
ಸಕಲೇಶಪುರ : ಹಾನುಬಾಳು ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ಜಾಗೃತಿ ಸಭೆ ಮತ್ತು ಜಾಥಾ ಕಾರ್ಯಕ್ರಮಲ್ಲಿ ಸಂವಿಧಾನ ಶಿಲ್ಪಿ ಬಾಬ ಸಾಹೇಬ್ ಅಂಬೇಡ್ಕರ್ ರವರ ರಥವನ್ನು ವೆಂಕಟಹಳ್ಳಿ ಸ್ವಾಗತ ಕಾಮಾನು ಹತ್ತಿರ ಸ್ವಾಗತಿಸಿ, ಗ್ರಾಮ ಪಂಚಾಯಿತಿಯಿಂದ ಪುಷ್ಪಮಾಲೆ ಅರ್ಪಿಸಿ, ನಾಸಿಕ್ ಡೋಲು ಪೂರ್ಣಕುಂಭ ಸ್ವಾಗತ ಮತ್ತು ಶಾಲಾಮಕ್ಕಳು ಗ್ರಾಮಸ್ಥರು ಮುಖಂಡರೊಂದಿಗೆ ಭವ್ಯ ಮೆರವಣಿಗೆಯನ್ನು ಹಾನುಬಾಳು ಸರ್ಕಲ್ ತನಕ ಹಮ್ಮಿಕೊಂಡು 500ಕ್ಕೂ ಹೆಚ್ಚುಜನರು 100 ಕ್ಕೂ ಹೆಚ್ಚು ಬೈಕ್ ಮತ್ತು ಇತರೆ ವಾಹನಗಳಲ್ಲಿ ಮೆರವಣಿಗೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರಿ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮಕೃಷ್ಣ ಆರ್ ರವರು ಉಪಾಧ್ಯಕ್ಷರಾದ ಶ್ರೀಮತಿ ಶೈಲಾ, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಮೋಹನ್ ಕುಮಾರ್ ಅಚ್ಚರಡಿ, ಸುರೇಶ್, ಯೋಗರಾಜು, ಶೋಭ, ಶಿಲ್ಪ, ವಿಮಲಾ ರಾಜಯ್ಯ, ಹರಿಣಾಕ್ಷಿ, ಹಾಗೂ ಎಇಇ ಆಶಾಲತಾ, ಶ್ರೀ ಮಸ್ತಾರೆ ಲೋಕೇಶ್, ಹಳೆ ವಿದ್ಯಾರ್ಥಿ ಸಂಘದ ಚಂದ್ರಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಂ. ಬಿ.ರಾಜೀವ್,ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂ. ಸಂಚಾಲಕರು ಶ್ರೀ ಗೋಪಾಲ್ ರೋಟರಿ ಅಧ್ಯಕ್ಷರಾದ ರಘು, ಎಸ್ಡಿಎಂಸಿ ಅಧ್ಯಕ್ಷರಾದ ಅಣ್ಣು, ಮಜೀದ್, ಹುರುಡಿ ವಿಕ್ರಮ್ ಹಾಜರಿದ್ದರು..
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ರು ಸಮಾಜ ಕಲ್ಯಾಣ ಇಲಾಖೆ ಆನಂದ ಮೂರ್ತಿ, ಪಿಡಿಓ ಮತ್ತು ಸಹಾಯಕ ನಿರ್ದೇಶಕ ರು (ಪಂ.ರಾಜ್) ಹರೀಶ್ ಕೆ ಕಾರ್ಯದರ್ಶಿ ವೀಣಾ ಉಪತಹಶಿಲ್ದಾರ್ ಮಂಜುನಾಥ್, ಡಾ. ನಿಶ್ಚಯ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು. ಸಂವಿಧಾನ ಪೀಠಿಕೆ ಪ್ರಮಾಣ ಬೋದಿಸಲಾಯಿತು. ಹಾನುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವಧರ್ಮದ ಮುಖಂಡರು, ದಲಿತ ಸಂಘಟನೆಯ ಪ್ರತಿನಿಧಿಗಳು ಸುಮಾರು 800 ಹೆಚ್ಚು ಜನರು ಕಾರ್ಯಕ್ರಮ ಯಶಸ್ವಿಗೊಳಿಸಿದರು..
ಎಲ್ಲರಿಗೂ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಹಾನುಬಾಳು ಸರ್ಕಲ್‌ನಲ್ಲಿ ಉತ್ಸಾಹ ಇಮ್ಮಡಿಯಾಗಿತ್ತು.
ತಾಲ್ಲೂಕಿನಲ್ಲಿ ಅತೀ ವಿಜ್ರಂಭಣೆಯಿಂದ ನಡೆದ ಅತ್ಯುತ್ತಮ ಕಾರ್ಯಕ್ರಮ ನಡೆಯಿತು.


