
ಚನ್ನರಾಯಪಟ್ಟಣ: ಜಿಲ್ಲಾ ಉಸ್ತುವಾರಿ ಸಚಿವರು ಹೇಮಾವತಿ ನೀರಿಗಾಗಿ ತೆಗೆದುಕೊಂಡಿರುವ ನಿರ್ಣಯ ಸರಿ ಇಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ ಆರೋಪಿಸಿದ್ದಾರೆ
ಪಟ್ಟಣದ ಹೇಮಾವತಿ ಕಚೇರಿ ಮುಂಭಾಗದಲ್ಲಿ ನಡೆದಂತಹ ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ನಮ್ಮ ತಾಲೂಕಿನ ಜನರಿಗೆ ಕುಡಿಯುವ ನೀರಿನ ತೊಂದರೆ ಆಗಿದೆ ಆದರಿಂದ ಕೆರೆಕಟ್ಟೆಗಳನ್ನು ಕೂಡಲೇ ತುಂಬಿಸಬೇಕು ಎಂದು ಆಗ್ರಹಿಸಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣನವರು ಹೇಮಾವತಿ ನೀರಿಗಾಗಿ ತೆಗೆದುಕೊಂಡಿರುವ ನಿರ್ಣಯ ಸರಿ ಇಲ್ಲ ಏಕೆಂದರೆ ಅವರು ಮಧುಗಿರಿ ಒಂದು ಕ್ಷೇತ್ರಕ್ಕೆ ಮಾತ್ರ ಶಾಸಕರಲ್ಲ ಅವರು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಸಹಕಾರಿ ಸಚಿವರು ಎಂಬ ವಿಷಯವನ್ನು ಮರೆತು ಏಕ ನಿರ್ಣಯ ತೀರ್ಮಾನವನ್ನು ತೆಗೆದುಕೊಂಡು ಹಾಸನ ಜಿಲ್ಲೆಯ ರೈತರನ್ನು ಮತ್ತು ಸಾರ್ವಜನಿಕರನ್ನು ಕಡೆಗಣಿಸಿ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಕೊಂಡೊಯ್ತಿರುವುದು ಸರಿ ಇಲ್ಲ ಎಂದರು.
ಮೊದಲು ನಮ್ಮ ಸ್ಥಳೀಯ ಜನತೆಗೆ ನೀರು ನೀಡಿ ನಂತರ ಪಕ್ಕ ಜಿಲ್ಲೆಗೆ ನೀರು ಕೊಡುವುದು ಸೂಕ್ತವಾಗಿದೆ ಎಂದರು.ಸ್ಥಳೀಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇವುಗಳು ಹೆಚ್ಚಾಗಿವೆ, ಅದರ ಜೊತೆಯಲ್ಲಿ ತಾಲೂಕಿನ ಶಾಸಕರುಗಳು ಕೂಡ ಈ ಸಮಿತಿಯಲ್ಲಿ ಸಲಹೆ ಸಮಿತಿ ಸದಸ್ಯರಾಗಿದ್ದಾರೆ,ಆದರೆ ಈ ಶಾಸಕರು ಈ ವಿಷಯವನ್ನು ಕಡೆಗಣಿಸಿ ಸಾರ್ವಜನಿಕರ ಕುಡಿಯುವ ನೀರಿನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸುವ ಶಕ್ತಿಯನ್ನು ಮರೆತು ಮಾಡ್ತಿದ್ದಾರೆ .
ಕೂಡಲೇ ನಾವು ಕೂಡ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ ಈ ವಿಷಯವನ್ನು ಗಮನಿಸಿ ಮತ್ತು ಈಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ಹಾಗೂ ಜಲ ಸಂಪನ್ಮೂಲ ಇಲಾಖೆಯ ಸಚಿವರೊಂದಿಗೆ ಇಂದೇ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ಮಂಜುನಾಥ್, ಕಾಂಗ್ರೆಸ್ ಮುಖಂಡರುಗಳಾದ ಮಂಜುನಾಥ್, ಜಿ ಆರ್ ಮೂರ್ತಿ, ವಡ್ಡರಹಳ್ಳಿ ಮೋಹನ್, ರವೀಶ್ ,ಸ್ವಾಮಿ,ಮೋಹನ್, ಕುಮಾರ್, ಶ್ರವಣೇರಿ ದೊರೆ ಸೇರಿದಂತೆ ಇತರರು ಹಾಜರಿದ್ದರು

