
ಹಾಸನ: ಗೂಡ್ಸ್ ಲಾರಿಯೊಂದು ರಸ್ತೆ ಮಧ್ಯೆ ಗಂಟೆಗಟ್ಟಲೆ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಜಿಲ್ಲಾಧಿಕಾರಿ ಕಛೇರಿ ಬಳಿ ಬಿ.ಎಂ. ರಸ್ತೆಯಲ್ಲಿ ನಡೆದಿದೆ.
ಜಿಲ್ಲಾ ಪಂಚಾಯತ್ ಮುಂಬಾಗ ಡಿಸಿ ಕಛೇರಿ ರಸ್ತೆಯಲ್ಲಿ ಹಾದು ಹೋಗುವ ಪ್ರಾರಂಭದಲ್ಲಿ ಗೂಡ್ಸ್ ಲಾರಿಯಿಂದು ರಸ್ತೆ ಮಧ್ಯೆ ತಾಂತ್ರಿಕ ದೋಷದಿಂದ ನಿಂತಿದ್ದು, ಚಾಲಕ ಕೂರುವ ಮುಂಬಾಗ ಮೇಲಕ್ಕೆ ಬಂದಿದ್ದು, ಯಾವ ರೀತಿ ಏನು ಆಗಿದೆ ಎಂಬುದು ಸರಿಯಾಗಿ ತಿಳಿದಿಲ್ಲ.
ರಸ್ತೆ ಮಧ್ಯೆ ವಾಹನ ನಿಂತಿದ್ದರಿಂದ ಹಿಂದಿನಿಂದ ಬರುವ ಏಕಮುಖ ವಾಹನಗಳು ಸಲ್ಪ ಸಮಸ್ಯೆ ಎದುರಿಸಬೇಕಾಯಿತು.



