
ಆಲೂರು : ತಾಲ್ಲೂಕಿನ ಪಂಚಾಯಿತಿ ಆವರಣದಲ್ಲಿ ಹಾಸನದ ಪ್ರಮುಖ ಕೈಗಾರಿಕಾ ಕೇಂದ್ರಗಳ ಸಹೋದ್ಯೋಗದೊಂದಿಗೆ ಆಯೋಜಿಸಲಾಗಿದ್ದ ಯುವತಿಯರಿಗಾಗಿ ಉದ್ಯೋಗವಕಾಶ ಕಾರ್ಯಕ್ರಮದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಆಲೂರು ಭಾಗದ ಜನರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಮುಂಬರುವ ದಿನಗಳಲ್ಲಿ ಸಹ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಹಾಗೂ ಆಲೂರು ಭಾಗಕ್ಕೆ ಕೈಗಾರಿಕಾ ಪ್ರದೇಶವನ್ನು ತರುವ ಯೋಜನೆ ಇರುವುದನ್ನು ಸಹ ವ್ಯಕ್ತಪಡಿಸಿದರು.




