
ಕಾನ್ಸ್‌ಟೇಬಲ್ ಹುದ್ದೆಗೆ ಪರೀಕ್ಷೆ, ಬಾರಿ ಕಟ್ಟುನಿಟ್ಟು
ಹಾಸನ: ಸಶಸ್ತ್ರಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಈ ಬಾರಿ ಬಾರಿ ಕಟ್ಟುನಿಟ್ಟು ಜಾರಿ ಮಾಡಿ ಪ್ರತಿ ಅಭ್ಯರ್ಥಿಯನ್ನು ಪರಿಶೀಲಿಸಿ ಪರೀಕ್ಷಾ ಕೊಠಡಿಗೆ ಬಿಡಲಾಗುತ್ತಿತ್ತು.
ಕಳೆದ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕಾಪಿ ಹೊಡೆದ ಪಕರಣ ದಾಖಲಾದ ಹಿನ್ನಲೆಯಲ್ಲಿ ಈ ವರ್ಷ ಬಾರಿ ಬಿಗಿ ಬಂದುಬಸ್ತ್ ಮಾಡಲಾಗಿತ್ತು. ಹಾಸನ ಜಿಲ್ಲೆಯ ಅಭ್ಯರ್ಥಿಗಳನ್ನು ಚಾಮರಾಜ ನಗರ ಜಿಲ್ಲೆಗೆ ಪರೀಕ್ಷೆ ಮಾಡಲು ಕಳುಹಿಸಲಾಗಿದ್ದು, ಗದಗ್ ಇತರೆ ಭಾಗದವರನ್ನು ಹಾಸನ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳನ್ನು ಹೊರ ಭಾಗದಲ್ಲೆ ಪೊಲೀಸ್ ಸಿಬ್ಬಂದಿಯಿಂದ ಪರೀಕ್ಷೆಗೆ ಒಳಪಡಿಸಲಾಯಿತು.
ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಲರ್ ರಹಿತ ಶರ್ಟ್‌ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್‌ಗಳು ಹಾಗೂ ದೊಡ್ಡ ಬಟನ್‌ಗಳು ಇರುವ ಶರ್ಟ್ ಧರಿಸ ತಕ್ಕದ್ದಲ್ಲ. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್ ಧರಿಸತಕ್ಕದ್ದಲ್ಲ. ಪರೀಕ್ಷಾ ಕೇಂದ್ರದೊಳಗೆ ಶೂ ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗ ಇರುವ ಪಾದರಕ್ಷೆಗಳನ್ನು ಧರಿಸುವುದು. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡತಗಳನ್ನು ಧರಿಸುವುದನ್ನು ನಿಷೇಧಿಸಿ ಪೊಲೀಸ್ ಪರೀಕ್ಷೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಲಾಗಿತ್ತು.
ಇದನ್ನು ಮೀರಿ ಹಾಕಿಕೊಂಡು ಬಂದ ಅಭ್ಯರ್ಥಿಗಳ ಬೆಲ್ಟ್, ಕಿವಿ ಓಲೆ ಇತರೆ ವಸ್ತುಗಳನ್ನು ತೆಗೆಯಿಸಿ ಒಂದು ಕಡೆ ಎಸೆಯಲಾಯಿತು.
ಒಟ್ಟು ೧೭ ಸಾವಿರ ಜನ ಪರೀಕ್ಷೆ ಬರೆಯಲಾಗುತ್ತಿದ್ದು, ಹಾಸನದಲ್ಲಿ ೨೪ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದರು.


