ರಸ್ತೆ ಅಪಘಾತದಲ್ಲಿ ಲಕ್ಷ್ಮಮ್ಮ ಸಾವು

ಹಾಸನ: ತ್ರಿಬಲ್ ರೈಡಿಂಗ್ ಬೈಕ್ ವೊಂದು ವೃದ್ಧೆಗೆ ಗುದ್ದಿದ ಪರಿಣಾಮ ಲಕ್ಷ್ಮಮ್ಮ ೭೦ ವರ್ಷ ಸ್ಥಳದಲ್ಲೆ ಸಾವನಪ್ಪಿದ ಘಟನೆ ಹಾಸನ ತಾಲೂಕಿನ ಗೊರೂರು ಮುಖ್ಯ ರಸ್ತೆ, ಅಗಿಲೆ ಗ್ರಾಮದಲ್ಲಿ ನಡೆದಿದೆ.

ಪ್ರತಿನಿತ್ಯದಂತೆ ಅಗಿಲೆ ಗ್ರಾಮದೊಳಗೆ ಹಾಲನ್ನು ಡೈರಿಗೆ ಹಾಕಿ ವಾಪಸ್ ಮೊತ್ತೊಬ್ಬರ ಬೈಕಿನಲ್ಲಿ ಸಹಾಯ ಪಡೆದುಕೊಂಡು ಬಂದಿದ್ದು, ಈ ವೇಳೆ ಮನೆ ಬಳಿ ಮುಖ್ಯ ರಸ್ತೆ ಎಡ ಭಾಗದಲ್ಲಿ ಇಳಿಸಲಾಗಿದೆ. ಗೊರೂರು ಮುಖ್ಯ ರಸ್ತೆಯ ಬಲ ಭಾಗದಲ್ಲಿ ಮನೆಯಿದ್ದು, ರಸ್ತೆ ದಾಟಲು ಮುಂದಾದಗ ತ್ರಿಬಲ್ ರೈಡಿಂಗ್ ನಲ್ಲಿ ಬರುತ್ತಿದ್ದ ಬೈಕ್ ಈ ವೃದ್ಧೆಯ ಮೇಲೆ ಗುದ್ದಿದ್ದರಿಂದ ಹೆಚ್ಚು ಪೆಟ್ಟಾಗಿ ಕೊನೆ ಉಸಿರು ಎಳೆದಿದ್ದಾರೆ.

ಈ ವೇಳೆ ಮೂವರು ಬೈಕ್ ಸವಾರರು ಕೂಡ ಆಸ್ಪತ್ರೆಗೆ ದಾಖಲಾಗಿ ನಂತರ ವಾಪಸ್ ಹೋಗಿರುವುದಾಗಿ ತಿಳಿದು ಬಂದಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಬೇಕಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *