
ಸಂಕ್ರಾಂತಿ ಹಬ್ಬದ ವ್ಯಾಪಾರ ಜೋರ್..
ಹಾಸನ : ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಈ ವೇಳೆ ಅಗತ್ಯವಾಗಿ ಬೇಕಾಗಿರುವ ಕಬ್ಬು, ಎಳ್ಳು ಮತ್ತು ಅವರೆಕಾಯಿ, ಮಾವಿನ ಎಲೆಗೆ ಬೇಡಿಕೆ ಹೆಚ್ಚು ಕಂಡು ಬಂದಿತು.
ನಗರದ ಹೃದಯ ಭಾಗವಾದ ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಬ್ಬದ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಹಬ್ಬದ ಹಿಂದಿನ ದಿನವಾದ ಭಾನುವಾರದಂದು ಸಂಕ್ರಾಂತಿ ಹಬ್ಬದ ವ್ಯಾಪಾರಕ್ಕೆ ಜನತೆ ಮುಗಿ ಬಿದ್ದಿದ್ದರು.
ಅವರೆ ಕಾಯಿ ನೂರು ರೂಗಳಿಗೆ ಮೂರು ಕೆಜಿ. ಕಬ್ಬು ಒಂದು ಜೋಡಿಗೆ ೫೦ರಿಂದ ೧೦೦ ರೂಗಳಿತ್ತು. ಪುಟ್ಬಾಳೆ ಒಂದು ಕೆಜಿಗೆ ೮೦ ರಿಂದ ೧೨೦ ರೂಗಳಾಗಿತ್ತು. ಮಾವಿನ ಸಪ್ಪು ಒಂದು ಕಟ್ಟಿಗೆ ೨೦ ರೂಗಳಿತ್ತು.
ಇನ್ನು ಸಿದ್ದಪಡಿಸಿದ ಬೆಲ್ಲ, ಎಳ್ಳು, ಕಡ್ಲೆಯನ್ನು ಕೆಜಿಯಂತೆ ಮಾರಾಟ ಮಾಡಿದರು. ಬೆಲೆ ಏರಿಕೆ ಇದ್ದರೂ ಗ್ರಾಹಕರು ಕೊಂಡುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು.
ಇತ್ತಿಚಿಗೆ ಅಲ್ಲಲ್ಲಿ ಬೀದಿಗಳಲ್ಲಿ ತರಕಾರಿ ಅಂಗಡಿಗಳು ತಲೆ ಎತ್ತಿರುವುದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಸಲ್ಪ ಇಳಿಮುಖವಾಗಿತ್ತು.



