ಸಕಲೇಶಪುರ : ಪ್ರಪಂಚದ ಅನೇಕ ರಾಷ್ಟ್ರಗಳ ಸಂವಿದಾನವನ್ನು ಅದ್ಯಯನ ಮಾಡಿ ಭಾರತಕ್ಕೆ ಯಾವ ಮಾಧರಿಯ ಸಂವಿದಾನವನ್ನು ನೀಡಬೇಕು ಎಂದು ಆಲೋಚಿಸಿ ಈ ಭಾರತ ದೇಶಕ್ಕೆ ಅತ್ಯುನ್ನತಾದ ಸಂವಿಧಾನವನ್ನು ನೀಡಿದ ಶ್ರೇಯಸ್ಸು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಉಪಾನ್ಯಾಸಕ ಮಂಜುನಾಥ್ ಹೇಳಿದರು.

ಗುರುವಾರ ಆನೆಮಹಲ್ ಗ್ರಾಮ ಪಂಚಾಯಿತಿಯಲ್ಲಿ ನೆಡದ ಸಂವಿದಾನ ಜಾಗೃತಿ ಜಾಥವನ್ನು ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಾನ್ಯಾಸಕ ಮಂಜುನಾಥ್ ಅವರು ಮಾತನಾಡಿನಮ್ಮ ದೇಶಕ್ಕೆ ಸಂವಿದಾನ ಏಕಾಏಕಿ ರಚನೆಯಾಗಲಿಲ್ಲ ಪ್ರಪಂಚದ ಹಲವಾರು ದೇಶಗಳ ಸಂವಿದಾನವನ್ನು ಅಧ್ಯಯನ ಮಾಡಿ ಸತತ ಮೂರು ವರ್ಷ ಹನ್ನೊಂದು ತಿಂಗಳು 28 ದಿನಗಳ ಕಾಲ ಡಾ.ಬಿ.ಬಿರ್. ಅಂಬೇಡ್ಕರ್ ಅವರು ರಚನೆ ಮಾಡಿ ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಸ್ಲಿಂ ಗುರುಗಳಾದ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ ಭಾರತದ ದ್ರುವತಾರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ಮಹಾತ್ಮ ಗಾಂದೀಜಿಯವರು 1947 ರಲ್ಲಿ ಸ್ವಾತಂತ್ರ್ಯ ವನ್ನು ತಂದು ಕೊಟ್ಟರೂ ಸಹಿತ ಶೋಷಿತ ಸಮುದಾಯಗಳಿಗೆ ನಿಜವಾದ ಸ್ವಾತಂತ್ರ್ಯ ಬಂದಿದ್ದು 1950 ರಲ್ಲಿ ಸಂವಿಧಾನ ಜಾರಿಗೆ ಬಂದ ದಿನ ನಿಜವಾದ ಸ್ವಾತಂತ್ರ್ಯ ಬಂದಿತು ಹಾಗಾಗಿ ದೇಶದ ಪ್ರತಿಯೊಬ್ಬ ನಾಗರೀಕರು ಸಂವಿಧಾನವನ್ನು ಅದ್ಯಯನಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಆನೆಮಹಲ್ ಗ್ರಾಮ ಪಂಚಾಯಿತಿ ಅದ್ಯಕ್ಷೆ ಮಂಜುಳ, ಉಪಾದಕ್ಷ ವಿರೂಪಾಕ್ಷ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆನಂದ ಮೂರ್ತಿ, ಪಿಡಿಓ ವೇಣುಗೋಪಾಲ್, ಕಾರ್ಯದರ್ಶಿ ವೀರೇಶ್, ಸದಸ್ಯರಾದ ಹಸೇನಾರ್, ತಿಮ್ಮಯ್ಯ, ವೀರಭದ್ರ, ಪ್ರಶಾಂತ್ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *