
ಆನೆಗಳನ್ನು ನಮ್ಮ ಗ್ರಾಮದಿಂದ ಓಡಿಸಿ..ಇಲ್ಲದಿದ್ದರೆ ನಮಗೂ ಪಟಾಕಿಗಳನ್ನೂ ನೀಡಿ ಓಡಿಸುವ ಅವಕಾಶ ಕಲ್ಪಿಸಿ ಎಂದು ಅಧಿಕಾರಿಗಳನ್ನು ಮನವಿ ಮಾಡಿದ ಘಟನೆ ನಡೆದಿದೆ.
ಅರೇಹಳ್ಳಿ: ಹೋಬಳಿಯ ಚುಂಗನಹಳ್ಳಿ ಗ್ರಾಮದ ಜಾನಕಿ ರವರ ಮನೆಯ ಹತ್ತಿರ ಕಳೆದ ರಾತ್ರಿ 10 ಘಂಟೆಯ ಸಮಯದಲ್ಲಿ ಸುಮಾರು 12 ಕಾಡಾನೆಗಳ ಹಿಂಡು ಮನೆಯ ಹಿಂಬದಿಯಲ್ಲಿ ಕೊಟ್ಟಿಗೆಗಾಗಿ ಬಳಸಿದ್ದ ಬಿದಿರುಗಳನ್ನೂ ಎಳೆದಾಡಿ ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ ಕಬ್ಬು,ಕಾಫಿ , ಬಾಳೆ ಸೇರಿದಂತೆ ಇನ್ನಿತರ ಗಿಡಗಳನ್ನು ಹಾನಿ ಮಾಡಿದೆ.
ಬಡ ಕುಟುಂಬ ಆದ ಇವರಿಗೆ ಒಂದೊಂದು ಗಿಡಗಳು ಹಾಗು ಒಂದೊಂದು ಕಟ್ಟಿಗೆಯು ಮುಖ್ಯವಾಗಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಆದ ನಷ್ಟಕ್ಕೆ ಪರಿಹಾರವನ್ನು ನೀಡಬೇಕು ಹಾಗು ಗ್ರಾಮಕ್ಕೆ ಆನೆಗಳು ಬರದ ರೀತಿಯಲ್ಲಿ ಎಚ್ಚರವಹಿಸಿ ಇಲ್ಲದಿದ್ದರೆ ನಮಗೂ ಪಟಾಕಿಗಳನ್ನು ನೀಡಿ ಓಡಿಸಲು ಅವಕಾಶ ಕಲ್ಪಿಸಿ ಎಂದು ಗ್ರಾಮದ ರತನ್ ಅಧಿಕಾರಿಗಳಿಗೆ ಮನವಿ ಮಾಡಿದರುಈ ವೇಳೆ ಸುನಿಲ್,ಸತ್ಯನಾರಾಯಣ್,ಜಾನಕಿ,ರಮೇಶ್ ಮತ್ತಿತರು ಉಪಸ್ಥಿತರಿದ್ದರು


