
ಬೇಲೂರು :“ಮನುಷ್ಯನ ಒತ್ತಡದ ನಿವಾರಣೆಗೆ ಸಾಹಿತ್ಯ ಅಧ್ಯಯನ ಅವಶ್ಯ”
ಪ್ರಸಕ್ತ ದಿನಮಾನದಲ್ಲಿ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ಒತ್ತಡದಿಂದ ಆನರೋಗ್ಯ ಪೀಡಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಒತ್ತಡವನ್ನು ನಿವಾರಿಸಲು ಸಾಹಿತ್ಯದ ಅಧ್ಯಯನ ಕಡೆ ಮುಖ ಮಾಡಬೇಕು ಎಂದು ಬೇಲೂರು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಕಲಾವಿದ ಚಂದನ್ ಕುಮಾರ್ ಪ್ರಾಯೋಜಕತ್ವದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮನೆ ಮನೆ ಸಾಹಿತ್ಯ ಗೋಷ್ಠಿ ಸಮಾರಂಭವನ್ನು ಉದ್ಘಾಟನೆ ನಡೆಸಿ ಮಾತನಾಡಿದ ಅವರು ನಮ್ಮಲ್ಲಿ ಸಾಹಿತ್ಯವೆಂದರೆ ಮೂಗುಮುರಿಯುವವರೇ ಹೆಚ್ಚು,ಸಾಹಿತ್ಯ ಒಂದು ವರ್ಗಕ್ಕೆ ಸೀಮಿತವಾಗಿದೆ ಎನ್ನುತ್ತಾರೆ. ಆದರೆ ಸಾಹಿತ್ಯ ನಮ್ಮ ಬದುಕನ್ನು ಬದಲಾಯಿಸುವ ಗಟ್ಟಿತನವಿದೆ ಎಂಬ ವಿಷಯವನ್ನು ನಾವುಗಳು ತಿಳಿಯಬೇಕಿದೆ.
ಬೇಲೂರು ಸಾಹಿತ್ಯ ಪರಿಷತ್ತು ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯದ ಬಲವರ್ಧನಗೆ ನಿಜಕ್ಕೂ ನೀಡಿದ ಕೊಡುಗೆ ಅಪಾರವಾಗಿದೆ ಎಂದ ಅವರು ಕಳೆದ ಭಾರಿ ಪಟ್ಟಣದ ಸಾಹಿತ್ಯ ಭವನದ ನವೀಣಕರಣಕ್ಕೆ ರೂ ೧೦ ಲಕ್ಷ ನಗರೋತ್ಥನದಲ್ಲಿ ನೀಡಲಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಈ ಹಣ ರದ್ದದಾದ ಹಿನ್ನಲೆಯಲ್ಲಿ ಸದ್ಯ ಪುರಸಭೆಗೆ ರೂ ೮.೫ ಕೋಟಿ ಹಣ ಬಂದಿದ್ದು, ಶಾಸಕರ ಸಮ್ಮುಖದಲ್ಲಿ ನವೀಕರಣಕ್ಕೆ ನೀಡಲು ನಮ್ಮ ಯಾವುದೇ ಅಭ್ಯಂತರವಿಲ್ಲ
ಇಂದು ನಡೆದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಎಂದರು.
ಉಪನ್ಯಾಸ ನೀಡಿದ ಸಾಹಿತಿ ಟಿ.ಡಿ.ತಮ್ಮಣ್ಣಗೌಡ, ಕನ್ನಡ ಭಾಷೆಯಲ್ಲಿ ಗೋವಿಂದಪೈ ಮತ್ತು ಕುವೆಂಪು ಬಳಿಕ ಮೂರನೇ ರಾಷ್ಟ್ರಕವಿ ಎಂಬ ಬಿರುದಿಗೆ ಪಾತ್ರರಾಗಿದ್ದು ಜಿ.ಎಸ್.ಶಿವರುದ್ರಪ್ಪನವರು, ಅವರು ನವೊದಯ ಕನ್ನಡ ಸಾಹಿತ್ಯಕ್ಕೆ ಅಪಾರ ಸಾಹಿತ್ಯ ಕೊಡುಗೆ ನೀಡಿದ್ದಾರೆ.
ಬದುಕಿನಲ್ಲಿ ಕೂಡ ವೈಚಾರಿಕೆ ಮತ್ತು ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು ಬಾಳಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅಳವಡಸಿಕೊಳ್ಳಬೇಕು ಎಂದು ತಿಳಿಸಿದರು.
ಬೇಲೂರು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಬೆಳಕು ಮತ್ತು ಕತ್ತಲೆ ನಡುವಿನ ಬಗ್ಗೆ ಬರೆದ ಕವಿತೆಗಳು ಇಂದಿಗೂ ಪ್ರಸ್ತುತವಾಗಿದೆ. ರಾಷ್ಟçಕವಿ ಕುವೆಂಪುರ ಪರಮ ಶಿಷ್ಯರಾದ ಜಿ.ಎಸ್.ಶಿವರದ್ರಪ್ಪನವರು ರಚಿಸಿದ ಭಾವಗೀತೆಗಳು ಕನ್ನಡ ನಾಡಿನ ಜನಮನದಲ್ಲಿ ಉಳಿದೆ.
ತಾಲ್ಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಎಲ್.ರಾಜೇಗೌಡರ ನೇತೃತ್ವದ ತಂಡ ಜಿಲ್ಲೆಯಲ್ಲಿಯೇ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಇಂದಿರಮ್ಮ, ಪುರಸಭಾ ಸದಸ್ಯ ಬಿ.ಗಿರೀಶ್, ಎಸ್ಬಿಐ ವ್ಯವಸ್ಥಾಪಕ ಮಹೇಂದ್ರ, ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಗೌರವ ಕಾರ್ಯದರ್ಶಿಗಳಾದ ಬಿ.ಬಿ.ಶಿವರಾಜ್. ಆರ್.ಎಸ್.ಮಹೇಶ್, ಕೋಶಾಧ್ಯಕ್ಷ ಮಾ.ನ.ಮಂಜೇಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತ ಧನಂಜಯ್ಮ ಮಲ್ಲಿಕಾರ್ಜನ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

