ಬೇಲೂರು : ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷಾ ಜಾಗೃತಿ ಸಾಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುರಕ್ಷಿತ ಚಾಲನೆಗೆ ಹೆಚ್ಚಿನ ಆಧ್ಯತೆ ನೀಡಿ ೧೯೬೬ ರಿಂದಲೂ ಇಂದಿನವರೆಗೆ ಸಾರಿಗೆ ಇಲಾಖೆಯಲ್ಲಿ ಪ್ರತಿನಿತ್ಯ ಕಾನೂನು ತಿದ್ದುಪಡಿ ಮಾಡುತ್ತಿದ್ದು, ವಾಹನಗಳ ಸಂಪೂರ್ಣ ಮಾಹಿತಿಯುಳ್ಳ ಹೆಚ್.ಎಸ್.ಆರ್.ಪಿ ಯೋಜನೆಯನ್ನು ಜಾರಿಗೆ ತರಲಾಗಿದೆ.

೨೦೧೯ ರಿಂದ ಆರಂಭವಾಗುವ ನೊಂದಾಣಿ ವಾಹನಗಳಿಗೆ ಕಡ್ಡಾಯವಾಗಿ ಐ ಸೆಕ್ಯೂರಿಟಿ ಪ್ಲೇಟ್ ಅಳವಡಿಸಲು ತಿಳಿಸಲಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರು ಫೆ. ೧೭ರ ಒಳಗೆ ಅನ್‌ಲೈನ್ ಮೂಲಕ ಅರ್ಜಿ ನೊಂದಾಣಿ ಮಾಡಿಕೊಂಡು ನಂಬರ್ ಪ್ಲೇಟ್ ಅಳವಡಿಸಿ ಕೊಳ್ಳಬೇಕು. ಜತೆಗೆ ದೇಶದಲ್ಲಿ ರಸ್ತೆ ಅಪಘಾತಗಳಿಂದ ವಾರ್ಷಿಕವಾಗಿ ೮ ಸಾವಿರ ಜನರು ಮರಣ ಹೊಂದುತಿದ್ದು, ಇದನ್ನು ತಗ್ಗಿಸಬೇಕಾದರೆ ವಾಹನ ಚಾಲಕರು ಸಾರಿಗೆ ನೀತಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು.

ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪಟ್ಟಣದಲ್ಲಿ ವಾಹನಗಳ ದಟ್ಟಣೆಯಿಂದ ಪ್ರತಿನಿತ್ಯ ಟ್ರಾಷಿಕ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಬೇಲೂರಿಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರು ಮತ್ತು ಪಾದಚಾರಿಗಳು ಓಡಾಡಲು ತೊಂದರೆಯಾಗುತ್ತಿದೆ. ಅಲ್ಲದೆ ವಾಹನಗಳನ್ನು ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಕೆಲ ಸಮಯ ವಾಹನಗಳು ಗಂಟೇ ಗಟ್ಟಲೆ ರಸ್ತೆಯಲ್ಲಿ ನಿಲ್ಲುವಂತ್ತಾಗಿದೆ.

ಆದ್ದರಿಂದ ಸುಗಮ ಸಂಚಾರಕ್ಕಾಗಿ ಶೀಘ್ರದಲ್ಲೆ ಫುಟ್‌ಪಾತ್ ತೆರವು ಕಾರ್ಯಚರಣೆ ನಡೆಸಿ ಅಲ್ಪ ಮಟ್ಟಿಗಾದರೂ ಟ್ರಾಫಿಕ್ ಸಮಸ್ಯೆ ನೀಗಿಸಲು ಪುರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು.ವಾಹನಗಳ ಸವಾರರು ಸಹ ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದರು.

ಸಾಹಿತಿ ನವಾಬ್ ಮಾತನಾಡಿ, ಜಬ್ದಾರಿಯುತ ನಾಗರೀಕ ಸಮಾಜದಲ್ಲಿ ಸಾರಿಗೆ ನೀತಿಗಳಿಗೆ ಗೌರವ ನೀಡುವ ಮೂಲಕ ಸುಗಮ ಸಂಚಾರ ಮತ್ತು ತಮ್ಮ ಪ್ರಾಣಕ್ಕೆ ಮಹತ್ವ ನೀಡಬೇಕು ಎಂದರು.

ತಹಸೀಲ್ದಾರ್ ಎಂ.ಮಮತ, ಸಾರಿಗೆ ಇನ್ಸ್ಪೆಕ್ಟರ್ ಆಶಾ, ಅಗ್ನಿಶಾಮಕ ಧಳದ ಇನ್ಸ್ಪ್ಟೇಕ್ಟರ್ ಜವರಯ್ಯ, ಎಎಸ್‌ಐ ವೀರೂಪಾಕ್ಷ ಹೊಯ್ಸಳ ಆಟೋ ಸಂಘದ ಅಧ್ಯಕ್ಷ ದೀಪು ಸೇರಿದಂತೆ ಇತರರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *