪಂ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ, ಎನ್ ಆರ್ ಎಲ್ ಎಮ್ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ನಾಗೇಶ್, ಪಿ ಡಿ ಓ ನರಸಿಂಹಯ್ಯ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಭುವನಾಕ್ಷ, ಪುನೀತ್, ಮಂಜುಳ, ಬಸವರಾಜ್, ಎನ್ ಆರ್ ಎಲ್ ಎಮ್ ತಾಲ್ಲೂಕು ಸಿಬ್ಬಂದಿಗಳಾದ ರೇಣುಕಾ ಪ್ರಸಾದ್, ರತನ್, ಮಮತಾ, ಪವಿತ್ರ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ದ ಪದಾಧಿಕಾರಿಗಳು, ಎಮ್ ಬಿ ಕೆ, ಎಲ್ ಸಿ ಆರ್ ಪಿ ಗಳು, ಕೃಷಿ ಸಖಿ, ಪಶು ಸಖಿ ಇತರೆ ಒಕ್ಕೂಟದ ಸಿಬ್ಬಂದಿಗಳು, ಸ್ವ ಸಹಾಯ ಗುಂಪಿನ ಪ್ರತಿನಿಧಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


