ಸಕಲೇಶಪುರ : ಇಂದು ನಡೆದ 75 ನೇ ಗಣರಾಜ್ಯೋತ್ಸವ ದಿನದಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಶೇಷವಾಗಿ ಕಡು ಬಡತನ ಹಾಗೂ ಕಷ್ಟದಲ್ಲೂ ಸಾಧನೆಗೈದು ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ಆಯ್ಕೆಯಾಗಿರುವ

1) ಮೋಹನ್ ಕುಮಾರ್’, ಅಸಿಸ್ಟೆಂಟ್ ಪ್ರೊಫೆಸರ್,

2) ತಂಗಮ್ಮ ,ಜಿಪಿಎಸ್‌ಟಿ ಶಿಕ್ಷಕಿ ,

3) ಹರಿಣಾಕ್ಷಿ ,ಜಿಪಿಎಸ್‌ಟಿ ಶಿಕ್ಷಕಿ,

4) ಜಗದೀಶ್ ದ್ವಿತೀಯ ದರ್ಜೆ ಸಹಾಯಕರು ,ಆರೋಗ್ಯ ಇಲಾಖೆ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜುನಾಥ್, ಉಪವಿಭಾಗಾಧಿಕಾರಿ ಡಾ.ಶೃತಿ, ಎಂ.ಕೆ. ತಹಸೀಲ್ದಾರ್ ಕೆ.ಪುರಂದರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪುಷ್ಪ, ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್, ಇತರರು ಇದ್ದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *