
ಹಾಸನ : ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಐದನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ದಿನಾಂಕ 22-1-2024 ನೇ ಸೋಮವಾರದಂದು ಹಾಸನ ನಗರದ ಆರ್.ಸಿ ರಸ್ತೆಯಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಜೀವ ರಕ್ಷಾ ರವರಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಸಹ್ಯಾದ್ರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರವರಿಂದ ಆರೋಗ್ಯ ತಪಾಸಣಾ ಶಿಬಿರ ಮತ್ತು ಪೂಜಾ ಕಾರ್ಯಕ್ರಮ ಹಾಗೂ ದಾಸೋಹ ವಿರುತ್ತದೆ,
ಈ ಒಂದು ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಸರ್ವರಿಗೂ ಸುಸ್ವಾಗತ : ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಹಾಸನ


