
ಸಕಲೇಶಪುರ : ನಗರದ ಡಿಕೆ ಡೆವಲಪರ್ಸ್ ಜಾತ್ರೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ತಾಲ್ಲೂಕು ಮಟ್ಟದ ಶಟಲ್ ಬ್ಯಾಟ್ ಮಿಂಟನ್ ಡಬಲ್ಸ್ ಕ್ರೀಡಾಕೂಟದಲ್ಲಿ ಸಕಲೇಶಪುರದ ಹೇಮಾವತಿ ಶೆಟಲ್ಸ್ ತಂಡದ ಪರವಾಗಿ ಆಡುವ ಬಾಳ್ಳುಪೇಟೆಯ ನವೀನ್ ಮತ್ತು ಸಂತೋಷ್ ಜೋಡಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಾಲ್ಲೂಕಿ ಜಮ್ಮನಹಳ್ಳಿ ಯುವಕರಾದ ಮನು ಮತ್ತು ಅಭಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ತೃತೀಯ ಸ್ಥಾನವನ್ನು ಪಟ್ಟಣದ ಪ್ರಶಾಂತ ಹಾಗೂ ಕೈಲಾಸ್ ಜೋಡಿ ಪಡೆದು ಕೊಂಡರು ಪ್ರತಿ ವರ್ಷ ನಡೆಯ ಈ ಕ್ರಿಡಾ ಕೂಟದಲ್ಲಿ ತಾಲ್ಲೂಕಿನ ಸುಮಾರು 100 ಕ್ಕೂ ಹೆಚ್ಚು ಬ್ಯಾಂಟಮಿಂಟನ್ ಕ್ರೀಡಾಪಟುಗಳು ಭಾಗವಹಿಸುತ್ತಾರೆ.
ಈ ಕ್ರೀಡಾಕೂಟದಲ್ಲಿ ರೊಮಾಂಚನಕಾರಿಯಾಗಿ ನಡೆದ ಕೆಲ ಪಂದ್ಯಗಳು ಕ್ರಿಡಾಭಿಮಾನಿಗಳ ಮನ ಗೆದ್ದತು. ತುಂಬ ಅಚ್ಚುಕಟ್ಟಾಗಿ ನಡೆದ ಈ ಕ್ರಿಡಾಕೂಟ ಬೆಳಗಿನ ಜಾವ 4.30 ರ ವರೆಗೆ ಪಂಧ್ಯವಳಿ ನಡೆಯಿತು.
ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಮೇಶ್, ತಾಲ್ಲೂಕು ಪಂಚಾಯತಿ ಸಹಾಯಕ ಕಾರ್ಯನಿರ್ವಾಣಾಧಿಕಾರಿ ಹರೀಶ್,ಹೇಮಾವತಿ ಶೆಟಲ್ಸ್ ತಂಡದ ಅಧ್ಯಕ್ಷ ಟಿ ಪಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
