ಹಾಸನ : ಕೆಲ ನಾಯಕರು ಬೇರೆ ಬೇರೆ ಕಾರಣಗಳಿಗೆ ದೂರ ಸರಿದಿದ್ದರು. ಆದರೇ ಈಗ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕೆಂದು ಮರಳಿ ಪಕ್ಷಕ್ಕೆ ಬರುತ್ತಿದ್ದು, ರಾಜ್ಯದಲ್ಲಿ ೨೮ಕ್ಕೆ ೨೮ ಸೀಟು ಗೆಲ್ಲುವ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿಳಿಸಿದರು.
ನಗರದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನೆನ್ನೆ ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಆಗಿದ್ದು, ಮುಂದಿನ ತಿಂಗಳು ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದೆ. ಕಾರ್ಯಕರ್ತರ ಭಾವನೆ ರಾಜ್ಯ ತಂಡದ ಭಾವನೆ ಆಧರಿಸಿ ಲೋಕಸಭಾ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ತೀರ್ಮಾನ ಆಗಲಿದೆ. ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ಅವರೇ ಮುಂದಿನ ಅಭ್ಯರ್ಥಿ ಎಂದು ಘೋಷಣೆ ಮಾಡಿ ದೇವೇಗೌಡರಿಂದ ಪ್ರಚಾರ ವಿಚಾರವಾಗಿ ಮಾತನಾಡಿ, ಅವರು ಹಿರಿಯರು ಮಾಜಿ ಪ್ರದಾನಿಗಳು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ೨೮ ಕ್ಕೆ ೨೮ ಗೆಲ್ಲಬೇಕು ಮೋದಿಯವರು ಮತ್ತೆ ಪ್ರದಾನಿಯಾಗಬೇಕೆಂಬುದು ಅವರ ಬದ್ದತೆ ಇದೆ. ಅವರ ನಿರ್ಧಾರ ಬಹುಶಃ ಮೈತ್ರಿಕೂಟಕ್ಕೆ ಒಳಗೊಂಡಂತೆ ಇರುತ್ತದೆ.
ಎನ್.ಡಿ.ಎ. ಅಭ್ಯರ್ಥಿ ಗೆಲ್ಲಬೇಕೆಂದು ಜಿಲ್ಲಾ ಪ್ರವಾಸ ಮಾಡಿದ್ದಾರೆ. ಜೆಡಿಎಸ್ ನಿಂದ ಅಭ್ಯರ್ಥಿ ಆದರೆ ಪ್ರಜ್ವಲ್ ಅಭ್ಯರ್ಥಿ ಆಗ್ತಾರೆ ಎಂದು ಅವರು ಮತ ಕೇಳಿದಾರೆ ಅದು ಸ್ವಾಭಾವಿಕ. ಆದರೆ ಪ್ರಜ್ವಲ್ ಎನ್.ಡಿ.ಎ. ಅಭ್ಯರ್ಥಿ ಎಂದು ಹಿರಿಯರು ಎಲ್ಲಿಯು ಹೇಳಿಲ್ಲ. ಅವರಿಗೂ ರಾಜಕೀಯ ಅನುಭವ ಇದೆ. ಎನ್.ಡಿ.ಎ ಅಭ್ಯರ್ಥಿ ಯಾರೆಂದು ಸೀಟು ಹಂಚಿಕೆ ವೇಳೆಯಲ್ಲಿ ತೀರ್ಮಾನ ಆಗಲಿದೆ.
ಹಾಸನಕ್ಕೆ ಅವರಿಗೆ ಸೀಟ ಕೊಡೊದೆ ಇಲ್ಲ ಎನ್ನಲ್ಲ. ಆದರೆ ಕೊಟ್ಟಿದಾರೆ ಎನ್ನೋ ಮಾತು ಸತ್ಯ ಅಲ್ಲ. ಅದು ಚರ್ಚೆ ಹಂತದಲ್ಲಿ ಇದೆ. ಯಾರಿಗೆ ಈ ಕ್ಷೇತ್ರ ಎಂದು ಹಿರಿಯರು ತೀರ್ಮಾನ ಮಾಡ್ತಾರೆ. ನಾವು ಅಭ್ಯರ್ಥಿ ಆಗಬೇಕು ಎಂದರೆ ಜೆಡಿಎಸ್ ಅವರ ಅಭಿಪ್ರಾಯ ಕೇಳ್ತೆವೆ. ಅವರು ಅಭ್ಯರ್ಥಿ ಆಗೋದಾದರೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಗೆಲುವೇ ಇಲ್ಲಿ ಮಾನದಂಡ ಅಂತಿಮವಾಗಿ ಎಲ್ಲಾ ಕ್ಷೇತ್ರ ಗೆಲ್ಲಬೇಕು ಎನ್ನೋದು ನಮ್ಮ ಗುರಿ ಎಂದು ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿ ಅಲ್ಲ ಎಂದ ಪ್ರೀತಂಗೌಡ ಹೇಳಿದಂತಿತ್ತು.
ನೆನ್ನೆ ಜೆಡಿಎಸ್ ವಿದಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರು ಡಿ.ಕೆ. ಶಿವಕುಮಾರ್ ಬೇಟಿ ವಿಚಾರವಾಗಿ ಮಾತನಾಡಿ, ಅವರು ಯಾವಾಗ ಯಾವಾಗ ಯಾರ? ಯಾರನ್ನ ಬೇಟಿ ಮಾಡ್ತಾರೊ ನನಗೆ ಮಾಹಿತಿ ಇಲ. ಎಂದು ಪರೋಕ್ಷವಾಗಿ ಜೆ.ಡಿ.ಎಸ್. ನಾಯಕರ ಕಾಲೆಳದ ಪ್ರೀತಂಗೌಡ. ನಾನು ರಾಜ್ಯ ಪ್ರಧಾನ ಕಾರ್ಯದರ್ಶಿ iiಗಿ ಯಾರೋ ಒಬ್ಬ ವ್ಯಕ್ತಿ ಯಾರನ್ನೊಬೇಟಿಯಾದರೆ ಆ ಬಗ್ಗೆ ಮಾತನಾಡಲ್ಲ. ಬಹುಶಃ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ನೀರಾವರಿ ವಿಚಾರಕ್ಕೆ ಹೋಗಿರಬಹುದು ಎನ್ನೋದು ನಮ್ಮ ಭಾವನೆ. ಅದನ್ನು ಮೀರಿ ಬೇರೆ ಏನಾದರು ಇದ್ದರೆ ಅದನ್ನು ಅವರೇ ಹೇಳಬೇಕು.
ಜೆಡಿಎಸ್ ರಾಜಕೀಯವಾಗಿ ಮಾತಿಗೆ ತಪ್ಪದೆ ಇರೋ ಪಕ್ಷ. ಅವರು ಮೋದಿಯವರನ್ನು ಭೇಟಿಯಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದಾರೆ. ಹಾಗಾಗಿ ಅವರು ಬೇರೆ ಯೋಚನೆ ಮಾಡೋದಿಲ್ಲ ಎನ್ನೋ ನಂಬಿಕೆ ಇದೆ. ಹಿಂದೊಂದು, ಮುಂದೊಂದು ಮಾಡೋದಿಲ್ಲ ಎಂದರು.
ಬಿಜೆಪಿ ತೊರೆದಿದ್ದ ನಾಯಕರು ಮರಳಿ ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿ, ಕೆಲ ನಾಯಕರು ಬೇರೆ ಬೇರೆ ಕಾರಣಗಳಿಗೆ ದೂರ ಸರಿದಿದ್ದರು.ಆದರೆ ಈಗ ಇರೋದು ಪಂಚಾಯ್ತಿ ಚುನಾವಣೆ ಅಲ. ದೇಶದ ಚುನಾವಣೆ. ವಿಶ್ವನಾಯಕರಾಗಿ ಮೋದಿಯವರು ತಮ್ಮದೇ ಛಾಪು ಮೂಡಿಸಿದ್ದಾರೆ.
ಮೋದಿಯವರು ಮತ್ತೆ ಪ್ರದಾನಿಯಾಗಬೇಕು ಎನ್ನೋದು ಎಲ್ಲರ ಆಸೆ. ಹಾಗಾಗಿ ಅನೇಕ ಹಿರಿಯರು ಕೆಲ ಇರಿಸು ಮುರಿಸಿನಿಂದ ದೂರ ಹೋದವರು ಮತ್ತೆ ವಾಪಸ್ ಬರ್ತಾ ಇದ್ದಾರೆ. ಚಿಕ್ಕಪುಟ್ಟ ಮನಸ್ಥಾಪ ಬಿಟ್ಟು ಬರ್ತಾ ಇದ್ದಾರೆ. ರಾಮ ಮಂದಿರ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಿಲುವು ದಿಕ್ಕರಿಸಿ ಬಿಜೆಪಿ ಕಡೆ ಬರ್ತಾ ಇದ್ದಾರೆ. ಅಯೋಧ್ಯೆ ಬಗ್ಗೆ ಅವರ ನಿರ್ಧಾರದಿಂದ ಕೇವಲ ನಾಯಕರಲ್ಲ. ಲಕ್ಷಾಂತರ ಕಾರ್ಯಕರ್ತರು ಬಿಜೆಪಿ ಕಡೆ ಬರ್ತಾ ಇದ್ದಾರೆ. ಅವರ ನಡೆಯಿಂದ ಭ್ರಮ ನಿರಸನಗೊಂಡಿದ್ದಾರೆ.
ಯಾರೋ ಒಬ್ಬ ವ್ಯಕ್ತಿ ಹೆಸರಿಸಿ ಹೇಳೋದಿಲ್ಲ. ಬಿಜೆಪಿ ಬಿಟ್ಟು ಹೋದೋರು ಮಾತ್ರವಲ್ಲ ಬೇರೆ ಪಕ್ಷದ ನಾಯಕರು ಕೂಡ ಪಕ್ಷಕ್ಕೆ ಬರ್ತಾರೆ ಎಂದು ಹಾಸನದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆ ನೀಡಿದರು. ಜಗದೀಶ್ ಶೆಟ್ಟರ್ ನೆನ್ನೆ ಮೊನ್ನೆ ಬಿಜೆಪಿ ಪಕ್ಷದವರಲ್ಲ. ಅವರು ಜನ ಸಂಘದ ಕಾಲದಲ್ಲಿಂದಲು ಇದ್ದವರು. ಹಾಗಾಗಿ ಅವರು ಮರಳಿ ಬಂದಿದಾರೆ. ಇದಕ್ಕೆ ಯಾವ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಕಿರಣ್, ಜಿ. ದೇವರಾಜೇಗೌಡ, ಯುವ ಮೋರ್ಚಾದ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮೀತ್ ಶೆಟ್ಟಿ, ಮಾದ್ಯಮ ಸಂಚಾಲಕ ಪ್ರೀತಿವರ್ಧನ್ ಇತರರು ಉಪಸ್ಥಿತರಿದ್ದರು.