
ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಗರ್ ಹುಕಂ ಸಾಗುವಳಿ ಸಕ್ರಮೀಕರಣ ಸಮಿತಿಯು ಇಂದು ರಚನೆಯಾಗಿದ್ದು ಈ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಎಚ್ಎಚ್ ಉದಯ್ ರವರು ಸಕಲೇಶಪುರ, ಮತ್ತು ಗೀತಾ ಶಾಂತಕೃಷ್ಣರವರು ಆಲೂರು, ಚಂದ್ರಶೇಖರ್ ರವರು ಸಕಲೇಶಪುರ ಇವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ಇಲಾಖೆ ಆದೇಶವನ್ನು ಹೊರಡಿಸಿದೆ
ಇವರಿಗೆ *ಆಲೂರು ಕಟ್ಟಾಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದಂತಹ ಮುರಳಿ ಮೋಹನ್ ರವರು ಮತ್ತು ಸಕಲೇಶಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದಂತಹ ಬೈರಮುಡಿ ಚಂದ್ರು ಅವರು ಹಾಗೂ ಆಲೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದಂತಹ ಶಿವ ಮೂರ್ತಿರವರು ಹಾಗೂ ಸಕಲೇಶಪುರ ಆಲೂರು ಕಟ್ಟಾಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಲ್ಲಾ ಕಾರ್ಯಕರ್ತರು ಮುಖಂಡರುಗಳು ಅಭಿನಂದನೆಗಳನ್ನು ಸಲ್ಲಿಸಿದರು




