ಸಕಲೇಶಪುರ : ಶ್ರೀ ಗುರುವೇಗೌಡ ಕಲ್ಯಾಣ ಮಂಟಪ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ LED ಸ್ಕ್ರೀನ್ ಹಾಕಿ ನೇರಪ್ರಸಾರ ವೀಕ್ಷಣೆಗೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಹೊಳೆಮಲ್ಲೇಶ್ವರ ಭಜನಾ ತಂಡದಿಂದ ಭಜನೆ ಮಾಡಿದರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು.

ಮಾಜಿ ಶಾಸಕರಾದ ಹೆಚ್ .ಎಂ ವಿಶ್ವನಾಥ್ ಮತ್ತು ಬಿ.ಅರ್ ಗುರುದೇವ ಮತ್ತು ಬಾಳ್ಳು ಮಲ್ಲಿಕಾರ್ಜುನ್, ರಾಕೇಶ್ ಆನೆಮಹಲ್, ವಿಕ್ರಂ ತೋಟದಗದ್ದೆ, ಕೃಷ್ಣಮೂರ್ತಿ ವಕೀಲರು ಡಾಕ್ಟರ್ ರತ್ನಾಕರ್ ನಾರಾಯಣ ಆಳ್ವ ಅವರು ದೀಪ ಬೆಳಗುವುದರ ಮುಖಂತರ ಕಾರ್ಯಕ್ರಮ ಉದ್ಘಾಟಿಸಿದರು

ಸಕಲೇಶಪುರದ ವಿವಿಧ ಭಾಗಗಳಿಂದ ಬಂದ ರಾಮಭಕ್ತರು ಪ್ರಾಣಪ್ರತಿಷ್ಠಾಪನೆ ಕಣ್ಣುತುಂಬಿಕೊಂಡರು.

ಸರಿ ಸುಮಾರ್ ಐನೂರಕ್ಕೂ ಹೆಚ್ಚು ಭಕ್ತರು ಸರಿಯಾಗಿ 12.30 ರ ಅಭಿಜಿನ್ ಲಗ್ನದಲ್ಲಿ ನಡೆದ ಪ್ರತಿಷ್ಠಾಪನೆ ಅದ ಸಮಯದಲ್ಲಿ ಉತ್ತರಕ್ಕೆ ಮುಖ ಮಾಡಿ ಮಂತ್ರಾಕ್ಷತೆ ತಲೆ ಮೇಲೆ ಹಾಕಿಕೊಂಡು ಧನ್ಯರಾದರು.

ದುರ್ಗಾವಾಹಿನಿ ಕಾರ್ಯೇಕರ್ತೆಯರು ಪ್ರಸಾದ ಬಡಿಸಿದರು.

ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಉಪಸ್ಥಿತಿ ಇದ್ದು. ಜೇನುಪೋಷಕರ ಸಂಘದ ಸತೀಶ್,ಗುರುವೇಗೌಡ ವ್ಯವಸ್ಥಾಪಕರು ನಾಗೇಶ್ , ಚಾಮುಂಡೇಶ್ವರಿ ದೇವಸ್ಥಾನ ಅಧ್ಯಕ್ಷರಾದ ಬಸವರಾಜ್, ಸತೀಶ್ ಬೈರಮುಡಿ, ಮಾನ್ಯ ಶಾಸಕರಾದ ಸಿಮೆಂಟ್ ಮಂಜು ಬಿಜೆಪಿ ಮುಖಂಡ ಪುನೀತ್ ಬನ್ನಳ್ಳಿ ಆಗಮಿಸಿದರು.

ವಿಶೇಷ ಅತಿಥಿಗಳಾಗಿ ಸಿದ್ದೇಶ್ ನಾಗೇಂದ್ರ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಗಮಿಸಿ ಕಾರ್ಯಕರ್ತರೊಂದಿಗೆ ರಾಮಂದಿರ ವಿಚಾರವಾಗಿ ಚರ್ಚೆ ಮಾಡಿದರು.

ಕೌಶಿಕ್, ಧರ್ಮೇಶ್, ಪ್ರದೀಪ್ ,ದುಷ್ಯಂತ್,ಮಂಜು ಕಬ್ಬಿನಗದ್ದೆ,ಶೇಖರ್,ಶ್ರೀಜಿತ್, ದೀಲಿಪ,ಸಂತೋಷ್,ರವಿ, ಸುರೇಂದ್ರ,ರವಿಚಾರ್ಲಿ, ವಿನೋದ ದೀಪು ಉಪಸ್ಥಿತಿ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *