ಹಾಸನ: ನಗರದ ಹೌಸಿಂಗ್ ಬೋರ್ಡ್, ರಿಂಗ್ ರಸ್ತೆ ಬಳಿ ಇರುವ ಮಾಜಿ ಸೈನಿಕರ ಸಂಘದ ಸೈನಿಕ ಭವನದಲ್ಲಿ ಭಾನುವಾರ ಬೆಳಿಗ್ಗೆ ಸಶಸ್ತ್ರ ಪಡೆಗಳ ವೆಟರನ್ಸ್ ಡೇಯನ್ನು ಆಚರಿಸಲಾಯಿತು. ಇದೆ ವೇಳೆ ರಾಜಕೀಯ, ಸರಕಾರಿ ಹುದ್ದೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮೀಸಲಾತಿ ನೀಡುವಂತೆ ಆಗ್ರಹಿಸಿದರು.

ಇದೆ ವೇಳೆ ಕಮೆಂಡರ್ ಚಂದ್ರಶೇಖರ್ ಉದ್ದೇಶಿಸಿ ಮಾತನಾಡುತ್ತಾ, ಈ ದಿವಸ ಮೂರು ಪಡೆಗಳು ಸುಸರ್ಜಿತವಾಗಿ, ಬಹಳ ಶಕ್ತಿ ಶಾಲಿಯಾಗಿ ಮುಂದುವರೆಯಲು ಕಾರಣ ನಮ್ಮ, ನಿಮ್ಮೆಲ್ಲರ ಪ್ರತಿಯೊಬ್ಬರು ವಿವಿಧ ರೀತಿಯಲ್ಲಿ ಸಲ್ಲಿಸಿರುವ ಸೇವೆಯಂತಹ ಒಳ್ಳೆ ಕೆಲಸಗಳಿಂದ ಆಗಿದೆ.

ನಾವುಗಳು ಸೇನೆಗಳಿಗೆ ಸೇರಿದಾಗ ಅಲ್ಲಿನ ತರಬೇತಿ, ಶಿಸ್ತು, ಕೌಶಲ್ಯ ಕಲಿತು ನಂತರದಲ್ಲಿ ಸೇವೆಯಲ್ಲಿದ್ದಾಗ ಮರಳುಗಾಡಿನಲ್ಲಾಗಲಿ, ಬೆಟ್ಟ ಗುಡ್ಡಗಳ ಬಳಿ, ಕಣಿವೆಗಳಲ್ಲಿ ಹಾಗೂ ಆಕಾಶ ಮಾರ್ಗದಲ್ಲಾಗಲಿ ಇಲ್ಲವೇ ಸಮುದ್ರದಲ್ಲಾಗಲಿ ಮಾಡಿದಂತಹ ಅದ್ಭುತ ಕರ್ತವ್ಯಗಳಾಗಿವೆ. ಸೇವೆ ನಂತರ ನಿವೃತ್ತರಾಗಿ ಈಗ ಆದರ್ಶನ ನಾಗರೀಕರಾಗಿ ಜೀವಿಸುತ್ತಿದ್ದೇವೆ ಎಂದರು.

ಸೇನಾನಿಗಳಾದ ನಾವು ಮಾಡುವ ಕಾರ್ಯದಲ್ಲಿ ನಾಗರೀಕರಿಗೆ ಆದರ್ಶಗಳಾಗಳಾಗಿ ಮಾಧರಿಯಾಗಿರಬೇಕು. ನಮ್ಮ ಮೊದಲ ಫೀಲ್ಡ್ ಮಾರ್ಷಲ್ ಕರಿಯಪ್ಪ ಅವರ ಸ್ಮರಣೆಯಲ್ಲಿ ಜನವರಿ ೧೪ ರಂದು ಪೂರ್ವ ಸೈನಿಕರ ದಿನಗಳನ್ನಾಗಿ ಆಚರಿಸಲಾಗುತ್ತಿದೆ. ದೆಹಲಿಯ ಆದೇಶದಂತೆ ಪ್ರತಿ ಜಿಲ್ಲೆಯಲ್ಲೂ ಅದ್ದೂರಿಯಾಗಿ ಈ ದಿನವನ್ನು ಆಚರಿಸಬೇಕೆಂದು ಹೇಳಲಾಗಿದೆ.

ಮುಂದಿನ ವರ್ಷದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಿ, ಸೈನಿಕ್ ಬೋರ್ಡ್ ಸಹಕಾರದಿಂದ ಹೆಚ್ಚು ಜನರನ್ನು ಕರೆತರಿಸಿ ಸಂಭ್ರಮದಿಂದ ಆಚರಿಸಬೇಕೆಂದು ತಮ್ಮ ಅಭಿಪ್ರಾಯ ತಿಳಿಸಿದರು.

ದೆಹಲಿಯಲ್ಲಿ ಪೂರ್ವ ಸೈನಿಕರಿಗಾಗಿ ನಿರೂಪಿಸಿರುವ ಕೆಲವೊಂದು ಯೋಜನೆಯನ್ನು ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಿದ್ದು, ನಾವುಗಳು ಅರಿತುಕೊಂಡು ಉಳಿದ ಸೈನಿಕರಿಗೂ ಉಪಯೋಗವಾಗುವಂತೆ ನೀಡಬೇಕೆಂದು ಹೇಳಿದರು.

ಜಿಲ್ಲಾ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎಸ್. ಪ್ರದೀಪ್ ಸಾಗರ್ ಮಾತನಾಡಿ, ಕಾನೂನಿನಲ್ಲಿ ತಿದ್ದುಪಡಿಮಾಡಿಕೊಂಡು ಕೇಳಿಕೊಳ್ಳುತ್ತೇವೆ ಹೊರತು ಕಾನೂನಿನಲ್ಲಿ ಏನನ್ನು ತೆಗೆದುಕೊಂಡಿಲ್ಲ. ಸ್ವಾತಂತ್ರ ಕೊಟ್ಟಿದ್ದಾರೆ ಆದರೇ ಸೈನಿಕರಿಗೆ ಸ್ವಾತಂತ್ರ ಸಿಕ್ಕಿಲ್ಲ. ಈ ದೇಶದ ಗಡಿಗಳಲ್ಲಿ ದೇಶ ಕಾಯುತ್ತಿರುವ ಹಾಗೂ ನಿವೃತ್ತಿ ಹೊಂದಿರುವ ಎಲ್ಲಾ ಸೈನಿಕರ ಪರವಾಗಿ ಮನವಿ ಏನೇಂದರೇ ಇಡೀ ಭಾರತ ದೇಶದ ಏಳಿಗೆಗಾಗಿ ಶ್ರಮಿಸುತ್ತಿರುವ ಸೈನಿಕರು ಚನ್ನಾಗಿದ್ದರೇ ಮಾತ್ರ ದೇಶದ ಏಳಿಗೆ ಸಾದ್ಯ. ಈ ನಿಟ್ಟಿನಲ್ಲಿ ಸರಕಾರವು ರಾಜಕೀಯವಾಗಿ ನಮಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಸೈನಿಕರಿಗೆ ರಾಜಕೀಯದಲ್ಲೂ ಮೀಸಲಾತಿ ಕೊಡಬೇಕು. ಸರಕಾರಿ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇಕಡ ೧೦ ರಷ್ಟು ಮೀಸಲಾತಿಯನ್ನು ನಿಡಿದ್ದು, ಕೆಲವೊಂದು ಇಲಾಖೆಗಳು ನೇಮಕಾತಿಯ ಸುತ್ತೋಲೆಯನ್ನು ಹೊರಡಿಸುವಾಗ ಇದನ್ನ ಪರಿಗಣಿಸುತ್ತಿಲ್ಲ. ಮಾಜಿ ಸೈನಿಕರಿಗೆ ಸೇವೆಯ ನಂತರ ಸರಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ. ಮಾಜಿ ಸೈನಿಕರಿಗೆ ಸರಕಾರಿ ಜಮೀನುಗಳನ್ನು ಮಂಜೂರು ಮಾಡಲು ಬಹಳ ವಿಳಂಭ ಮಾಡಲಾಗುತ್ತಿದ್ದು,ನಮ್ಮ ಬೇಡಿಕೆಯನ್ನು ಶೀಘ್ರವಾಗಿ ಪರಿಶೀಲಿಸಬೇಕೆಂದು ಇದೆ ವೇಳೆ ಮನವಿ ಮಾಡಿದರು.

ಇದೆ ವೇಳೆ ಕ್ಯಾಪ್ಟನ್ ಎಂ.ಜಿ. ಶೆಟ್ಟಿ, ದೊರೆರಾಜು, ಜಿಲ್ಲಾ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ನಟೇಶ್, ಅಧ್ಯಕ್ಷ ಎನ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಾಗರ್, ಖಜಾಂಚಿ ಬಾಲಕೃಷ್ಣ, ಚಂದ್ರಗೌಡ, ಬಸವರಾಜ್, ಮಾಜಿ ಅಧ್ಯಕ್ಷ ಪ್ರಭಾಕರ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *