ಹಾಸನ: ಕಾನೂನು ಬದ್ಧವಾಗಿ ಹಕ್ಕುಪತ್ರ ಇರುವ ನಮ್ಮ ಮನೆ ಜಾಗದಲ್ಲಿ ಶೆಡ್ ನಿರ್ಮಿಸಿದನ್ನು ನಗರಸಭೆಯವರು ಯಾವ ನೋಟಿಸ್ ನೀಡದೇ ನಾವು ಮನೆಯಲ್ಲಿ ಇಲ್ಲದ ವೇಳೆ ಜೆಸಿಬಿ ಮೂಲಕ ಧ್ವಂಶ ಮಾಡಲಾಗಿದ್ದು, ನ್ಯಾಯ ಕೊಡಬೇಕೆಂದು ಆಗ್ರಹಿಸಿ ಕಮ್ಮರುನಿಸಿಯಾ ಮತ್ತು ಅಂಜುಂ ಅವರು ತಮ್ಮ ಅಳಲು ತೋಡಿಕೊಂಡರು.

ನಗರದ ಚಿಪ್ಪಿನಕಟ್ಟೆ, ೮೦ ಫೀಟ್ ರಸ್ತೆ ಬಳಿ ಕಳೆದ ೨೫ ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ಕಮ್ಮರುನಿಸಿಯಾ ಅಂಜುಂ ಅವರು ವಸತಿ ಇಲಾಖೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಈ ಜಾಗ ಪಡೆಯಲಾಗಿದ್ದು, ಸುಮಾರು ೨೫ ವರ್ಷಗಳಿಂದಲೂ ಈ ಜಾಗದಲ್ಲೆ ಮನೆ ನಿರ್ಮಿಸಿ ಜೀವನ ನಡೆಸುತ್ತಿದ್ರು.

ಕೆಲ ದಿನಗಳ ಹಿಂದೆ ಹಕ್ಕುಪತ್ರ ಇರುವ ಜಾಗದಲ್ಲೆ ಒಂದು ಶೆಡ್ ನಿರ್ಮಿಸಿಕೊಂಡು ವರ್ಕ್ಸ್ ಶಾಪ್ ಮಾಡಲು ಮುಂದಾಗಿದ್ದರು. ಮನೆಯಲ್ಲಿ ಮಗಳು ಗರ್ಭಿಣಿ ಬಿಟ್ಟರೇ ಯಾರು ಇಲ್ಲದ ವೇಳೆ ಜೆಸಿಬಿ ಮೂಲಕ ಶೆಡ್ ಬೀಳಿಸಿದ್ದಾರೆ. ಇದನ್ನು ಖಂಡಿಸಿ ಮನೆ ಮುಂದೆ ಮಾಲೀಕರು ತಮ್ಮ ದುಃಖವನ್ನು ತೋಡಿಕೊಂಡರು.

ಕಮ್ಮರುನಿಸಿಯಾ ಅಂಜುಂ ಅವರು ಮಾಧ್ಯಮದೊಂದಿಗೆ ಮಾತನಾಡಿ, ನನಗೆ ಅಂದು ಮನೆಯೆ ಇರಲಿಲ್ಲ. ನಾನು ತುಂಬ ಬಡವಿ. ಸಚಿವರಿಗೆ ಹೇಳಿ ಶ್ರೀಕಂಠಯ್ಯರವರ ಕಾಲದಲ್ಲಿ ೨೫ ವರ್ಷಗಳ ಹಿಂದೆ ಇದೆ ಮನೆಯಲ್ಲಿ ಸೀಟು ಹಾಕಿಕೊಂಡು ಜೀವನ ನಡೆಸುತ್ತಿದ್ದೇವು. ಮಗನಿಗೆ ವರ್ಕ್ಷ್ ಶಾಪ್ ಮಾಡಿಕೊಡಲೆಂದು ಮನೆಯ ಜಾಗದಲ್ಲೆ ಸಲ್ಪ ಜಾಗದಲ್ಲಿ ಶೆಡ್ ಹಾಕಲಾಗಿತ್ತು.

ಅಪಘಾತವಾಗಿ ನನ್ನ ಮಗನಿಗೆ ಆಪರೇಶನ್ ಆಗಿದ್ದು, ಆತನನ್ನು ನೋಡಲೆಂದು ಪ್ರಯಾಣ ಬೆಳೆಸಿ ಸಕಲೇಶಪುರದ ಬಳಿ ಹೋಗುತ್ತಿದ್ದಾಗ ಈ ವೇಳೆ ಉಪಾಯೋಗಿಸಿಕೊಂಡು ಇರುವ ಮನೆಯನ್ನು ಕೆಡವಿದ್ದು, ನನ್ನ ಮಗಳು ಗರ್ಭಿಣಿ ಹೆಂಗಸು ಇದ್ದಳು. ಈ ವೇಳೆ ಅನೇಕ ಬಾರಿ ಮನವಿ ಮಾಡಿದರೂ ಲೆಕ್ಕಿಸದೇ ನಗರಸಭೆಯವರು ಜೆಸಿಬಿ ಮೂಲಕ ಕೆಡವಿರುವುದಾಗಿ ದೂರಿದರು.

ಈ ಭಾಗದಲ್ಲಿ ಅನೇಕ ಅಕ್ರಮ ಕಟ್ಟಗಳಿವೆ. ಆದರೇ ನಮ್ಮದು ಎಲ್ಲಾ ಹಕ್ಕು ಪತ್ರ ಇದ್ದರೂ ಕೂಡ ನಮ್ಮನ್ನೆ ಗುರಿಯಾಗಿಟ್ಟುಕೊಂಡು ನಮ್ಮ ಮನೆಯ ಶೆಡ್ ಕೆಡವಿದ್ದಾರೆ. ಇಲ್ಲಿನ ೨೭ ಮತ್ತು ೨೮ನೇ ವಾರ್ಡಿನ ನಗರಸಭೆ ಸದಸ್ಯರಿಗೂ ಕೂಡ ಕೇಳಿಕೊಂಡಿದ್ದು, ಯಾವ ಧ್ವೇಷದಿಂದ ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಆದರೇ ಯಾರೋ ಹೇಳಿ ಈರೀತಿ ಮಾಡಿರುವುದಾಗಿ ಗಂಭೀರವಾಗಿ ಆರೋಪಿಸಿದರು.

ಯಾವ ನೋಟಿಸ್ ನೀಡದೇ ಏಕಾಏಕಿ ಬಂದು ಶೇಡ್ ಉರುಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ನಗರಸಭೆ ಆಯುಕ್ತರು ನಮಗೆ ನ್ಯಾಯ ಕೊಡಿಸಿ ಈ ಬಗ್ಗೆ ತನಿಖೆ ನಡೆಸಬೇಕು. ಮೊದಲೇ ಹೇಳಿದ್ದರೇ ಈ ಶೆಡ್ ನಿರ್ಮಾಣ ಮಾಡುತ್ತಿರಲಿಲ್ಲ. ತನಿಖೆಯಲ್ಲಿ ಯಾರಾರು ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಎಲ್ಲಾವುದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನ್ಯಾಯ ನೀಡಬೇಕೆಂದು ನಗರಸಭೆ ಮುಂದೆ ಹೋಗಿ ಮನವಿ ಮಾಡಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಇದೆ ವೇಳೆ ಎಚ್ಚರಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *