
ರಾಮಲಲ್ಲಾನ ಪ್ರತಿಷ್ಠೆ ನಂತರ ಅಯೋಧ್ಯೆಯಲ್ಲಿ 48 ದಿನದ ಮಂಡಲೋತ್ಸವ ನಡೆಯಲಿದೆ. ಜನವರಿ 23ರಿಂದ 48 ದಿನಗಳ ಕಾಲ ಮಂಡಲ ಪೂಜೆಯು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.
48 ದಿನಗಳ ಕಾಲ ಅವಧಿಯೇ ಒಂದು ಮಂಡಲ. ಪ್ರಾಣಪ್ರತಿಷ್ಠೆಯ 48 ದಿನಗಳ ಕಾಲ ನಿತ್ಯ ಪ್ರತಿಮೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಅದಕ್ಕೆ ವೇದೋಕ್ತ ಮಹಾಮಂತ್ರದ ಮೂಲಕ ಆರಾಧನೆ ಮಾಡುತ್ತೇವೆ. ಪ್ರತಿನಿತ್ಯ ಎರಡು ಮಂತ್ರಗಳನ್ನು ಇಟ್ಟುಕೊಂಡು ಆರಾಧನೆ ಮಾಡುತ್ತೇವೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.
ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞಮೊದಲ 44 ದಿನ 2 ಮಂತ್ರದ ಆರಾಧನೆ:ಜಪ, ಹೋಮ, ತರ್ಪಣ ಜೊತೆಗೆ ಪ್ರತಿಮೆಗೆ ಕಲಶಾಭಿಷೇಕ ನಡೆಯುತ್ತದೆ. ಬೆಳಿಗ್ಗೆ ಯಜ್ಞ, ಯಾಗ, ಕಲಶ ಅಭಿಷೇಕ ನಡೆಯುತ್ತದೆ. ಮುಸ್ಸಂಜೆ ಬಳಿಕ ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ, ರಾಮಾಯಣ, ಮಹಾಭಾರತ ಪಾರಾಯಣ ನಡೆಯಲಿದೆ. ಮುಸ್ಸಂಜೆ ನಿತ್ಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ದೇವರ ವಿಗ್ರಹ ಇಟ್ಟು ಆರಾಧನೆ ಮಾಡಲಾಗುತ್ತದೆ. ನೃತ್ಯ, ವಾದ್ಯ ಸಹಿತ ಶೋಡಷೋಪಚಾರ ಪೂಜೆ ಜರುಗಲಿದೆ.
ಮೊದಲನೇ 44 ದಿನಗಳ ಕಾಲ ಪ್ರತಿದಿನ ಎರಡು ಮಂತ್ರ ಇಟ್ಟುಕೊಂಡು ಆರಾಧನೆ ನಡೆಯುತ್ತದೆ. ಕೊನೆಯ ನಾಲ್ಕು ದಿನ ಸಹಸ್ರ ಕಲಶಾಭಿಷೇಕ ನಡೆಯುತ್ತದೆ.ನಮ್ಮ ಬ್ರಹ್ಮಕಲಶವೇ, ಉತ್ತರ ಭಾರತದ ಕುಂಬಾಭಿಷೇಕ:ನಮ್ಮಲ್ಲಿ ನಡೆಯುವ ಬ್ರಹ್ಮ ಕುಂಭಾಭಿಷೇಕ ಅಥವಾ ಬ್ರಹ್ಮಕಲಶವನ್ನು ಉತ್ತರ ಭಾರತದಲ್ಲಿ ಕುಂಭಾಭಿಷೇಕ ಎನ್ನುತ್ತಾರೆ.
ಪ್ರಾಣ ಪ್ರತಿಷ್ಠೆಯಿಂದ 48 ದಿನಗಳ ಒಟ್ಟು ಆಚರಣೆ ಶಾಸ್ತ್ರೋಕ್ತವಾಗಿ ನಡೆಯುತ್ತದೆ. 48 ದಿನ ವೇದೋಕ್ತಕರ್ಮದಿಂದ ನಡೆಯಲಿದೆ. 48 ದಿನಗಳ ಮಂಡಲ ಪೂಜೆಯ ಜವಾಬ್ದಾರಿಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ವಹಿಸಲಾಗಿದೆ.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದವರು:ವಿಶ್ವೇಶ ತೀರ್ಥರು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪಿಸಿದ್ದರು. 65 ವರ್ಷಗಳಿಂದ ಬೆಂಗಳೂರಿನ ವಿದ್ಯಾಪೀಠದಲ್ಲಿ ವಿದ್ಯಾರ್ಥಿ, ವಿದ್ವಾಂಸರು ಸೃಷ್ಟಿಯಾಗಿದ್ದಾರೆ. ರಾಜ್ಯದ ನಾನಾ ಮೂಲೆಯಲ್ಲಿರುವ, ದೇಶದ ಅನೇಕ ಕಡೆಗಳಲ್ಲಿರುವ ಇಂತಹ ವಿದ್ವಾಂಸರು ಮಂಡಲೋತ್ಸವ ಧಾರ್ಮಿಕ ಕಾರ್ಯ ನಡೆಸುತ್ತಾರೆ. ಮಂಡಲೋತ್ಸವದಲ್ಲಿ ಭಾಗಿಯಾಗ್ತಾರೆ.400 ವೈದಿಕರು, ಶಿಫ್ಟ್ಗಳಲ್ಲಿ ಭಾಗಿ!:ಹೆಚ್ಚು ವಿದ್ವಾಂಸರು, ವೈದಿಕರು ಭಾಗವಹಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ದಿನ ಪ್ರತ್ಯೇಕ ಪ್ರತ್ಯೇಕವಾಗಿ ಒಟ್ಟು 400 ವೈದಿಕರು ಯಜ್ಞ ಯಾಗದಲ್ಲಿ ಭಾಗಿಯಾಗ್ತಾರೆ. ಒಂದು ದಿನ ಭಾಗಿಯಾದವರು, ಅನುಷ್ಠಾನದಲ್ಲಿ ಇದ್ದವರು ಮರುದಿನ ಇರುವುದಿಲ್ಲ. ಬದಲಿಸಿ ಹಲವರಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಶಿಫ್ಟ್ ವ್ಯವಸ್ಥೆಯಲ್ಲಿ ಈ ಕಾರ್ಯಚಟುವಟಿಕೆಗಳು ನೆರವೇರಲಿವೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ
