ಭಾರತದ ಸಂವಿಧಾನ ಅಂಗೀಕಾರವಾಗಿ 75 ವಸಂತಗಳು ಪೂರೈಸಿದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಏರ್ಪಡಿಸಿದ್ದು,ಈ ಜಾಥಾವು ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮಕ್ಕೆ ದಿನಾಂಕ: 6.2.2024 ರಂದು ಪ್ರವೇಶಿಸಲಿದ್ದು, ದಿನಾಂಕ: 11.2.2024ರ ವರೆಗೆ ಸಕಲೇಶಪುರ ತಾಲೂಕಿನಾದ್ಯಂತ ಸಂಚರಿಸಲಿದೆ.
ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಮೂರ್ತಿ ತಿಳಿಸಿದ್ದಾರೆ.
ಈ ಜಾಥಾ ಸಂಚಾರದ ಬಗ್ಗೆ ರೂಪುರೇಷೆ ಸಿದ್ದಪಡಿಸಲು ಮಾನ್ಯ ಶಾಸಕರು, ಆಲೂರು-ಸಕಲೇಶಪುರ ಕ್ಷೇತ್ರರವರ ಅಧ್ಯಕ್ಷತೆಯಲ್ಲಿ ಹಾಗೂ ತಹಶೀಲ್ದಾರ್ ಸಕಲೇಶಪುರ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ, ಸಕಲೇಶಪುರ ರವರ ಉಪಸ್ಥಿತಿಯಲ್ಲಿ ದಿನಾಂಕ: 30-1-2024 ರಂದು ಸಕಲೇಶಪುರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬೆಳಿಗ್ಗೆ 10:30 ಗಂಟೆಗೆ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ.
ಈ ಸಭೆಗೆ ಸಕಲೇಶಪುರ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು, ದಲಿತ ಸಂಘಟನೆಗಳ ಪ್ರಮುಖರು, ಎಲ್ಲಾ ಸಂಘಸಂಸ್ಥೆಗಳ ಮುಖಂಡರು, ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಮಾದ್ಯಮ ಸ್ನೇಹಿತರು ಈ ಸಭೆಗೆ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆ ನೀಡಬೇಕಾಗಿ ಈ ಮೂಲಕ ಕೋರಲಾಗಿದೆ.
ಸಹಾಯಕ ನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ, ಸಕಲೇಶಪುರ.