
ಹೆತ್ತೂರು : ಇಂದು ಅದ್ದೂರಿಯಾಗಿ ನಡೆದ ಕುಮಾರ ಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಹೈ ಕೋರ್ಟ್ ನ್ಯಾಯಾಧೀಶರಾದ ಸಂದೇಶ್ ರವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರಾದ ಸಚಿನ್ ಪ್ರಸಾದ್, ಶ್ರೀ ಮಲ್ಲೇಶ್ವರ ದೇವಸ್ಥಾನ ಸಮಿತಿ ಹೆತ್ತೂರು ಅಧ್ಯಕ್ಷರಾದ ಧರಣೇಂದ್ರ, ಶ್ರೀ ಕುಮಾರಲಿಂಗೇಶ್ವರ ದೇವಸ್ಥಾನ ಸಮಿತಿ ಹೆತ್ತೂರು ಅಧ್ಯಕ್ಷರಾದ. ಹೆಚ್.ಪಿ. ರವಿಕುಮಾರ್ ಹಾಗೂ ಮಂದೇ ಪಟೇಲರ ಮನೆ ಕುಟುಂಬಸ್ಥರು. ದೇವಸ್ಥಾನ ಸಮಿತಿ ಸದಸ್ಯರುಗಳು ಸುತ್ತಮುತ್ತಲಿನ ಗ್ರಾಮಸ್ಥರು. ಭಾಗವಹಿಸಿದ್ದರು




