ರಾಜ್ಯದಲ್ಲಿ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತದೆ. ಅಕಾಲಿಕ ಮಳೆ, ಕಾಡಾನೆಗಳ ಕಾಟ ಹಾಗೂ ಇತರ ಸಮಸ್ಯೆಗಳನ್ನು ದಾಟಿ ಒಂದಿಷ್ಟು ಬೆಳೆ ಉಳಿಸಿಕೊಂಡ ಕಾಫಿ ತೋಟದ ಮಾಲೀಕರಿಗೆ ಈ ವರ್ಷ ಮತ್ತೊಂದು ಬಹುದೊಡ್ಡ ಸವಾಲು ಎದುರಾಗಿದೆ.

ಉತ್ತಮ ಬೆಲೆ ಇದ್ದರೂ ಕೂಡ ಕಾಫಿ ಕೊಯ್ಲು ಮಾಡಿ ಮಾರುಕಟ್ಟೆ ಮುಟ್ಟಿಸದಂತಾಗಿದೆ. ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾಫಿ ಕೊಯ್ಲು ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಬಹುತೇಕ ಕಡೆ ಇನ್ನು ಕಾರ್ಮಿಕರ ಕೊತೆರೆಯಿಂದ ಕೊಯ್ಲು ಆರಂಭವಾಗಿಲ್ಲ.

ಮೊದಲು ಕೊಡಗಿನಲ್ಲಿ ಆರಂಭವಾದ ಕಾಫಿ ಕೀಳುವ ಕಾರ್ಮಿಕರ ಕೊರತೆ ಈಗ ಹಾಸನ ಜಿಲ್ಲೆಯ ಸಕಲೇಶಪುರದಲ್ಲೂ ಹೆಚ್ಚಾಗಿದ್ದು, ಕಾರ್ಮಿಕರು ಸಿಗದೇ ಕಾಫಿ ತೋಟದ ಮಾಲೀಕರರು ಹಾಗೂ ಮ್ಯಾನೇಜರ್‌ಗಳು ಹೈರಾಣಾಗಿ ಹೋಗಿದ್ದಾರೆ.

ಕಾಫಿ ಹಣ್ಣಾಗುವ ಕಾಲ ಶುರುವಾಗಿದ್ದು, ಎಲ್ಲಾ ಗಿಡಗಳಲ್ಲೂ ಕೊಯ್ಲಿಗೆ ಬಂದ ಹಣ್ಣುಗಳು ಕಾಣುತ್ತಿವೆ.ಸ್ಪಲ್ಪ ಸಮಯ ಬಿಟ್ಟರೆ ಕಾಫಿ ಹಣ್ಣಾಗಿ ಗಿಡದಿಂದ ಬಿದ್ದು ಹೋಗುತ್ತದೆ. ಹೀಗಾಗಿ ಸೂಕ್ತ ಸಮಯಕ್ಕೆ ಅವುಗಳನ್ನು ಗಿಡದಿಂದ ಕೀಳಬೇಕು. ಆದರೆ ಕಾಫಿ ಕೀಳಲು ಕಾರ್ಮಿಕರು ಸಿಗದೆ ತೋಟದ ಮಾಲೀಕರು ಪರದಾಡುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಅರೇಬಿಕಾ ಕಾಫಿ ಕೊಯ್ಲು ವಿಳಂಬವಾಗಿತ್ತು. ಈ ವೇಳೆ ಕಾರ್ಮಿಕರಿಗೆ ಕೊಡಗಿನಲ್ಲಿ ಭಾರಿ ಬೇಡಿಕೆ ಉಂಟಾಗಿತ್ತು. ಹೀಗಾಗಿ ಕೊಡಗಿ ಕಾಫಿ ತೋಟದ ಮಾಲೀಕರರು ಮಹಿಳೆಯರ ದಿನದ ವೇತನ 415 ರೂಪಾಯಿ ಹಾಗೂ ಪುರುಷರ ದಿನದ ವೇತನ 615 ರೂಪಾಯಿ ನಿಡುವುದಾಗಿ ಆಫರ್‌ ನೀಡಿದ್ದರು.

ನಿಗದಿತ ಸಮಯಕ್ಕಿಂತ ಜಾಸ್ತಿ ಕೆಲಸ ಮಹಿಳೆಯರು ಮತ್ತು ಪುರುಷರಿಗೆ ಹೆಚ್ಚಿನ ಸಂಬಳ ನೀಡುವುದಾಗಿ ತಿಳಿಸಿದ್ದರು.ಕೊಡಗಿನ ಕಾಫಿ ತೋಟದ ಮಾಲೀಕರ ಆಫರ್‌ಗೆ ಒಪ್ಪಿಕೊಂಡ ಸ್ಥಳೀಯ ಹಾಗೂ ಹೊರ ರಾಜ್ಯದ ಕಾರ್ಮಿಕರು ಕೊಡಗಿನತ್ತ ತೆರಳಿದ್ದಾರೆ. ಹೀಗಾಗಿ ಸಕಲೇಶಪುರ ಭಾಗದಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಸಕಲೇಶಪುರ ತಾಲೂಕಿನ ಶೇ.80 ಭಾಗದಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತದೆ. ವನ್ಯ ಜೀವಿಗಳ ಕಾಟ ಅಕಾಲಿಕ ಮಳೆಯಿಂದ ಈ ವರ್ಷ ಶೇ.50 ರಷ್ಟು ಬೆಳೆ ನಷ್ಟವಾಗಿದೆ.

ಉಳಿದ ಬೆಳೆಯನ್ನು ಉಳಿಸಿಕೊಳ್ಳಲು ಮಾಲೀಕರರು ಪರದಾಡುತ್ತಿದ್ದು, ಏನೇ ಆಫರ್‌ ನೀಡದರೂ ಕೂಡ ಕಾಫಿ ಕೊಯ್ಲು ಮಾಡಲು ಕಾರ್ಮಿಕರು ಸಿಗದಂತಾಗಿದೆ. ಕಳೆದ ವರ್ಷ ಒಂದು ಟಿನ್‌ ಕಾಫಿ ಕೊಯ್ಲು ಮಾಡಲು 50 ರೂಪಾಯಿ ಇದ್ದ ದರ ಈ ವರ್ಷ 70 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಅದೇ ರೀತಿ ಕಳೆದ ವರ್ಷ ಹಸಿ ಕಾಫಿ ಕೊಯ್ಲು ಮಾಡಲು ಒಂದು ಕೆಜಿಗೆ ಮೂರು ರೂಪಾಯಿ ಇದ್ದ ದರ ಈ ವರ್ಷ 5 ರಿಂದ 6 ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ.

ಹೀಗಾಗಿ ಕಾಫಿ ಬೆಳೆಗಾಗರು ಬೆಳೆ ಉಳಿಸಿಕೊಳ್ಳಲು ಶತಪ್ರಯತ್ನ ಪಡುತ್ತಿದ್ದು, ಉತ್ತರ ಕರ್ನಾಟಕದಿಂದ ಕಾರ್ಮಿಕರನ್ನು ಏಜೆಂಟ್‌ರ್‌ಗಳ ಮೂಲಕ ಕರೆತರಲು ಮುಂದಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *